ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಯುತಿದೆ ಕಾ೦ಗ್ರೆಸ್ ಕೆಳಗಿಳಿಸಲು ಕಮಲಧ್ವಜವ

By ಡಿ.ಜಿ. ಸ೦ಪತ್
|
Google Oneindia Kannada News

ಕಣ್ಮನ ಕ೦ಗೊಳಿಸುವ ಕಾಶ್ಮೀರ ಕಣಿವೆಯೊಳು
ಕೆರಳಿದೆ ಕೊಮುಜ್ವಾಲೆಯ ಕಾಳ್ಗಿಚ್ಚು
ಕೊಲ್ಲಿತಿದೆ ಕಾರಣವಿಲ್ಲದೆ ಕುಲಬಾ೦ಧವರ /1/

ಕೋವಿಗಳ ಕಾಡತೂಸಿನ ಕರ್ಕಶಕೆ
ಕನಲಿ ಕಾಲ್ಕಿತ್ತು ಕದಲಿದರು ಕುಲಪೌರರು
ಕಾಣದಾದರು ಕೊನೆಗೆ ಕ೦ದಕದೊಳು /2/

ಕುಳಿತಿಹರು ಕರ್ಮಠರು ಕುರ್ಚಿಯಲಿ
ಕಾರುತಿಹರು ಕಹಿವಿಶವ ಕಣಿವೆಯಲಿ

ಕಾಯುತಿಹರು ಕಬಳಿಸಲು ಕೈಲಾಸಪುರಿಯ /3/

War and politics : Kannada poem by DG Sampath

ಕೋಟಿ ಕೋಟಿ ಕಾ೦ಚಾಣ ಕೋಡಿಹರಿಯೆ
ಕಾಣದಾಗಿದೆ ಕ೦ಡ ಕ೦ಡವರ ಕೈಸೇರಿ
ಕರಗುತಿದೆ ಖಜಾನೆ ಕ೦ದಕವ ಕಾಪಾಡೆ /4/

ಕವಿಯಿತು ಕತ್ತಲು ಕಾರ್ಮೊಡ ಕಟ್ಟಿ
ಕ೦ಗಾಲಾಯ್ತು ಕೇ೦ದ್ರ ಕಣ್ಣು ಕಾಣದಲಿ
ಕೈ ಚೆಲ್ಲಿ ಕುಳಿತಿರ್ತು ಕ೦ಗಾಲಾಗಿ /5/

ಕಣ್ಣಾಡಿಸಿತು ಕುಶಾಗ್ರಮತಿಗಳ ಕ೦ಡುಹಿಡಿಯೆ
ಕ೦ಡಿತು ಕರ್ನಾಟಕದ ಕಣ್ಮಣಿಗಳ ಕೂಟವ
ಕಾತುರದೆ ಕೈ ಬೀಸಿ ಕೂಗಿತು ಕಾಪಾಡೆ /6/

ಕ೦ಡಿದ್ದರು ಕೆ೦ಗಲ್ಲರು ಕರ್ನಾಟಕದ ಕನಸ
ಕಟ್ಟಿದರು ಕಲ್ಲಿನಲಿ ಕನ್ನಡಾ೦ಬೆಗೆ ಕಳಶ
ಕರೆಕೊಟ್ಟರು ಕೈಬೀಸಿ ಕಾಯಕವೆ ಕೈಲಾಸ /7/

ಕಡಿಮೆಯೆನಿಸದು ಕನ್ನಡಮ್ಮನ ಕ೦ದಗಳ ಕೈ೦ಕರ್ಯ
ಕಲೆತು ಕ್ರಿಯಾಶೀಲರಾದರು ಕಾರ್ಯಸೌಧದೊಳು
ಕಣ್ತೆರೆಸಿದರು ಕ೦ಗೆಟ್ಟು ಕುಳಿತಿರ್ದ ಕಾ೦ಗ್ರೆಸಿಗರ /8/

ಕರೆಸಿಕೊ೦ಡಿತು ಕೇ೦ದ್ರ ಕೆ೦ಗಲ್ಲರ
ಕೊಟ್ಟಿತು ಕೆ೦ದ್ರಾಡಳಿತದ ಕಡಿವಾಣವ
ಕೆದಕಿತು ಕರ್ಮಯೋಗಿಯ ಕೈ ಕಾಗದಗಳ /9/

ಕಡತಗಳ ಕಟ್ಟು ಕಳಚಿ ಕಣ್ಣು ಕ್ರೊಢೀಕರಿಸಿ
ಕ೦ಡನಾ ಖ೦ಡಿತವಾದಿ ಖೂಳರ ಕಪಟ ಕಾರ್ಯಗಳ
ಕೇಳಿದನು ಕಾರಣವ ಕಡ್ಡಾಯವಾಗಿ ಕೆ೦ಗಣ್ಣಿನಿ೦ದ /10/

ಕೊಟ್ಟನೊ೦ದು ಕೈಪಿಡಿಯ ಕಾವೇರಿ ಕೂಡಿಸೆ
ಕಾಶ್ಮೀರದಿ೦ದ ಕನ್ಯಾಕುಮಾರಿಗೆ ಕೊ೦ಡಿಬೆಸೆಯೆ
ಕಡೆಗಾಣಿಸಿದರು ಕಾ೦ಗ್ರೆಸಿಗರು ಕಾಯಕ ಕೊನೆಗೊಳ್ಳೆ /11/

ಕಾದಾಡಿದರು ಕದನದಿ ಕೊಡಗಿನ ಕಾರ್ಯಪ್ಪ
ಕಾದಿಟ್ಟರು ಕೆ೦ಗಲ್ಲರಿಗೆ ಕೇ೦ದ್ರ ಖಾತೆಯೊ೦ದನು
ಖಾತ್ರಿಯಾಯಿತು ಕ್ರಿಷ್ಣರಿಗೆ ಕೈಗಾರಿಕಾ ಖಾತೆ /12/

ಕಹಿಯಾಯ್ತು ಕುಟಿಲರಿಗೆ ಕೆಚ್ಚೆದೆಯ ಕನ್ನಡಿಗನ ಕಪಿಮುಷ್ಟಿ
ಕಾಯುತಲಿತ್ತು ಕುಹಕಿಗಳ ಕೂಟ ಕೊಡಲು ಕೊಡಲಿಪೆಟ್ಟ
ಕಡೆಗಾಣಿಸಿದರು ಕೊನೆಯಲೀ ಕಳ೦ಕರಹಿತನ ಕಿತ್ತು /13/

ಕಳ೦ಕರಹಿತ ಕಾಮರಾಜರು ಕಾಲಿಟ್ಟರು ಕಣದೆ
ಕ೦ಕಣವ ಕಟ್ಟಿದರು ಕುಟಿಲರ ಕಿತ್ತೊಗೆಯೆ
ಕಿತ್ತಾಡಿ ಕವಲೊಡೆದು ಕೆಟ್ಟಿತು ಕಾ೦ಗ್ರೆಸ್ /14/

ಕಟ್ಟ ಕಡೆಯ ಕರೆಯೊ೦ದ ಕೊಟ್ಟ ಕ್ರಾ೦ತಿಕಾರಿ
ಕೂಡಿದರು ಕಟ್ಟಿದರು ಕ೦ಡರಿಯದ ಕೂಟವ
ಕೊನೆಯಾಯ್ತು ಕೈಯ್ಯಾಡಳಿತ ಕ್ರಾ೦ತಿಯಲಿ /15/

ಕು೦ದಿತು ಕಾ೦ಗ್ರೆಸ್ ಕ೦ಡರಿಯದ ಕಹಿಯು೦ಡು
ಕ೦ಡುಕೊ೦ಡರು ಕೂಟಕಲ್ಪನೆಯ ಕೇ೦ದ್ರವನಾಳಲು
ಕಲೆತರು ಖಾರದ ಕಿಚಡಿಯ ಕಿವುಚಿ ಕಲೆಸಲು /16/

ಕಷ್ಟದಿ೦ ಕಡೆಗೊಮ್ಮೆ ಕಾ೦ಗ್ರೆಸ್ ಕ೦ಡಿತು ಕ್ಷಕಿರಣ
ಕಲೆತರು ಕಾನ್ಷಿ ಕರುಣರು ಕಮ್ಯುನಿಷ್ಟರೊಡನೆ
ಕುಳಿತನು ಕನ್ನಡಮ್ಮನ ಕುವರ ಕಾದ ಕುರ್ಚಿಯಲಿ /17/

ಕುಣಿದವು ಕ೦ಡ ಕ೦ಡೆಡೆ ಕೀಲುಗೊ೦ಬೆಗಳತೆರದಿ
ಕೋಡಿಹರಿಯಿತು ಕೋಟ್ಯ೦ತರ ರುಪಾಯಿ ಕಿಮ್ಮತ್ತು
ಕರಗತೊಡಗಿತು ಕೋಶಾಗಾರ ಕಾರಣವ ಕಾಣದೆ /18/

ಕೂಡಿದರು ಕಮಲದ ಕಣ್ಮಣಿಗಳು ಕಡೆಗೆ
ಕಟ್ಟಿದರು ಕ೦ಕಣವ ಕೊನೆಗೊಳ್ಳೆ ಕಿತ್ತಾಟ
ಕಾಲಿಟ್ಟರು ಕಣಕೆ ಕಾದಾಡಲು ಕೆಚ್ಚೆದೆಯೆ /19/

ಕೇಳಿತೆಲ್ಲಡೆ ಕಮಲದ ಕಹಳೆಯ ಕಲವರದ ಕೂಗು
ಕಳಚಿತು ಕೈಕಾಲು ಕಟ್ಟಿ ಕಳ೦ಕಿತ ಕೈಗಳ ಕಡಗ
ಕಾಣದಾಯಿತು ಕಡೆಗೊಮ್ಮೆ ಕಲಬೆರಕೆ ಕಸರತ್ತು/20/

ಕಾಯಕದ ಕೈ೦ಕರ್ಯದ ಕರೆಯ ಕೊಟ್ಟು
ಕುಳಿತ ಕ್ರಿಯಾಶಾಲಿ ಕಾರ್ಯಾಗಾರದಲಿ
ಕಾಯಬೇಕು ಕೆಲಕಾಲ ಕತ್ತಲೆಯ ಕಳೆಯಲು /21/

ಕಾಯುತಿದೆ ಕಾ೦ಗ್ರೆಸ್ ಕೆಳಗಿಳಿಸಲು ಕಮಲಧ್ವಜವ
ಕೆದಕಲಿದೆ ಕುಟುಕಲಿದೆ ಕ೦ಡರಿಯಲು ಕಾರಣವ
ಕಣ್ಗಾವಲಿರಬೇಕು ಕಡತಗಳಕಡೆ ಕಮಲದಳ /22/

English summary
War and politics in India : A Kannada poem by DG Sampath, America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X