ಅಕ್ಕ ಕಾವೇರಿ ಕರೆ


ಅಕ್ಕ ಕಾವೇರಿ ಕರೆ
(ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ವಾಷಿಂಗ್‌ಟನ್‌ ಡಿ. ಸಿ. ಕ್ಷೇತ್ರದಲ್ಲಿ ಕಾವೇರಿ ಕನ್ನಡ ಕೂಟದ ಆಶ್ರಯದಲ್ಲಿ ಸೆಪ್ಟೆಂಬರ್‌ 1, 2, ಮತ್ತು 3ರಂದು ಅಮೆರಿಕನ್ನಡಿಗರಾದ ನಾವು ಆಚರಿಸುತ್ತೇವೆ. ಈ ಸಮ್ಮೇಳನಕ್ಕೆ ತಮ್ಮನ್ನು ಆಹ್ವಾನಿಸಿ ಬರೆದ ಪದ್ಯವನ್ನು ಒಪ್ಪಿಸಿಕೊಳ್ಳಿ.)
World Kannada Conference 2006
Ravi Harapannahalli
  • ರವಿ ಹರಪನಹಳ್ಳಿ, ಸಿಲ್ವರ್‌ ಸ್ಪ್ರಿಂಗ್‌, ಮೇರಿಲ್ಯಾಂಡ್‌
    [email protected]
ಕಾದಿಹಳು ಕಾತುರದಿ ಕಾವೇರಿ ಭಾವನದಿ
ಬರಮಾಡೆ ಕರುನಾಡ ಬಾಂಧವರ ವೈಭವದಿ
ಬರೆದಿಹಳು ಓಲೆಯ ಆದರವ ಹೊನ್ನಿ
ಕರೆದಿಹಳು ಸಮ್ಮೇಳನಕೆ ವಿಶ್ವವೇ ಬನ್ನಿ

ಸುತ್ತೋಣ ಅಮೆರಿಕೆಧಾನಿಯನೆ ಬನ್ನಿ
ಮುತ್ತೋಣ ಅಮೇರಿಕನ್ನಡಿಗರನೆ ಬನ್ನಿ
ಎತ್ತೋಣ ಹಿರಿಮೆಯ ಕನ್ನಡವ ಬನ್ನಿ
ಕೆತ್ತೋಣ ಗೊಮ್ಮಟನ ಪ್ರತಿಮೆಯನೆ ಬನ್ನಿ

ಹಾಡೋಣ ಕನ್ನಡದ ರಾಗವನೆ ಬನ್ನಿ
ಕುಣಿಯೋಣ ಕನ್ನಡದ ಮಿಡಿತಕ್ಕೆ ಬನ್ನಿ
ಸವಿಯೋಣ ಕನ್ನಡದ ನಳಪಾಕ ಬನ್ನಿ
ಬೆಳೆಸೋಣ ಕನ್ನಡದ ಬಾಂಧವ್ಯ ಬನ್ನಿ

ಶರಣರು ದಾಸರು ಕವಿ ಬರೆದ ಹಾಡು
ಉದಯವಾಯಿತು ಚೆಲುವು ಕನ್ನಡನಾಡು
ಗಡಿದಾಟಿ ಹೊರನಾಡಿನಲ್ಲೂ ನಮ್ಮ ಬೀಡು
ನಡೆ ನುಡಿ ಕ್ರಿಯಾಶೀಲನೆ ನಮ್ಮ ಪಾಡು

ಮಲೆನಾಡಿನಿಂಪಿನ ಕುವೆಂಪುರನ್ನು
ನಾದಶ್ರಾವಣ ಬಿಂದು ಬೇಂದ್ರೆಯರನ್ನು
ಯಕ್ಷ ಮೂಕಜ್ಜಿಯ ಕಾರಂತರನ್ನು
ಚಿಕವೀರ ರಾಜೇಂದ್ರ ಮಾಸ್ತಿಯರನ್ನು

ಭರತ ಸಿಂಧು ರಶ್ಮಿ ಗೋಕಾಕರನ್ನು
ದಿವ್ಯ ಸಂಸ್ಕಾರ ಮೂರ್ತಿ ಅನಂತರನ್ನು
ರಂಗ ಮಂಚಕೆ ಸೆಳೆದ ಕಾರ್ನಾಡರನ್ನು
ಜ್ಞಾನಿ ಸರ್ವರನರಿಯೆ ತಾವಿಲ್ಲಿ ಬನ್ನಿ

ಕೋಲಾಟ ಬಯಲಾಟ ಕೊರವಂಜಿ ಕುಣಿತ
ತಾಳ ಲಯ ನಾದ ಸಂಗೀತ ಅಗಣಿತ
ರಂಗಿನಲಿ ರಂಗಾಟ ನೋಡೋಣ ಬನ್ನಿ
ಅಂಬಾರಿಯೇರಿ ತಾವ್‌ ಸಾದರದಿ ಬನ್ನಿ

ಒಳನಾಡು ಹೊರನಾಡು ಕರುನಾಡ ನಾಡಿ
ಒಳನುಡಿ ಹೊರನುಡಿ ಕನ್ನಡವ ಹಾಡಿ
ಕಟ್ಟಿಹೆವು ಸೇತುವೆ ಅಮೇರಿಕೆಗೆ ಬನ್ನಿ
ಸುವರ್ಣ ಕರ್ನಾಟಕವ ಇಲ್ನೋಡ ಬನ್ನಿ


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+