ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಾಹಿತ್ಯ ರಸಗವಳ
ಸೆಪ್ಟೆಂಬರ್ 1,2,3ರಂದು ಬಾಲ್ಟಿಮೋರ್‌ನಲ್ಲಿ ನಡೆಯಲಿರುವ ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಆಸಕ್ತಿಕರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ‘ಕುವೆಂಪು ಸ್ಮಾರಕ’ ಸಮಾನಾಂತರ ವೇದಿಕೆಯಲ್ಲಿ ಆರು ಮತ್ತು ‘ಡಾ।ರಾಜ್‌ಕುಮಾರ್ ಸ್ಮಾರಕ’ ಮುಖ್ಯವೇದಿಕೆಯಲ್ಲಿ ಒಂದು ಕಾರ್ಯಕ್ರಮ - ಹೀಗೆ ಒಟ್ಟು ಏಳು ವಿವಿಧ ಅಧಿವೇಶನಗಳು ಸಾಹಿತ್ಯಸರಸ್ವತಿಯ ಆರಾಧನೆಯಾಗಿ ಸಮ್ಮೇಳನದಲ್ಲಿ ಯೋಜಿತವಾಗಿವೆ.
ಸಾಹಿತ್ಯ ವಿಭಾಗದ ಕಾರ್ಯಕ್ರಮಗಳ ಸ್ಥೂಲ ಪರಿಚಯ ಮತ್ತು ವೇಳಾಪಟ್ಟಿ ಹೀಗಿದೆ :
ಸೆಪ್ಟೆಂಬರ್ 2, ಶನಿವಾರದ ಕಾರ್ಯಕ್ರಮಗಳು
(1) ಸಾಹಿತ್ಯಗೋಷ್ಠಿ ‘‘ಸಾಹಿತ್ಯ ಮತ್ತು ಸಾಹಿತಿಗಳು’’ (ಶನಿವಾರ ಬೆಳಿಗ್ಗೆ 10 ರಿಂದ 11)
- ಅಧ್ಯಕ್ಷತೆ: ವಿವೇಕ್ ರೈ (ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳು)
- ಸ್ವಾಗತ ಮತ್ತು ಪರಿಚಯ (5 ನಿಮಿಷಗಳು)
- ತೀನಂಶ್ರೀ ಮತ್ತು ಡಿ.ಎಲ್.ಎನ್ ಶತಾಬ್ದಿಯ ಸ್ಮರಣೆ (7 ನಿಮಿಷಗಳು)- ಪ್ರೊ। ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ
- ಟಿ. ಸುನಂದಮ್ಮ ನೆನಪು (6 ನಿಮಿಷಗಳು)- ಸರೋಜಾ ನಾರಾಯಣ ರಾವ್
- ಆಧುನಿಕ ಕನ್ನಡ ಕವಯಿತ್ರಿಯರು (6 ನಿಮಿಷಗಳು)- ಉಷಾದೇವಿ (ಕುಲಶೇಖರಿ)
- ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತದ ಪ್ರಭಾವ (6 ನಿಮಿಷಗಳು)- ಲೀಲಾ ಪ್ರಕಾಶ್
- ಶಾಲೆಗಳಲ್ಲಿ ಕನ್ನಡ ಕಲಿಕೆ (6 ನಿಮಿಷಗಳು)- ಚಂದ್ರಶೇಖರ ಪಾಟೀಲ
- ಮತಿಘಟ್ಟ ಕೃಷ್ಣಮೂರ್ತಿ ಶ್ರದ್ಧಾಂಜಲಿ (5 ನಿಮಿಷಗಳು)- ವಿಮಲಾ ರಾಜಗೋಪಾಲ್
- ಎಸ್.ಕೆ.ಕರೀಂಖಾನ್ ನಮನ (5 ನಿಮಿಷಗಳು)- ಶಿಕಾರಿಪುರ ಹರಿಹರೇಶ್ವರ
- ಅಧ್ಯಕ್ಷ ಭಾಷಣ ‘‘ಕನ್ನಡಕ್ಕೆ ಹಂಪಿ ವಿಶ್ವವಿದ್ಯಾಲಯದ ಕೊಡುಗೆ’’ (7 ನಿಮಿಷಗಳು)
- ವಂದನಾರ್ಪಣೆ ಮತ್ತು ಸಮಾರೋಪ (5 ನಿಮಿಷಗಳು)
- ಅಧ್ಯಕ್ಷತೆ: ಚೆನ್ನವೀರ ಕಣವಿ
- ಸ್ವಾಗತ ಮತ್ತು ಪರಿಚಯ (3 ನಿಮಿಷಗಳು)
- ಕವನ ವಾಚನ- ಭಾರತದಿಂದ ಬಂದ ಕವಿಗಳು (15 ನಿಮಿಷಗಳು)- ಅಮೇರಿಕದ ಮತ್ತು ಇತರ ಕವಿಗಳು (30 ನಿಮಿಷಗಳು) ಅಧ್ಯಕ್ಷರಿಂದ ಕವನವಾಚನ(8 ನಿಮಿಷಗಳು) ವಂದನಾರ್ಪಣೆ ಮತ್ತು ಸಮಾರೋಪ (3 ನಿಮಿಷಗಳು)
- ಆಹ್ವಾನಿತ ಸಾಹಿತಿ/ಕವಿಗಳ ಪರಿಚಯ ಮತ್ತು ಅವರಿಗೆ ಹೂಗುಚ್ಛ ಅರ್ಪಣೆ (20 ನಿಮಿಷಗಳು)
- ಸಮ್ಮೇಳನದ ಸ್ಮರಣಸಂಚಿಕೆಗಳ ಮತ್ತು ಇತರ ಪುಸ್ತಕಗಳ ಔಪಚಾರಿಕ ಬಿಡುಗಡೆ (30 ನಿಮಿಷಗಳು)
- ಸಮಾರೋಪ (10 ನಿಮಿಷಗಳು)
- ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬರವಣಿಗೆ
- ನಿರ್ವಹಣೆ: ಜಯರಾಮ ಉಡುಪ
- ಭಾಗವಹಿಸುವವರು: ಎಚ್.ವೈ. ರಾಜಗೋಪಾಲ್, ಎಚ್.ಕೆ. ಚಂದ್ರಶೇಖರ್, ರಂಗಾಚಾರ್, ನಾಗ ಐತಾಳ ಮತ್ತು ಮೈ.ಶ್ರೀ.ನಟರಾಜ
- ಅಧ್ಯಕ್ಷತೆ: ಜಿ. ಎಸ್. ಅಮೂರ
- ಕಾರ್ಯಕ್ರಮ:
- ಸ್ವಾಗತ ಮತ್ತು ಪರಿಚಯ (5 ನಿಮಿಷಗಳು)
- ಪುಸ್ತಕಗಳ ಪರಿಚಯ (30-40 ನಿಮಿಷಗಳು)
- (ಸಮ್ಮೇಳನದ ಸ್ಮರಣ ಸಂಚಿಕೆ ‘ಸುವರ್ಣವಾಹಿನಿ’, ಸಮ್ಮೇಳನದ ಇತರ ಪ್ರಕಟಣೆಗಳಾದ ‘ಕಥಾವಾಹಿನಿ’, ‘ತಂತ್ರ-ವಿಜ್ಞಾನವಾಹಿನಿ’, ಮತ್ತು ಕಾದಂಬರಿ ಸ್ಪರ್ಧೆಯಲ್ಲಿ ಗೆದ್ದ ‘ಭರದ್ವಾಜ’ ಹಾಗೂ ಇನ್ನೂ ಅನೇಕ ಪುಸ್ತಕಗಳು)
- ಭಾಗವಹಿಸುವವರು: (1) ಮೈ.ಶ್ರೀ. ನಟರಾಜ (2) ಸಂಜೀವ ಮನಗೋಳಿ (3) ಶ್ರೀವತ್ಸ ಜೋಶಿ (4) ಶಶಿಕಲಾ ಚಂದ್ರಶೇಖರ (5) ರವಿ ಹರಪನಹಳ್ಳಿ (6) ಕೆ. ಎಲ್. ವಸಂತ್ (7) ಶ್ರೀನಿವಾಸ ಭಟ್ (8) ನಾಗ ಐತಾಳ (9) ಜಯರಾಮ ಉಡುಪ (10) ಜಿ.ಅಶ್ವತ್ಥನಾರಾಯಣ. (11) ರಾಮಚಂದ್ರ ಹೆಗ್ಡೆ (12) ಸತೀಶ್ ಕುಮಾರ್ (13) ನಂದಳಿಕೆ ಬಾಲಚಂದ್ರ (14) ಶಿಕಾರಿಪುರ ಹರಿಹರೇಶ್ವರ (15) ನಾಗಲಕ್ಷ್ಮಿ ಹರಿಹರೇಶ್ವರ (16) ಸಂಪನ್ನ ಮುತಾಲಿಕ (17) ಸರೋಜಾ ನಾರಾಯಣ ರಾವ್ (18) ಮಾಯಾ ಹರಪನಹಳ್ಳಿ (19) ಸುಕುಮಾರ್ ರಘುರಾಂ (20) ಲೀಲಾ ಪ್ರಕಾಶ್ ಮತ್ತು (21) ಲಕ್ಷ್ಮೀನಾರಾಯಣ ಭಟ್ಟ ಮೊದಲಾದವರು.
- ಅಧ್ಯಕ್ಷರ ಭಾಷಣ - ಸ್ಪರ್ಧೆಯಲ್ಲಿ ಗೆದ್ದ ‘ಭರದ್ವಾಜ’ ಕಾದಂಬರಿಯ ಒಳನೋಟ (10 ನಿಮಿಷಗಳು)
- ವಂದನಾರ್ಪಣೆ ಮತ್ತು ಸಮಾರೋಪ (5 ನಿಮಿಷಗಳು)
- ‘‘ಮಾಧ್ಯಮ ಪ್ರಪಂಚ - ಅಂದು, ಇಂದು, ಮುಂದು’’
- ಅಧ್ಯಕ್ಷತೆ: ವಿಶ್ವೇಶ್ವರ ಭಟ್ (ಪ್ರಧಾನ ಸಂಪಾದಕರು - ವಿಜಯ ಕರ್ನಾಟಕ)
- ಭಾಗವಹಿಸುವವರು : ಪತ್ರಿಕೆ, ದೂರದರ್ಶನ ಮತ್ತು ಜಾಲ ಮಾಧ್ಯಮಗಳನ್ನು ಪ್ರತಿನಿಧಿಸುವ ಅತಿಥಿಗಳು
- ಚಿದಾನಂದ ರಾಜಘಟ್ಟ (ಟೈಮ್ಸ್ ಆಫ್ ಇಂಡಿಯ) (2) ಬಿ.ಎಮ್. ಹನೀಫ (ಪ್ರಜಾವಾಣಿ) (3) ಪೊನ್ನಪ್ಪ (ಪ್ರಜಾವಾಣಿ) (4) ಶಾಮಸುಂದರ್ (ದಟ್ಸ್ ಕನ್ನಡ.ಕಾಮ್) (5)ಮಹೇಶ್ ಜೋಶಿ (ಬೆಂಗಳೂರು ದೂರದರ್ಶನ)
- ಸ್ವಾಗತ, ಪರಿಚಯ (5 ನಿಮಿಷಗಳು)
- ತಲಾ ಐದು ನಿಮಿಷಗಳಂತೆ ಐದು ಮಂದಿ (25 ನಿಮಿಷಗಳು)
- ಪ್ರಶ್ನೋತ್ತರಗಳು (10-15 ನಿಮಿಷಗಳು)
- ಅಧ್ಯಕ್ಷ ಭಾಷಣ (10 ನಿಮಿಷಗಳು)
- ವಂದನಾರ್ಪಣೆ ಮತ್ತು ಸಮಾರೋಪ (5 ನಿಮಿಷಗಳು)
- ಅತಿಥಿಗಳು: ಎಸ್. ಎಲ್. ಭೈರಪ್ಪ
- ಸ್ವಾಗತ ಮತ್ತು ಪರಿಚಯ (5 ನಿಮಿಷಗಳು)
- ಪ್ರಶ್ನೋತ್ತರ (75 ನಿಮಿಷಗಳು)
- ವಂದನಾರ್ಪಣೆ ಮತ್ತು ಸಮಾರೋಪ (10 ನಿಮಿಷಗಳು)
ಡಾ.ಮೈ.ಶ್ರೀ.ನಟರಾಜ [email protected]
ಶ್ರೀವತ್ಸ ಜೋಶಿ [email protected]
(4ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಾಹಿತ್ಯ ಸಮಿತಿಯ ಪರವಾಗಿ)











Click it and Unblock the Notifications