ನಗು, ಅಳು, ಆಶಯ, ಭಯ ಪ್ರತೀ ವರ್ಷದ ಹೊಣೆ!

Posted By: ವೆಂಕಟ್, ಸಿಂಗಪುರ
Subscribe to Oneindia Kannada

ಅಮೆರಿಕಾದ ಖ್ಯಾತ ಕವಿಯತ್ರಿ (Ella Wheeler Wilcox)ಯ ಹೊಸ ವರ್ಷದ ಬಗೆಗಿನ ಕವನವು ತುಂಬಾ ಆಕರ್ಷಿಸಿತು. ವರ್ಷದ ಏರಿಳಿತಗಳು ಹೇಗೆ ನಮ್ಮ ಬದುಕಿನ ಸಹಜ ಕ್ಷಣಗಳಾಗಿತ್ತವೆ, ಕೊನೆಯಲ್ಲಿ ನಗು, ಅಳು, ಆಶಯ ಹಾಗೂ ಭಯಗಳು ಪ್ರತೀ ವರ್ಷದ ಹೊಣೆಯೆಂದು ಸಾರಿ ಹೇಳುವ ಸುಂದರ ಕವನ. ಇದೇ ಕವನವನ್ನು ಕನ್ನಡಕ್ಕೆ ಅನುವಾದಿಸುವ ನನ್ನದೊಂದು ಸಣ್ಣ ಪ್ರಯತ್ನ. ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ - ವೆಂಕಟ್, ಸಿಂಗಪುರ

The Year

Ella Wheeler Wilcox (1850-1919)

What can be said in New Year rhymes,
That's not been said a thousand times?
The new years come, the old years go,
We know we dream, we dream we know.
We rise up laughing with the light,
We lie down weeping with the night.
We hug the world until it stings,
We curse it then and sigh for wings.
We live, we love, we woo, we wed,
We wreathe our brides, we sheet our dead.
We laugh, we weep, we hope, we fear,
And that's the burden of the year.

We laugh, we weep, that's the burden of the year

ಹೊಸ ವರ್ಷ

ಹೇಳುವುದಾದರು ಏನು? ಹೊಸವರ್ಷದ ಪ್ರಾಸದಲಿ
ಹೇಳಲಾಗದೆ ಮತ್ತೆ, ಹುದುಗಿ ಹೋದ ಕಾಲದಲಿ

ಬರುವವು ನವ ವರುಷಗಳು, ಕಳೆದವು ಹಾಗೆ ಹಲವು
ಕನಸ ಕಾಣುವುದ ತಿಳಿದೆವು, ಕನಸುಗಳ ಅರಿತೆವು

ಮೆರೆದೆವು ಯಶಸ್ಸಿನ ಬೆಳಕಲಿ ನಗುತ
ಕುಗ್ಗಿ ಕುಳಿತು ಸೋಲಿನ ಕತ್ತಲಲಿ ಅಳುತ

ವ್ಯಾಮೋಹದಿ ಬಿಗಿದಪ್ಪಿದೆವು ಜಗವ, ಕುಟುಕುವರೆಗೆ
ಶಾಪ ಹಾಕಿ ನಿಂತು, ನಿಟ್ಟುಸಿರ ನೋಟದಿ ಪ್ರೀತಿಯೆಡೆಗೆ

ಒಬ್ಬರೊಬ್ಬರ ಪ್ರೀತಿಸಿ, ಓಲೈಸಿ, ಒಂದುಗೂಡಿ ಬದುಕುತ
ಸುಂದರ ಕ್ಷಣಗಳಿಗೆ ಹೂಮಾಲೆ ಹಾಕಿ, ಸತ್ತವರ ಮರೆಮಾಚುತ

ನಗುತಾ, ಅಳುತಾ, ಆಶಯದಿ, ಭಯದಲಿ ಬಾಳುತಾ
ಕಳೆದ ವರ್ಷದ ಹೊಣೆ, ಹೊರೆಯು ಇದೇ ಎನ್ನುತಾ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We laugh, we weep, we hope, we fear, And that’s the burden of the year. What can be said in New Year rhymes, That’s not been said a thousand times? Poem by Ella Wheeler Wilcox translated to Kannada by Venkat, Singapore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ