ಶುಭವಾಗಲಿ ನಿಮಗೆ, ಸಿರಿಗನ್ನಡಂ ಗೆಲ್ಗೆ!

ಶ್ಯಾಮ್‌ ಕಿಶೋರ್‌, ನ್ಯೂಜಿಲಂಡ್‌
[email protected]

ನಮ್ಮದೇ ನೆಲದಲ್ಲಿ, ಮಾತನಾಡಲು ನಮ್ಮ ಕನ್ನಡದಲ್ಲಿ,
ಹಿಂಜರಿಯುವ ಪರಿಸ್ಥಿತಿ ಬಂದೊದಗಿರುವಾಗ ನಮಗಿಲ್ಲಿ,
ಅಮೆರಿಕೆಯಲ್ಲಿ ಕನ್ನಡದ ಕಹಳೆಯೂದುತ್ತಿರುವ ಬಂಧುಗಳೆ,
ಶುಭಾಶಯಗಳು, ಇದೋ ನಮ್ಮ ಮನದುಂಬಿದ ಚಪ್ಪಾಳೆ!

'ಹಿತ್ತಲ ಗಿಡ ಮದ್ದಲ್ಲ" ಎಂಬ ಗಾದೆಮಾತು ಸುಳ್ಳಲ್ಲ,
ಗೂಡಿನಲ್ಲಿರುವ ನಮಗೆ ಕನ್ನಡದ ಬೆಲೆಯ ಅರಿವಿಲ್ಲ.
ಗೂಡುಬಿಟ್ಟ ಹಕ್ಕಿಗಳು ನೀವು, ತವರಿನ ನೆನಪೂ ಹೆಚ್ಚು,
ನಮಗೂ ಸ್ವಲ್ಪ ಕಲಿಸಿ ಕನ್ನಡಕ್ಕಾಗಿ ಹೋರಾಡುವ ಕೆಚ್ಚು!

ಕನ್ನಡಿಗರು ಬೆಚ್ಚಗೆ ಹೊದ್ದು ಮಲಗಿರುವ ಈ ಹೊತ್ತಿನಲ್ಲಿ
ಬೇಕಿತ್ತು ಇಂತಹ ಸಮ್ಮೇಳನ ಹೊತ್ತಿಸಲು ಕಿಚ್ಚು ಮನದಲ್ಲಿ
ಇಟ್ಟಿದ್ದೀರಿ 'ವಿಶ್ವ ಕನ್ನಡ ಸಮ್ಮೇಳನ"ವೆಂಬ ಚೆಂದದ ಹೆಸರು
ದೇವರ ದಯೆಯಿರಲಿ, ಕಾಡದಿರಲಿ ಯಾವ ತಂಟೆ-ತಕರಾರು.

ಹಲವು ಸಾವಿರ ಕನ್ನಡಿಗರಿದ್ದೇ ಅದೆಷ್ಟು ಸಡಗರ ನಿಮಗೆ!;
ಕೋಟಿ ಕೋಟಿ ಜನರಿದ್ದೂ ಅದೇಕೆ ಸಾಧ್ಯವಿಲ್ಲ ಇಲ್ಲಿ ನಮಗೆ?
ವೈಭವದಿ ಸಿಂಗರಿಸಿ ಎಳೆಯುತ್ತಿದ್ದೀರಿ ಕನ್ನಡಮ್ಮನ ತೇರು
ನಿಲ್ಲದಿರಲೆಂದೂ, ಸಾಗಲಿ ಹೀಗೆಯೇ ಕನ್ನಡದ ದರ್ಬಾರು.

ಚೆನ್ನಾಗಿ ಲಾಲಿಸಿ, ಅಮೆರಿಕ ಸುತ್ತಿಸುತ್ತಿದ್ದೀರಿ ಕನ್ನಡಾಂಬೆಯನ್ನು
ಆದರೊಂದೇ ಚಿಂತೆ, ಅಮ್ಮ ಮರೆತೇಬಿಟ್ಟಾಳು ತನ್ನ ತವರನ್ನು!
ಸಮ್ಮೇಳನವು ಕನ್ನಡದ ಕಾಂತಿಯನು ಜಗದಗಲ ಪಸರಿಸಲಿ

ವಿಶ್ವ ಕನ್ನಡಿಗರೆಲ್ಲ ಆ ಚೆಂಬೆಳಕ ಕಂಡು ನಲಿಯುವಂತಾಗಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+