ಮೋರ್‌ ಎಬೌಟ್‌ ಬಾಲ್ಟಿಮೋರ್‌...

City Hall in Baltimore1. ಬಾಲ್ಟಿಮೋರ್‌ ಎಲ್ಲಿದೆ?

ಅಮೆರಿಕದ ರಾಜಧಾನಿ ವಾಷಿಂಗ್‌ಟನ್‌ ಡಿಸಿಯ ಅವಳಿನಗರವೆನ್ನಬಹುದಾದ ಬಾಲ್ಟಿಮೋರ್‌, ಪೂರ್ವಕರಾವಳಿಯ ಮೇರಿಲ್ಯಾಂಡ್‌ ಸಂಸ್ಥಾನದ ಒಂದು ದೊಡ್ಡ ನಗರ. ಅಟ್ಲಾಂಟಿಕ್‌ ಸಮುದ್ರತೀರದಲ್ಲಿರುವ ಈ ನಗರವು ಒಂದು ಬಂದರು ಕೂಡ ಆಗಿದೆ.

2. ಬಾಲ್ಟಿಮೋರ್‌ ಹೆಸರು ಹೇಗೆ ಬಂತು?

ಮೇರಿಲ್ಯಾಂಡ್‌ ಸಂಸ್ಥಾನದ ಮೊಟ್ಟಮೊದಲ ಗವರ್ನರ್‌ ಲಾರ್ಡ್‌ ಬಾಲ್ಟಿಮೋರ್‌ನ ಸ್ಮರಣೆಗಾಗಿ, ಸುಮಾರು 300 ವರ್ಷಗಳಷ್ಟು ಹಳೆಯದಾದ ಈ ನಗರಕ್ಕೆ ಬಾಲ್ಟಿಮೋರ್‌ ಎಂಬ ಹೆಸರನ್ನಿಡಲಾಯಿತು.

3. ಎಷ್ಟು ದೊಡ್ಡ ನಗರ?

ಬಾಲ್ಟಿಮೋರ್‌ನ ಜನಸಂಖ್ಯೆ ಸುಮಾರು 6.5 ಲಕ್ಷದಷ್ಟು. ಅಮೆರಿಕದ ಪೂರ್ವಕರಾವಳಿಯ ಇತರ ದೊಡ್ಡ ನಗರಗಳಾದ ನ್ಯೂಯಾರ್ಕ್‌, ನ್ಯೂಜೆರ್ಸಿ, ಫಿಲಡೆಲ್ಫಿಯಾ, ವಾಷಿಂಗ್ಟನ್‌ ಡಿಸಿ ಇವೆಲ್ಲವೂ ಬಾಲ್ಟಿಮೋರ್‌ಗೆ ಒಂದೆರಡು ತಾಸುಗಳ ಕಾರ್‌ ಪ್ರಯಾಣದಷ್ಟು ಸನಿಹದಲ್ಲಿವೆ.

4. ಯಾವುದಕ್ಕೆ ಪ್ರಸಿದ್ಧ?

ಬಾಲ್ಟಿಮೋರ್‌ನಲ್ಲಿ ವಸ್ತುಸಂಗ್ರಹಾಲಯಗಳು, ಸ್ಮಾರಕಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ವಿಶ್ವವಿಖ್ಯಾತ ಜಾನ್ಸ್‌ ಹಾಪ್‌ಕಿನ್ಸ್‌ ವೈದ್ಯಕೀಯ ವಿಶ್ವವಿದ್ಯಾಲಯ ಇರುವುದು ಬಾಲ್ಟಿಮೋರ್‌ನಲ್ಲೇ. ಹಾಗೆಯೇ ಇಲ್ಲಿನ ನ್ಯಾಶನಲ್‌ ಅಕ್ವೇರಿಯಂ (ಮತ್ಸ್ಯಾಗಾರ) ಸಹ ತುಂಬ ಪ್ರಸಿದ್ಧವಾದುದು. ಏಡಿ (crab) ತಿನ್ನುವುದು ಬಾಲ್ಟಿಮೋರ್‌ ನಗರ ಮತ್ತು ಮೇರಿಲ್ಯಾಂಡ್‌ ಸಂಸ್ಥಾನದ ಜನರ ಒಂದು ವಿಶಿಷ್ಟ ಸಂಪ್ರದಾಯ.

5. ಬಾಲ್ಟಿಮೋರ್‌ ಕನ್ವೆನ್ಷನ್‌ ಸೆಂಟರ್‌

ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವ ಬೃಹತ್‌ ಸಭಾಂಗಣವು ಬಾಲ್ಟಿಮೋರ್‌ ನಗರದ ಕೇಂದ್ರ ಭಾಗದಲ್ಲಿರುವ ಕನ್ವೆನ್ಷನ್‌ ಸೆಂಟರ್‌ನಲ್ಲಿದೆ. ಒಟ್ಟು 12 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾದ ಈ ಸೆಂಟರ್‌ನಲ್ಲಿ ಸಮ್ಮೇಳನದ ಮುಖ್ಯ ವೇದಿಕೆಯಿರುವ ಡಾ।ರಾಜ್‌ ಸಭಾಂಗಣವು 25000 ಚದರ ಅಡಿಗಳ ವಿಸ್ತಾರದ್ದಾಗಿದೆ.

6. ವಸತಿ ವ್ಯವಸ್ಥೆ

ವಿಂಡ್‌ಹಾಮ್‌, ರ್ಯಾಡಿಸನ್‌, ಮೇರಿಯಟ್‌, ಹಾಲಿಡೇ-ಇನ್‌ ಮೊದಲಾದ ಹೊಟೆಲ್‌ಗಳು ಸಮ್ಮೇಳನ ಸಭಾಗೃಹದ ಅಕ್ಕಪಕ್ಕದಲ್ಲೇ ಇವೆ. ಇವುಗಳ ಪೈಕಿ ಹೆಚ್ಚಿನವಕ್ಕೆ ಸಮ್ಮೇಳನ ಸಭಾಗೃಹದಿಂದ ನೇರವಾಗಿ ನಡೆದುಕೊಂಡುಹೋಗಲು ತೂಗುಸೇತುವೆ(sky-walk)ಗಳಿವೆ.

(ಮಾಹಿತಿ ಸಂಗ್ರಹ: ಶ್ರೀವತ್ಸ ಜೋಶಿ)

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004

ಪೂರ್ವ ಸಿದ್ಧತೆ Be a patronate! Use .in e-mail Post Your Views

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+