ಎಲ್ಲಾ ವಿಶ್ವಕನ್ನಡ ಸಮ್ಮೇಳನಗಳಲ್ಲೂ ಧಣಿಗಳು ನಾಪತ್ತೆ!
ಬೆಂಗಳೂರು : ವಿಶ್ವಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಯಾಕೋ ಕರ್ನಾಟಕ ರಾಜ್ಯದ ಯಾವ ಮುಖ್ಯಮಂತ್ರಿಗೂ, ಘಳಿಗೆಯೇ ಕೂಡಿ ಬರುತ್ತಿಲ್ಲ!
ಸಮ್ಮೇಳನಕ್ಕೆ ರಾಜ್ಯಸರ್ಕಾರಗಳು ಸಂಪೂರ್ಣ ಸಹಕಾರ ನೀಡುತ್ತಿವೆ. ಆದರೆ ಇನ್ನೇನು ಸಮ್ಮೇಳನಕ್ಕೆ ಹೊರಟರು ಎಂದಾಗ, ಏನೋ ಅಡ್ಡಿ ಆತಂಕಗಳಿಂದ ಮುಖ್ಯಮಂತ್ರಿಗಳ ಪ್ರವಾಸ ರದ್ದಾಗುತ್ತಾ ಬರುತ್ತಿದೆ. ಅಕ್ಕ ಅಸ್ತಿತ್ವಕ್ಕೆ ಬಂದು ಸುಮಾರು ವರ್ಷಗಳಾದವು. ಎರಡು ವರ್ಷಕ್ಕೊಂದರಂತೆ ನಾಲ್ಕು ಸಮ್ಮೇಳನಗಳನ್ನು ಅದು ಸಂಘಟಿಸಿದೆ. ಆದರೆ ಎಲ್ಲಾ ಸಮ್ಮೇಳನಗಳಲ್ಲೂ ಉಪಮುಖ್ಯಮಂತ್ರಿಗಳೇ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.



ಯಾವಾಗ ಏನಾಯ್ತು? :
- 2000ನೇ ಇಸವಿಯ ಮೊದಲ ಸಮ್ಮೇಳನ ಹೂಸ್ಟನ್‌ನಲ್ಲಿ ನಡೆದಾಗ, ರಾಜ್ಯದಲ್ಲಿ ಬರ ತಾಂಡವವಾಡುತ್ತಿತ್ತು. ಹೀಗಾಗಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಗೈರು ಹಾಜರಾದರು.
- ಡೆಟ್ರಾಯಿಟ್‌ನಲ್ಲಿ 2002ರಲ್ಲಿ ಎರಡನೇ ಸಮ್ಮೇಳನ ನಡೆದಾಗಲೂ, ಕೃಷ್ಣ ಮುಖ್ಯಮಂತ್ರಿಯಾಗಿಯೇ ಇದ್ದರು. ಆದರೆ ವೀರಪ್ಪನ್, ವರನಟ ರಾಜ್‌ಕುಮಾರ್ ಅವರನ್ನು ಅಪಹರಿಸಿ, ರಾಜ್ಯದಲ್ಲಿ ಆತಂಕದ ಅಲೆ ಸೃಷ್ಟಿಸಿದ್ದ. ಕೃಷ್ಣ ಮತ್ತೆ ಸಮ್ಮೇಳನ ತಪ್ಪಿಸಿಕೊಳ್ಳುವುದು ಅನಿವಾರ್ಯವಾಗಿತ್ತು.
- ಫ್ಲೋರಿಡಾದಲ್ಲಿ 2004ರಲ್ಲಿ ಮೂರನೇ ವಿಶ್ವಕನ್ನಡ ಸಮ್ಮೇಳನ ನಡೆದಾಗ ಆಗಿನ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಅಮೆರಿಕಾಕ್ಕೆ ಹಾರಲು ಸಿದ್ಧರಾಗಿದ್ದರು. ಆದರೂ ಕಡೆಯ ಕ್ಷಣದಲ್ಲಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಳುಹಿಸಿ ಸುಮ್ಮನಾದರು.
- ಈಗ ನಾಲ್ಕನೇ ವಿಶ್ವಕನ್ನಡ ಸಮ್ಮೇಳನ ಬಾಲ್ಟಿಮೋರ್‌ನಲ್ಲಿ ನಡೆಯುತ್ತಿದೆ. ಕುಮಾರಸ್ವಾಮಿಗೆ ಸಮ್ಮೇಳನಕ್ಕಿಂತಲೂ, ಸರ್ಕಾರ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ. ಹೀಗಾಗಿ ಅವರ ಪರವಾಗಿ ಉಪಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಅವರ ಜೊತೆ 17 ಶಾಸಕರೂ ಇದ್ದಾರೆ.
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications