ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ ಚಿತ್ತಾರ - ಚುಟುಕು ವಿಚಾರ
ಮಕ್ಕಳಿಂದಲೂ ಅಕ್ಕರೆಯ ಆಹ್ವಾನ!
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)
‘ನೀವ್ಯಾವ ಕಮಿಟಿಯಲ್ಲಿದ್ದೀರಿ... ’ ಅನ್ನೋದ್ರಿಂದ ಹಿಡಿದು ‘ಇಂಡಿಯಾದಿಂದ ಬರುವಾಗ ಎಷ್ಟು ಹೊಸ ಸೀರೆ ತಗೊಂಡು ಬಂದ್ರಿ...’ ವರೆಗೆ; ‘ನಾಟಕ ಪ್ರಾಕ್ಟೀಸ್ ಹೇಗ್ ನಡೀತಾ ಇದೆ...’ ಯಿಂದ ಹಿಡಿದು ‘ನಾಲ್ಕೂವರೆ-ಐದುಸಾವಿರವೂ ಆಗ್ಬಹುದಂತೆ ಕ್ರೌಡು...’ ಎನ್ನುವ ತನಕವೂ ಸಮ್ಮೇಳನ ಬಗ್ಗೆಯೇ ಮಾತು, ಕುತೂಹಲ.

ನಮ್ಮೂರಲ್ಲೇ ಸಮ್ಮೇಳನ ಆಗ್ತಿರೋದು ಅಂತ ವಾಷಿಂಗ್‌ಟನ್ ಸರಹದ್ದಿನ ಕನ್ನಡಿಗ ಮಕ್ಕಳಿಗೂ ಸಂಭ್ರಮ. ಸಮ್ಮೇಳನದ ಜಾಹೀರಾತಿನ ಪೋಸ್ಟರ್‌ಗಳ ಮೂಲಕ ಪುಟ್ಟಪುಟ್ಟ ಮಕ್ಕಳೂ ಸಹ ಪಿಕ್‌ನಿಕಾರ್ಥಿಗಳನ್ನು ಸಮ್ಮೇಳನಾರ್ಥಿಗಳಾಗಿ ಪರಿವರ್ತಿಸುವಲ್ಲಿ ತೊಡಗಿದ್ದರು. ಈ ಚಿತ್ರದಲ್ಲಿ ಪೋಸ್ಟರ್ ಹಿಡಿದು ಪೋಸು ಕೊಟ್ಟಿರುವ ಈ ಪುಟಾಣಿಗಳನ್ನು ನೋಡಿ!
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected])
ಸಮ್ಮೇಳನದ ಕೌಂಟ್‌ಡೌನ್ ಆರಂಭ : ಇನ್ನು ಕೇವಲ 22 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :












Click it and Unblock the Notifications