ಅಜ್ಜ ಅಬ್ದುಲ್ಲ ಕಲಾಮ : ಕೆಆರ್‌ಎಸ್ ಮೂರ್ತಿ ಕವನ ನಮನ

Posted By:
Subscribe to Oneindia Kannada

ಹುಟ್ಟಿದ್ದು, ಹೊಸ ಉಸಿರು ಬಿಟ್ಟಿದ್ದು ಒಂದು ಕಡೆ ಎಲ್ಲೋ!
ಎಲ್ಲೋ ಒಂದು ಹಳ್ಳಿ, ಪುರ, ಪಟ್ಟಣ, ಚೆನ್ನೈ ಪಟ್ಟಣ
ಮದರಾಸಿನ ಮಧುರೈ ಮೀನಾಕ್ಷಿಯ ಅಂಗಳದಲ್ಲೋ

ಮೆಟ್ಟಿದ್ದು ಯಾವುದೊ ಶಾಲೆ ಮೆಟ್ಟಿಲು ಹಲಗೆ-ಬಳಪ ಕೈಯಲ್ಲಿ
ಗಿಟ್ಟಿಸಿದ್ದು ಮದರಾಸಿನ ಎಂಐಟಿ ಯಲ್ಲಿ ಒಂದು ಡಿಪ್ಲೋಮಾ

ಒಟ್ಟಾರೆ ಎಲ್ಲಿ ಓದಿದರೂ ತಲೆ ಮೇಲೆ ಕೊಂಡಿಯಿಲ್ಲ ಅಷ್ಟೇ [ಅಗಲಿದ ಮಹಾನ್ ಚೇತನಕ್ಕೆ ದೇಶಾದ್ಯಂತ ಅಶ್ರುತರ್ಪಣ]

Poem on Abdul Kalam by KRS Murthy

ಕಟ್ಟಿದ್ದು ಪುಟ್ಟ ಪಟಾಕಿ ರಾಕೆಟ್ಟು; ಸ್ಯಾಟೆಲೈಟು ಬಂದಾಗ
ದೊಡ್ಡ, ದೊಡ್ಡ ರಾಕೆಟ್ಟು ಕಟ್ಟಿ, ಹಾರಿಸಿ ಬಿಟ್ಟೂ ಆಯಿತು
ರಾಕೆಟ್ಟು ಅಸ್ತ್ರ, ಅಗ್ನಿ ದೇವನ ವಾಹನ, ಭಾರತಿಗೆ ಹೆಮ್ಮೆ

ಕಿರೀಟ ರತ್ನದ್ದು ತಲೆಗೆ, ಪಟ್ಟ ಕಟ್ಟಿದರು ಅಧ್ಯಕ್ಷತೆ ಭಾರತಿಗೆ
ರಿಟೈರಾಗಿ ಬಿಡುತ್ತಾನೆಯೇ ಕಲಾಮ ಕಾಲ ಕಳೆದು ಇನ್ನು?
ಪಟ ಪಟಾ ಎಂದು ತಮಿಳಿನ ಸೋಂಕು ಆಂಗ್ಲ ಬಾಷಣ [ಕನಸುಗಾರ ಕಲಾಂರ ಬದುಕಿನ ಯಶಸ್ಸಿನ ಸೂತ್ರಗಳು]

ತಾತಪ್ಪ ಮೊಮ್ಮಕ್ಕಳಿಗೆಲ್ಲಾ ಅತಿ ಪ್ರಿಯ; ಯೌವನ ಸೂಸುತ್ತಾ
ಪುಟ ಪುಟನೆ ನಡೆದು, ಹುಟ್ಟಿನ ಪುಟ್ಟತನ ಇಟ್ಟು ಎದೆಯಲ್ಲಿ
ಸಮತೋಲನ ಮುದಿವಯಸ್ಸಿನಲ್ಲೂ; ಮುಗುಳ್ನಗೆ ಪಸರಿಸುತ್ತಾ[ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]

ಹೊಂಟ, ಹೊಂಟೇ ಹೋದ ಆಗಲೇ; ಅಗಲಿ ಪುಟ್ಟ ಮಕ್ಕಳನ್ನೆಲ್ಲಾ
ಪುಟಾಣಿ ಪ್ರಪಂಚಕ್ಕೆಲ್ಲಾ ಹಂಚಿದ್ದ ಒಲವು ಮಾತ್ರ ನಂದುವುದಿಲ್ಲ
ಹುಟ್ಟಿಬರಲಿ ಕೋಟಿ ಕೋಟಿ ಪುಟಾಣಿಗಳು ನಿನ್ನಂತೆ ಭಾರತದಲ್ಲಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Kannada poem on Late Dr APJ Abdul Kalam, scientist and former President of India, by KRS Murthy. Abdul Kalam breathed his last while delivering lecture in Shillong on Monday, 27th July, 2015.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ