ಚಪ್ಲೀ ಹೆಂಗ ಮರ್ಯಾಕ ಆಕ್ಕತಿ?
ಕವಿ ಚಂದ್ರಶೇಖರ ಪಾಟೀಲರು ತಮ್ಮಹನಿಗವನ ಹರಿಯ ಬಿಟ್ಟಾಗ ವಿಶ್ವಕನ್ನಡ ಸಮ್ಮೇಳನ ನಡೆಯುತ್ತಿರುವ ಬಾಲ್ಟಿಮೋರ್ ಸಭಾಂಗಣದ ತುಂಬೆಲ್ಲ ನಗೆಯ ಹನಿ. ಕವಿಗೋಷ್ಠಿಯಲ್ಲಿ ಚಂಪಾ ಓದಿದ ಆರು ಚುಟುಕಗಳು ಎಲ್ಲರ ಮುಖಗಳಲ್ಲೂ ನಗೆಯ ಸಿಂಚನ ಮೂಡಿಸಿದವು.
ಅದರಲ್ಲೂ ‘ಚಪ್ಲೀ ಹೆಂಗ ಮರ್ಯಾಕ ಆಕ್ಕತಿ?’ ನೆನೆಸಿಕೊಂಡು ಈಗಲೂ ಕೆಲವರು ನಗುತ್ತಿದ್ದಾರೆ! ಕವನ ಹೀಗಿದೆ -
ನಮ್ಮ ಮ್ಯಾರೇಜ್‌ಡೇ ಕ್ಕೆ
‘ನನಗೇನು ತಗೋತಿ’ ಎಂದೆ.
ನನ್ನ ಹೆಂಡತಿ ಪ್ರೀತಿಯಿಂದ
‘ನಿಮಗ ಚಪ್ಪಲಿ ತಗೋತೀನಿ’ ಅಂದ್ಲು.
ತಗೋ ಅಂದೆ. ತಗೊಂಡಳು.
ಆಕೀ ಪ್ರೀತಿ ಅಲ್ಲಿಗೆ ನಿಲ್ಲಲಿಲ್ಲ
ಮ್ಯಾಲಿಂದ ಮ್ಯಾಲೆ
ಚಪ್ಪಲಿ ತಗೊಂಡಿದ್ದು ನೆನಪೈತಿಲ್ಲ?
ಅಂತ ಪ್ರೀತೀಲಿ ತಿವ್ಯಾಕ ಹತ್ತಿದ್ಲು.
ಕಡೀಗೆ ನಾ ಹೇಳಿದೆ -
ಮಾರಾಯ್ತಿ, ಚಪ್ಲೀ ಹೆಂಗ ಮರ್ಯಾಕ ಆಕ್ಕತಿ?
ಚಪ್ಲಿ ನೋಡಿದಾಗಲೆಲ್ಲ ನನಗೆ ನಿನ್ನ ಮಾರೀನ, ನೋಡಿದಂಗಾಕ್ಕತಿ...
ಅನಂತರ ಚಂಪಾ ತಮ್ಮ ‘ಕೆ’ ಕವನ ಓದಿದರು -
‘‘ಈಕೆ?’’
‘‘ಓಕೆ’’
‘‘ಆಕೆ’’
‘‘ಜೋಕೆ’’.
ಈ ಪದ್ಯ ಕೇಳಿದ ಮಂದಿ ನಕ್ಕುನಕ್ಕು ಸುಸ್ತಾದರು. ಕೂಡಲೇ ಚಂಪಾ ಇನ್ನೊಂದು ಬಾಣ ಹೆಸೆದರು. ಆ ಹನಿಗವನದ ಹೆಸರು ‘ಸೀತಾಯಣ’ -
ಹೋಗೋ ಮುಂಚೆ
ಲಕ್ಷ್ಣಣ ಗೆರಿ ಹೊಡೆದ
ಆ ಮ್ಯಾಲೆ ರಾವಣ ಲೈನ್ ಹೊಡೆದ
ನುಡಿ ಹಬ್ಬದ ಚಿತ್ರಪಟಗಳು :
ಕೂತಲ್ಲಿಯೇ ಸಮ್ಮೇಳನ ಕಾಣಿರಿ!
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |












Click it and Unblock the Notifications