ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
ಕಬ್ಬಿಗರು ಹರಿಸಲಿರುವ ಕಬ್ಬಿನರಸ...
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ಭಾರತಜನನಿಯ ತನುಜಾತೆಯಾದ ಕರ್ನಾಟಕವು ‘‘ಕಬ್ಬಿಗರುದಿಸಿದ ಮಂಗಳಧಾಮ... ಕವಿಕೋಗಿಲೆಗಳ ಪುಣ್ಯಾರಾಮ’’ ಎಂಬ ವಿಷಯ ಎಲ್ಲರಿಗೂ ಗೊತ್ತಿದ್ದದ್ದೇ. ಮತ್ತೆ ಸ್ವರ್ಣಸಂಭ್ರಮದ ವಿಶ್ವ ಕನ್ನಡ ಸಮ್ಮೇಳನ ಕಬ್ಬಿಗರು-ಕವಿಕೋಗಿಲೆಗಳು ಇಲ್ಲದೆ ಜರುಗುವುದಾದರೂ ಎಂತು? ಈ ಸಮ್ಮೇಳನದಲ್ಲಿ ಕಬ್ಬಿನ ರಸಧಾರೆಗಿಂತಲೂ ಮಿಗಿಲೆನಿಸುವಷ್ಟು ಕಬ್ಬಿಗರ ಸಾಹಿತ್ಯರಸ ಹರಿಯಲಿದೆ!

ಸಮಾನಾಂತರ ವೇದಿಕೆಯಲ್ಲಿ ಆರು ಮತ್ತು ಮುಖ್ಯವೇದಿಕೆಯಲ್ಲಿ ಒಂದು - ಹೀಗೆ ಏಳು ವಿವಿಧ ಅಧಿವೇಶನಗಳು (ಸೆಷನ್ಸ್‌) ಸಾಹಿತ್ಯಸಂಬಂಧದ್ದೇ ಇವೆ. ಅವುಗಳ ರೂಪುರೇಷೆಯನ್ನು ಸಮ್ಮೇಳನಸಮಿತಿಸದಸ್ಯರ ಸಭೆಯಲ್ಲಿ ಪ್ರಕಟಿಸಿ ಮಾತಾಡುತ್ತಿದ್ದಾರೆ ಡಾ।ಮೈ.ಶ್ರೀ.ನಟರಾಜ. ಅವರ ಟಿ-ಶರ್ಟ್‌ ಮೇಲೆ ಇರೋದು ಕನ್ನಡದ ಏಳು ಜ್ಞಾನಪೀಠಿಗಳ ಚಿತ್ರ ಎಂಬುದು ನಿಮ್ಮ ವಿಶೇಷ ಗಮನಕ್ಕೆ. ನೀವು ಫೋಟೊಗಳನ್ನು ಇನ್ನೂ ಸೂಕ್ಷ್ಮವಾಗಿ ನೋಡುವವರಾದರೆ, ನಟರಾಜ ಅವರ ಬಲಹಸ್ತದ ಭಂಗಿಗೂ ಗೋಡೆ ಮೇಲಿರುವ ನಟರಾಜನ ಪಟದಲ್ಲಿನ ಅಭಯಹಸ್ತದ ಭಂಗಿಗೂ ಇರುವ ಸಾಮ್ಯವನ್ನೂ ಗಮನಿಸಿರುತ್ತೀರಿ!

M S Nataraja

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 21 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+