ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
ತಾರಾ ಓ ತಾರಾ...
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ಸಮ್ಮೇಳನದ ಅಧಿಕೃತ ವಸತಿವ್ಯವಸ್ಥೆಯಾದ ವಿಂಡ್‌ಹಾಮ್‌ ಹೊಟೆಲ್‌ ಬಾಲ್ಟಿಮೋರ್‌ನ ಎಲೈಟ್‌ ಹೊಟೆಲ್‌ಗಳ ಪೈಕಿ ಒಂದು. ಅಲ್ಲಿಗೆ ವಿವಿಐಪಿಗಳು, ಹಾಲಿವುಡ್‌ ನಟ-ನಟಿಯರು, ಗ್ಲಾಮರ್‌ಜಗತ್ತಿನ ರೂಪದರ್ಶಿಗಳು ಇತ್ಯಾದಿಯೆಲ್ಲ ಬರುತ್ತಿರುತ್ತಾರೆ. ಎಷ್ಟೆಂದರೂ ‘ಚಾರ್ಮ್‌ ಸಿಟಿ’ಗೆ (ಬಾಲ್ಟಿಮೋರ್‌ನ ನಿಕ್‌ನೇಮ್‌) ಚಾರ್ಮಿಂಗ್‌ ಪರ್ಸನಾಲಿಟೀಸ್‌ ಬರೋದು ವಿಶೇಷವೇನಲ್ಲವಷ್ಟೆ.

ಮೊನ್ನೆ ಏಪ್ರಿಲ್‌ನಲ್ಲಿ ಏನಾಯ್ತೆಂದರೆ, ವಿಶ್ವ ಕನ್ನಡ ಸಮ್ಮೇಳನ ಸಂಚಾಲಕರು ಮತ್ತು ಸಮಿತಿಯವರೆಲ್ಲ ವಿಂಡ್‌ಹಾಮ್‌ ಹೊಟೆಲ್‌ನ ಸೌಕರ್ಯ-ಸೌಲಭ್ಯಗಳನ್ನು ನೋಡಿಕೊಂಡು ಬರಲು ಒಂದು ಟೂರ್‌ ಇಟ್ಟುಕೊಂಡಿದ್ದರು. ಆದಿನ ಅವರೆಲ್ಲ ಅಲ್ಲಿ ವಿಂಡ್‌ಹಾಮ್‌ ಹೊಟೆಲ್‌ ದರ್ಶನ ಮಾಡುತ್ತಿರುವಾಗಲೇ ಎದುರಿಗೆ ಮಿಸ್‌ ಅಮೆರಿಕ 2006 ತಾರಾ ಕೊನ್ನರ್‌ ಪ್ರತ್ಯಕ್ಷವಾಗಬೇಕೆ!! ಅವಳೋ ಒಂದು ಕೋಲ್ಗೇಟ್‌ ಇಸ್ಮೈಲ್‌ ಕೊಟ್ಟು ಹೈ ಎಂದು ಇವರೆಲ್ಲರತ್ತ ಕೈಸನ್ನೆ ಬೇರೆ ಮಾಡಿದಳು!

Tara Conners smile flattens WKC committee members

ಆನಂದಪರವಶರಾದ ಕೆಲವು ಸಮಿತಿಸದಸ್ಯರು ಅಣ್ಣಾವ್ರ ಹಾಡಾದ ’ತಾರಾ ಓ ತಾರಾ...’ ಗುನುಗುನಿಸಲಾರಂಭಿಸಿದರಂತೆ!

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 20 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+