‘ಭಾರತದಲ್ಲಿ ಅನುಕರಿಸುವ ವಾಸ್ತುವೇ ಬೇರೆ, ಅಮೆರಿಕಾದ್ದೇ ಬೇರೆ’
ಬಾಲ್ಟಿಮೋರ್(ಅಮೆರಿಕ), ಸೆ. 2 - ವಾಸ್ತು ಬಗ್ಗೆ ಅಮೆರಿದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ತಪ್ಪು ಭಾವನೆ ನೆಲೆಸಿದೆ. ಇದು ಅನೇಕ ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಸರಿಯಾದ ತಿಳಿವಳಿಕೆ ಅಗತ್ಯ ಎಂದೆ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ದೈವಜ್ಞ ಸೋಮಯಾಜಿ ಹೇಳಿದರು.
‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮ ಗೋಷ್ಠಿಯಲ್ಲಿ ಭಾಗವಹಿಸಿ ಮಾತಾಡಿದ ಅವರು, ವಾಸ್ತು ಬದಲಿಸಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಅನುಕರಿಸುವ ವಾಸ್ತುವೇ ಬೇರೆ. ಇಲ್ಲಿನದೇ ಬೇರೆ. ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದರು.
ಮೊದಲು ಅಮೆರಿಕ ಕನ್ನಡಿಗರು ಮನೆ ಖರೀದಿಸುವಾಗ ವಾಸ್ತು ಬಗ್ಗೆ ಯೋಚಿಸುತ್ತಿರಲಿಲ್ಲ. ಈಗ ಏಕಾಏಕಿ ಈ ಕುರಿತು ಚಿಂತೆ ಆರಂಭವಾಗಿದೆ. ವಾಸ್ತು ಕುರಿತು ಭಾರತದಲ್ಲಿ ಪರಿಗಣಿಸುವ ಅಂಶಗಳನ್ನೆಲ್ಲ ಇಲ್ಲಿಯೂ ಅನ್ವಯವಾಗಬೇಕಿಲ್ಲ ಎಂದು ಸೋಮಯಾಜಿ ಹೇಳಿದರು.
ಈಗ ನಿರ್ಮಿಸಿರುವ ಮನೆ, ಕಟ್ಟಡಗಳ ಬಗ್ಗೆ, ಅದರ ವಿನ್ಯಾಸ, ಅಂದ, ಡಿಸೈನ್ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದ ಅವರು, ಮನೆಯನು ಕೆಡವದೇ ಕೆಲವು ಆಂತರಿಕ ಮಾರ್ಪಾಟುಗಳಿಂದ ವಾಸ್ತು ದೋಷಗಳೇನಾದರೂ ಇದ್ದರೆ ಸರಿಪಡಿಸಬಹುದು ಎಂಬ ಸಲಹೆ ನೀಡಿದರು.
ಯಾರದೋ ಮಾತು ಕೇಳಿ ವಾಸ್ತು ಬಗ್ಗೆ ತಪ್ಪು ಕಲ್ಪನೆಯಿರಿಸಿಕೊಂಡು ಕೊರಗುವ ಅಗತ್ಯವಿಲ್ಲ. ಭಾರತದಲ್ಲಿ ಆಚರಣೆಯಲ್ಲಿರುವ ವಾಸ್ತು ನಿಯಮ ಹಾಗೂ ಸೂತ್ರ ಇಲ್ಲಿ ಅನ್ವಯವಾಗದು. ಇದನ್ನು ಬೇರೆ ದೃಷ್ಟಿಕೋನದಲ್ಲಿಯೇ ನೋಡಬೇಕು. ಅಂತರ್ಗತ ಸಮಸ್ಯೆಯಲ್ಲಿಯೇ ಪರಿಹಾರ ನೋಡಬೇಕು. ಅದು ಸಾಧ್ಯವಿದೆ ಎಂದು ಸೋಮಯಾಜಿ ಹೇಳಿದರು.
ವಾಸ್ತು ಕುರಿತು ಯೋಚಿಸುವಾಗ ವಾಸ್ತವಾಂಶವನ್ನು ಸಹ ಅರಿಯಬೇಕು. ಉತ್ತಮ ವಾಸ್ತು ನಿಮಗೆ ಯಾವತ್ತು ಉತ್ತಮ ಪರಿಣಾಮವನ್ನೇ ಉಂಟು ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ನುಡಿ ಹಬ್ಬದ ಚಿತ್ರಪಟಗಳು :
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications