...ಎದೆ ಝಲ್ ಎಂದಿದೆ !?
ಐ.ಎಂ.ವಿಠ್ಠಲಮೂರ್ತಿ (ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಕಾರ್ಯದರ್ಶಿ)ಯವರಿಗೆ ಬಾಲ್ಟಿಮೋರ್ ಕನ್ವೆನ್ಷನ್ ಸೆಂಟರ್‌ನ ಭವ್ಯತೆಯನ್ನು ತೋರಿಸುತ್ತಿರುವ ಸಮ್ಮೇಳನ ಸಂಚಾಲಕ ಸುರೇಶ್ ರಾಮಚಂದ್ರ, ಸಭಾಂಗಣದ ಭವ್ಯತೆಯನ್ನಷ್ಟೇ ಅಲ್ಲ - ಹಮ್ಮಿಕೊಂಡಿರುವ ಸಮ್ಮೇಳನದ ಅಗಾಧತೆಯನ್ನು ಊಹಿಸಿ 'ಎದೆ ಝಲ್ ಎಂದಿದೆ..." ಎನ್ನುತ್ತಿರುವಂತಿದೆ!
ಆದರೆ ಅದು ಸುರೇಶ್ ಅವರ ಕನ್ನಡಪ್ರೀತಿಯ ರೋಮಾಂಚನವೇ ಹೊರತು ಅಳುಕಿನ ಒಳದನಿಯಲ್ಲ! ಬಹುಶಃ ಎದೆಮುಟ್ಟಿ ಎದೆತಟ್ಟಿ ತನ್ನ ಕನ್ನಡಾಭಿಮಾನವನ್ನು ವಿಠ್ಠಲಮೂರ್ತಿಗಳೆದುರು ಅವರು ಅರುಹುತ್ತಿರಬಹುದು.

ಸಮ್ಮೇಳನ ತಯಾರಿಯ ಮೀಟಿಂಗುಗಳಲ್ಲಿ, ಟೆಲಿಕಾನ್ಫರೆನ್ಸ್‌ಗಳಲ್ಲಿ, ಅಥವಾ ಈಮೈಲ್ ವಿನಿಮಯಗಳಲ್ಲಾಗಲೀ - ಬಿಸಿಬಿಸಿ ಚರ್ಚೆಗಳು, ವಾದವಿವಾದಗಳು, 'ನನ್ನ ಕುದುರೆಗೆ ಮೂರೇ ಕಾಲು..." ಎಂಬರೀತಿಯ ಮೊಂಡುವಾದಗಳು ಹೀಗೆ ಎಂಥ ಬಿಸಿಯೇರಿದರೂ ಅದ್ಭುತವಾದ ಸೆನ್ಸ್-ಆಫ್-ಹ್ಯೂಮರ್‌ನಿಂದ, ಸಮಯೋಚಿತವಾದ ಹಾಸ್ಯಚಟಾಕಿಯಿಂದ ಅಥವಾ ಒಂದು ಆಶುಕವಿತೆಯಿಂದ ಅದನ್ನು ಏಕ್‌ದಂ ತಿಳಿಗೊಳಿಸಬಲ್ಲ 'ಕೂಲ್" ವ್ಯಕ್ತಿ ಸುರೇಶ್ ರಾಮಚಂದ್ರ.
ಹೆಸರಲ್ಲಿರುವ 'ಚಂದ್ರ"ನ ತಂಪು ಸ್ವಭಾವದಲ್ಲೂ ಹಾಸುಹೊಕ್ಕಾಗಿರುವ ಅವರು ಇದಕ್ಕಿಂತ ಹತ್ತುಪಟ್ಟು ದೊಡ್ಡ ಯೋಜನೆಯನ್ನೂ ಕೂಲ್ ಆಗಿ ನಿಭಾಯಿಸಬಲ್ಲರು; ಅದರ ಯಶೋಗಾಥೆಯನ್ನು ಎದೆ ತುಂಬಿ ಹಾಡಲೂ ಬಲ್ಲರು. ಏಕೆಂದರೆ ಕನ್ನಡವೆನೆ ಕುಣಿದಾಡುವ ಎದೆಯೇ ಅವರದೂ!
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected]












Click it and Unblock the Notifications