ಕನ್ನಡ ಸಮ್ಮೇಳನದಲ್ಲೂ ವ್ಯಾಪಾರವಾ?
ವಿಕಾಸ ಬಿಜಿನೆಸ್ ವೇದಿಕೆಯ ಗುರಿಗಳೇನು? ಅಮೆರಿಕ ಹಾಗೂ ಕರ್ನಾಟಕ ಮಧ್ಯೆ ವ್ಯಾಪಾರ, ವಾಣಿಜ್ಯ ಸಂಬಂಧವನ್ನು ವೃದ್ಧಿಪಡಿಸುವುದು, ವ್ಯಾಪಾರದ ಸರಪಣಿಕೊಂಡಿ(ನೆಟ್‌ವರ್ಕಿಂಗ್)ಗಳನ್ನು ವಿಸ್ತರಿಸುವುದು ಭಾರತೀಯ ಕಂಪನಿಗಳಿಗೆ ಅಮೆರಿಕದಲ್ಲಿ ಬಂಡವಾಳ ಅವಕಾಶದ ಬಗ್ಗೆ ಮಾಹಿತಿ ನೀಡುವುದು ಹಾಗೂ ಅಮೆರಿಕದ ಕಂಪನಿಗಳಿಗೆ ಕರ್ನಾಟಕದಲ್ಲಿ ಬಂಡವಾಳ ತೊಡಗಿಸಲು ನೆರವಾಗುವುದು.
ಕರ್ನಾಟಕದಲ್ಲಿ ಬಂಡವಾಳ ತೊಡಗಿಸುವುದು ಹೇಗೆ, ಕನ್ನಡಿಗರು ಅಮೆರಿಕದಲ್ಲಿ ಉದ್ಯಮ ಆರಂಭಿಸುವುದು ಹೇಗೆ, ಕರ್ನಾಟಕದಲ್ಲಿ ಸಿದ್ಧಪಡಿಸುವ ವಸ್ತುಗಳಿಗೆ ಅಮೆರಿಕಾದಲ್ಲಿ ಬೇಡಿಕೆ ಇದೆಯಾ, ಬೇಡಿಕೆ ಸೃಷ್ಟಿಸಿ ಮಾರುಕಟ್ಟೆ ರೂಪಿಸುವುದು ಹೇಗೆ, ಆಸಕ್ತ ಅಮೆರಿಕದ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದು ಹೇಗೆ ಹಾಗೆ ಕರ್ನಾಟಕದಲ್ಲಿ ಅಮೆರಿಕ ಕಂಪನಿ ಜತೆ ಷಾಮೀಲಾಗಿ ಬಿಜಿನೆಸ್ ಮಾಡುವುದು ಹೇಗೆ, ಸ್ಥಳೀಯ ಕಾನೂನುಗಳೇನು, ಜಾಗತಿಕವಾಗಿ ನಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸುವುದು ಹೇಗೆ - ಈ ಎಲ್ಲ ಪ್ರಶ್ನೆಗಳಿಗೆ ಪರಿಣತರು ಮಾರ್ಗದರ್ಶನ ಮಾಡಲಿದ್ದಾರೆ.
ಇಷ್ಟೇ ಅಲ್ಲ, ಕರ್ನಾಟಕ ಅಥವಾ ಭಾರತದಲ್ಲಿ ಅಪಾರ ಬೇಡಿಕೆಯಿರುವ ಉದ್ಯಮಗಳು ಯಾವವು, ಹಾಗೇ ಅಮೆರಿಕದಲ್ಲಿ ನಮ್ಮ ಯಾವ ಉತ್ಪನ್ನಗಳಿಗೆ ಬೇಡಿಕೆಯಿದೆ, ಅವುಗಳಲ್ಲಿ ಹೇಗೆ, ಯಾವಾಗ ಬಂಡವಾಳ ತೊಡಗಿಸುವುದು ಎಂಬ ಮಾಹಿತಿಯನ್ನು ವಿಕಾಸ ವೇದಿಕೆ ನೀಡಲಿದೆ.
ಆರಂಭಿಕ ಗೋಷ್ಠಿಯಲ್ಲಿ ಸ್ಥಳೀಯ ಮೇರಿಲ್ಯಾಂಡ್ ಸರಕಾರದ ಅರ್ಥಿಕ ಅಭಿವೃದ್ಧಿ ಸಂಸ್ಥೆಯ ಡೆಪ್ಯೂಟಿ ಸೆಕ್ರೆಟರಿ ಕ್ರಿಸ್ ಫಾಸ್ಟರ್, ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್, ಸಿಕಾಮೋರ್ ನೆಟ್‌ವರ್ಕ್ ಅಧ್ಯಕ್ಷ ಗುರುರಾಜ್ ದೇಶಪಾಂಡೆ, ಸಿಟ್ರಿಕ್ಸ್ ಉಪಾಧ್ಯಕ್ಷ ಬಿ.ವಿ. ಜಗದೀಶ ಮಾತನಾಡಲಿದ್ದಾರೆ.
ಈ ಗೋಷ್ಠಿಗಳಲ್ಲಿ ಭಾಗವಹಿಸುವ ಆಸಕ್ತ ಉದ್ಯಮಶೀಲ ಪ್ರತಿನಿಧಿಗಳಿಗೆ ಚರ್ಚಿಸ್ ಫ್ರೈಡ್ ಚಿಕನ್ ಅಧ್ಯಕ್ಷ ಹರ್ಷ ಅಗಡಿ, ಗೂಗಲ್ ಸಂಸ್ಥೆಯ ಶೈಲೇಶ್ ರಾವ್, ಐಬಿಎಂನ ಸುಧಾದೇವ್, ಸಿಟಿ ಕ್ಯೂಬ್ಡ್ ಸಿಇಒ ಡಾ. ಕೆ.ಆರ್.ಎಸ್. ಮೂರ್ತಿ, ಜಿ.ಎಲ್. ಕಮ್ಯೂನಿಕೇಷನ್ಸ್‌ನ ವಿಜಯ ಕುಲಕರ್ಣಿ, ಅನಂತ ಎನ್ ಅನಂತ, ಇಂಟೆಲ್‌ಸ್ಯಾಟ್‌ನ ರಾಮು ಪೋತರಾಜು, ಎಸ್‌ಬಿಐ ಕಂಟ್ರಿಹೆಡ್ ಪ್ರತಿಮಾ ರಾಮ್, ಮೂರ್ತಿ ಲಾ ಫರ್ಮ್ ಮುಖ್ಯಸ್ಥೆ ಶೀಲಾಮೂರ್ತಿ ಮಾರ್ಗದರ್ಶನ ನೀಡಲಿದ್ದಾರೆ.
ಇದಲ್ಲದೆ ವರ್ಚಸ್ವಿ ಶಂಕರ್, ಅತಿಕಿರಿಯ ಸಿಇಒ ಸುಹಾಸ ಗೋಪಿನಾಥ್, ಪ್ರಸಾದ ಬಾಣಾವರ, ಶ್ರೀನಿವಾಸ ಶ್ರೀರಂಗಂ, ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಕನ್ನಡದ ಉದ್ಯಮಿಗಳ ಯಶೋಗಾಥೆ, ಅದನ್ನು ಸಾಧಿಸಿದ ವಿಧಾನ, ಕಂಪನಿಗಳ ಮಾರಾಟ, ಖರೀದಿ ವಿಧಾನ, ಪೇಟೆಂಟ್ ನಿಯಮ, ಔಟ್‌ಸೋರ್ಸಿಂಗ್, ಎರಡೂ ದೇಶಗಳ ನಡುವೆ ವ್ಯಾಪಾರ-ವಿನಿಮಯಕ್ಕೆ ತೊಡಕಾಗಿರುವ ಕಾನೂನು ಕಟ್ಟಳೆ ಮುಂತಾದ ಸಂಗತಿಗಳ ಕುರಿತು ಸಹ ಗೋಷ್ಠಿಯಲ್ಲಿ ಚರ್ಚಿಸಲಾಗುವುದು.
‘ಈ ಗೋಷ್ಠಿ ನಿಶ್ಚಿತವಾಗಿಯೂ ಕೆಲವು ಹೊಸ ಉದ್ಯಮಶೀಲ ಸಾಹಸಿಗಳಿಗೆ ತಮ್ಮ ಕನಸನ್ನು ನನಸಾಗಿಸಲು. ನೆರವಾಗಲಿದೆ. ಈ ಗೋಷ್ಠಿಯಲ್ಲಿ ಗಂಭೀರ ಸಂವಾದ, ವಿಚಾರ ವಿನಿಮಯ ಏರ್ಪಡಿಸಲು ಕೆಲವೇ ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಅನಗತ್ಯ ನೂಕುನುಗ್ಗಲು, ಅನವಶ್ಯಕ ಚರ್ಚೆ ತಡೆಯಲು ಕ್ರಮ ಕೈಗೊಂಡಿದ್ದಾರೆ. ಇದರಿಂದ ಕೆಲವೇ ಹೊಸ ಉದ್ಯಮಗಳಿಗೆ ನೆರವಾದರೂ ಪರವಾಗಿಲ್ಲ ನಮ್ಮ ಶ್ರಮ ಸಾರ್ಥಕ’ ಎಂಬುದು ರವಿ ಡಂಕಣಿಕೋಟೆ ಹಾಗೂ ಸುರೇಶ್ ರಾಮಚಂದ್ರ ಅವರ ಅನಿಸಿಕೆ.
ಆರೋಗ್ಯ, ಮೂಲ ಸೌಕರ್ಯ ಅಭಿವೃದ್ಧಿ, ಜೈವಿಕ ತಂತ್ರಜ್ಞಾನ, ವೈದ್ಯಕೀಯ ಪ್ರವಾಸೋದ್ಯಮಗಳಂಥ ವಿಷಯಗಳ ಚರ್ಚೆಗೂ ವಿಕಾಸವೇದಿಕೆ ಅನುವು ಮಾಡಿಕೊಡಲಿದೆ.
ಕರ್ನಾಟಕದ ಸುಮಾರು ಐನೂರು ಕಂಪನಿಗಳಿಗೆ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿರುವುದು ವಿಶೇಷ. ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |












Click it and Unblock the Notifications