Viral: ಬೆಂಗಳೂರಲ್ಲಿ ಜಾಗಿಂಗ್ ವೇಗಕ್ಕಿಂತ ನಿಧಾನ ಸಂಚಾರ: ಉದ್ಯಮಿಯ ಟ್ರಾಫಿಕ್ ಪೋಸ್ಟ್ ಭಾರೀ ವೈರಲ್

ಬೆಂಗಳೂರು; ಸಿಲಿಕಾನ್ ಸಿಟಿ ಬೆಂಗಳೂರು ಅತ್ಯಧಿಕ ಸಂಚಾರ ದಟ್ಟಣೆಗೆ ಕುಖ್ಯಾತಿ ಪಡೆದಿದೆ. ಈ ಸಮಸ್ಯೆಯು ನಿಯಂತ್ರಣಕ್ಕೆ ಬಂದಿಲ್ಲ ಎಂಬುದು ಮರಳಿ ಸಾಬೀತಾಗುವಂತಹ ಘಟನೆ ನಡೆದಿದೆ. ಮಗದೊಮ್ಮೆ ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಸ್ಟಾರ್ಟ್ಅಪ್ ಸಂಸ್ಥಾಪಕಿಯೊಬ್ಬರು ನಗರದ ಟ್ರಾಫಿಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಾಹಿತಿ ಅಷ್ಟರಮಟ್ಟಿಗಿನ ಟಾಕ್ ಸೃಷ್ಟಿಸಿದೆ. ಏಕೆಂದರೆ ಇವರು 04 ಕಿಲೋ ಮೀಟರ್‍‌ ಸಂಚಾರ ಮಾಡಲು ತೆಗೆದುಕೊಂಡ ಸಮಯದ ವಿವರ ನೀಡಿದ್ದಾರೆ. ಇದು ಐಟಿ ರಾಜಧಾನಿಯ ರಸ್ತೆ ಮೂಲಸೌಕರ್ಯಗಳ ಸ್ಥಿತಿ ಬಗ್ಗೆ ಕಳವಳ ಹುಟ್ಟು ಹಾಕಿದೆ.

ಸ್ಟಾರ್ಟ್‌ಅಪ್ ಸಂಸ್ಥೆಯೊಂದರ ಸಹ-ಸಂಸ್ಥಾಪಕರಾದ ದೀಪಿಕಾ ಜೈಕಿಶನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ 'ಬೆಂಗಳೂರಿನಲ್ಲಿ ಕೇವಲ 4 ಕಿಲೋಮೀಟರ್ ದೂರ ಕ್ರಮಿಸಲು ಅವರು ಬರೋಬ್ಬರಿ 35 ನಿಮಿಷಗಳು ತೆಗೆದುಕೊಂಡಿದ್ದನ್ನು ವಿವರಿಸಿ ಬೇಸರ ಹೊರ ಹಾಕಿದ್ದಾರೆ. ಅಂದರೆ ಪ್ರತಿ ಗಂಟೆಗೆ ಕೇವಲ 7 ಕಿಲೋಮೀಟರ್ ವೇಗದಲ್ಲಿ ಅವರ ವಾಹನ ಸಂಚರಿಸಿದೆ. ಇದು ಸಾಮಾನ್ಯ ವ್ಯಕ್ತಿಯೊಬ್ಬರ ಜಾಗಿಂಗ್ ವೇಗಕ್ಕೆ ಸಮಾನವಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಜನರು ಇಂತಹ ಪರಿಸ್ಥಿತಿಗೆ ಒಗ್ಗಿಕೊಂಡಿದ್ದಾರೆ' ಎಂದು ಹೇಳಿದ್ದಾರೆ. ಅವರ ಪೋಸ್ಟ್ ಭಾರೀ ವೈರಲ್ ಆಗಿದೆ.

Bengaluru Traffic Woes

ಟ್ರಾಫಿಕ್ ಸಹ ದೈನಂದಿನ ಜೀವನದ ಭಾಗ

ಜೂನ್ 13ರಂದು ಅವರು ಈ ಪೋಸ್ಟ್ ಹಂಚಿಕೊಂಡಿದ್ದು, ಇದು ಬರೀ ಬೆಂಗಳೂರಿನ ರಸ್ತೆ ದಟ್ಟಣೆಯ ಬಗ್ಗೆ ಮಾತ್ರವೇ ಇಲ್ಲ. ಇಲ್ಲಿನ ನಾಗರಿಕರ ದೈನಂದಿನ ಸಂಚಾರ ಪರಿಸ್ಥಿತಿ ಕುರಿತು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್ ಕಿರಿಕಿರಿಯು ನಿತ್ಯ ಜೀವನದ ಜಂಜಾಟದಲ್ಲಿ ಒಂದಾಗಿದೆ ಎಂಬಂತೆ ಸ್ವೀಕರಿಸಿ ಬಿಟ್ಟಿದ್ದಾರೆ. ಅದು ಜೀವನದ ಭಾಗವಾಗಿಬಿಟ್ಟಿದೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಬಿಸಿನೆಸ್ ಕಾರಿಡಾರ್ ಯೋಜನೆ PRR-1ಗೆ ಗ್ರೀನ್ ಸಿಗ್ನಲ್: 21ಕಿಮೀ ಎಕ್ಸ್‌ಪ್ರೆಸ್‌ವೇ ಡಿಟೇಲ್ಸ್ ಇಲ್ಲಿದೆ
ಬೆಂಗಳೂರಿನ ಬಿಸಿನೆಸ್ ಕಾರಿಡಾರ್ ಯೋಜನೆ PRR-1ಗೆ ಗ್ರೀನ್ ಸಿಗ್ನಲ್: 21ಕಿಮೀ ಎಕ್ಸ್‌ಪ್ರೆಸ್‌ವೇ ಡಿಟೇಲ್ಸ್ ಇಲ್ಲಿದೆ

50 ನಿಮಿಷ ಮೊದಲೇ ಮನೆ ಬಿಡಬೇಕು

ನಗರದ ನಿವಾಸಿಗಳು ತಮ್ಮ ಕೆಲಸದ ಸ್ಥಳಗಳಿಗೆ ತಲುಪಲು ನಿಗದಿತ ಸಮಯಕ್ಕಿಂತ ಸುಮಾರು 50 ನಿಮಿಷಗಳ ಮುಂಚಿತವಾಗಿ ಮನೆ ಬಿಡಲು ಒಪ್ಪಿಕೊಂಡಿದ್ದಾರೆ. ನಿತ್ಯವು ಇಂತಹ ತೊಂದರೆಗಳನ್ನು ಸಹಿಸಿಕೊಳ್ಳುವುದು ಅವರಿಗೆ ರೂಢಿ ಆಗಿದೆ. ಮುಂಬೈ ಜನರಿಗೆ ಹೋಲಿಸಿದರೆ ಬೆಂಗಳೂರಿಗರ ಈ ರಸ್ತೆ ಪ್ರೇಮವು ಒಂದು ರೀತಿಯ "ಸ್ಟಾಕ್‌ಹೋಮ್ ಸಿಂಡ್ರೋಮ್" ನಂತೆ ಭಾಸವಾಗುತ್ತಿದೆ ಎಂದು ಅವರು ಲೇವಡಿ ಮಾಡಿದ್ದಾರೆ.

ಬೆಂಗಳೂರಿನ ಸಾರಿಗೆ ವ್ಯವಸ್ಥೆ ಕುಸಿಯುತ್ತಿರುವ ಹೊತ್ತಿನಲ್ಲಿ, ಬಾಕಿ ಕಾಮಗಾರಿಗಳು ಪೂರ್ಣಗೊಳಿಸಬೇಕು, ವೇಗವಾಗಿ ಮೆಟ್ರೋ ಜಾಲ ವಿಸ್ತರಿಸಬೇಕೆಂಬ ಕೂಗಿನ ಮಧ್ಯ ಈ ಪೋಸ್ಟ್ ವ್ಯಾಪಕ ಪ್ರಚೋದನೆಗೆ ಒಳಗಾಗಿದೆ. ಏಕೆಂದರೆ ಪೋಸ್ಟ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಜನರು ರಸ್ತೆ ಸಂಚಾರ ಸಮಸ್ಯೆಗಳನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಂಡು ಜನರದ ಮೂಲಭೂತ ಸಮಸ್ಯೆ ಕುರಿತು ಕಿಡಿ ಕಾರಿದ್ದಾರೆ. ತೀವ್ರ ರೂಪದ ಚರ್ಚೆಗಳನ್ನು ಮಾಡಿದ್ದಾರೆ.

ಬೆಂಗಳೂರು ಟ್ರಾಫಿಕ್‌ ಬಗ್ಗೆ ನೆಟ್ಟಿಗರು ಹೇಳಿದ್ದೇನು?

ದೀಪಿಕಾರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರ ಪೈಕಿ ಒಬ್ಬರು 'ನಗರದ ಡ್ರೈವಿಂಗ್ ಮಾಡಲು ಪರ್ಯಾಯ ಮಾರ್ಗಗಳನ್ನು ಹುಡುಕುವುದು ಅತ್ಯಂತ ಕಷ್ಟಕರವಾಗಿದೆ. ನಗರದಲ್ಲಿ ಪಾದಚಾರಿಗಳಿಗೆ ಸೂಕ್ತವಾದ ಮೂಲಸೌಕರ್ಯಗಳ ಕೊರತೆಯೇ ಇದಕ್ಕೆ ಮೂಲ ಕಾರಣ' ಎಂದು ಕಾಮೆಂಟ್ ಹಾಕಿದ್ದಾರೆ. ಇನ್ನೊಬ್ಬರು ಪಾದಚಾರಿ ಮಾರ್ಗಗಳು ಹಾನಿ ಆಗುತ್ತಿವೆ. ಅವುಗಳ ಮೇಲೆಯೇ ವಾಹನ ಪಾರ್ಕಿಂಗ್ ಮಾಡಲಗುತ್ತದೆ. ರಸ್ತೆ ನಿರ್ಮಾಣ ಕಾಮಗಾರಿಗಳು, ಧೂಳು ಜನರಿಗೆ ಸಲೀಸಾಗಿ ನಡೆದು ಹೋಗಲು ಸಹ ಆಗುವುದಿಲ್ಲ' ಎಂದು ಎರಡನೇಯವರು ತಿಳಿಸಿದ್ದಾರೆ.

Special Train: ಮೈಸೂರು-ಮದಾರ್ ಮಾರ್ಗದಲ್ಲಿ ವಿಶೇಷ ರೈಲು ಸೇವೆ, ರಾಜ್ಯದ ಪ್ರಯಾಣಿಕರಿಗೆ ಅನುಕೂಲ, ವೇಳಾಪಟ್ಟಿ
Special Train: ಮೈಸೂರು-ಮದಾರ್ ಮಾರ್ಗದಲ್ಲಿ ವಿಶೇಷ ರೈಲು ಸೇವೆ, ರಾಜ್ಯದ ಪ್ರಯಾಣಿಕರಿಗೆ ಅನುಕೂಲ, ವೇಳಾಪಟ್ಟಿ

ದಿನೇ ದಿನೇ ಹೆಚ್ಚುತ್ತಿರುವ ಮೆಟ್ರೋ ಕಾಮಗಾರಿಗಳು, ರಸ್ತೆಗಳ ವಿಸ್ತರಣೆ ಹೆಸರಿನಲ್ಲಿ ನಡೆಯುವ ಅಗೆತಗಳು, ಇನ್ನಿತರ ಕಾಮಗಾರಿಗಳು, ರಸ್ತೆಗುಂಡಿಗಳು ಸಂಚಾರದ ವೇಗವನ್ನು ತಗ್ಗಿಸಿವೆ. ಹೀಗಾಗಿ ಇದು ಸಣ್ಣ ಅಂತರ ಕ್ರಮಿಸಲು ಬಹಳಷ್ಟು ಸಮಯ ತೆಗೆದುಕೊಳ್ಳುವವಂತೆ ಮಾಡಿದೆ ಎಂದು ಸ್ಥಳೀಯ ವ್ಯವಸ್ಥೆ ಕುರಿತು ನೆಟ್ಟಿಗರು ವಿಷಾಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+