ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ ಚಿತ್ತಾರ - ಚುಟುಕು ವಿಚಾರ
ಫೈಬರ್‌ಗ್ಲಾಸ್ ಶಿಲಾಬಾಲಿಕೆಯರು...
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)
ಬೆಂಗಳೂರಿನಲ್ಲಿ (ಪೀಣ್ಯ ಕೈಗಾರಿಕಾ ಪ್ರದೇಶ) ‘ವಿನ್ಯಾಸ’ ಹೆಸರಿನ ಡಿಸೈನ್ ಕಂಪೆನಿಯವರು ನರಸಿಂಹ ಎಂಬ ಕಲಾವಿದನಿಂದ ಮಾಡಿಸುವ ಈ ಫೈಬರ್ ಶಿಲಾಬಾಲಿಕೆಯರು ಬೇಲೂರು-ಹಳೇಬೀಡಿನ ಮೂಲ ಶಿಲ್ಪಗಳಿಗೆ ಯಾವುದೇ ವಿಧದಲ್ಲೂ ಕಡಿಮೆಯಿಲ್ಲ. ವಿಶ್ವಕನ್ನಡ ಸಮ್ಮೇಳನದ ವೇದಿಕೆಯ ಮುಂಭಾಗಕ್ಕೆ ಮಂಟಪದ ರೀತಿಯಲ್ಲಿ (ಎಡ-ಬಲ ಮತ್ತು ಮೇಲ್ಭಾಗಕ್ಕೆ) ಈ ಫೈಬರ್‌ಗ್ಲಾಸ್ ಶಿಲಾಬಾಲಿಕೆಗಳ ಸ್ಲಾಬ್‌ಗಳನ್ನು ಜೋಡಿಸಲಾಗುತ್ತದೆ.

ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ ಅನುದಿನ ಅನುಕ್ಷಣ ಕುಣಿಯುತಲಿ ಶಿಲೆಗಳು ಸಂಗೀತವ ಹಾಡಿದ್ದರೆ... ಇಲ್ಲಿ ಅಕ್ಕ ಸಮ್ಮೇಳನದಲ್ಲಿ ಅಮೆರಿಕನ್ನಡಿಗರೆದುರಲ್ಲಿ ಫೈಬರ್‌ಗ್ಲಾಸ್ ಶಿಲೆಗಳೂ ಸಂಗೀತವ ಹಾಡಲಿವೆ. ಅನುದಿನ ಅನುಕ್ಷಣವಲ್ಲದಿದ್ದರೂ ಸೆಪ್ಟೆಂಬರ್ 1,2,3 ತಾರೀಕುಗಳಂದಂತೂ ಹೌದು!
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected])
ಸಮ್ಮೇಳನದ ಕೌಂಟ್‌ಡೌನ್ ಆರಂಭ : ಇನ್ನು ಕೇವಲ 19 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :











Click it and Unblock the Notifications