ಕವನ : ತುಮುಲದ ಮನಕೆ ಸಮಯದ ಲಗ್ಗೆ ಬೇಕೆ?

Posted By: ಸ್ನೇಹ ಮುತಾಲಿಕ್ ದೇಸಾಯಿ
Subscribe to Oneindia Kannada

ಕುಂಟು ನೆಪಗಳ ನಂಟು ನಮಗೇಕೆ

ಪ್ರೀತಿಗೆ ಜಗತ್ತಿನ ಸಮ್ಮತಿ ಬೇಕೆ?

ಮಹಾದಾಸೆಗಳೇನಲ್ಲ; ಪುಟ್ಟ ಕನಸುಗಳಿವು
ನದಿಯಲಿ ಮಿಂದು, ಸಾಗರ ಸೇರುವ
ಮುಗ್ಧ ಬಯಕೆಯ ತೊರೆಗಳಷ್ಟೇ...

Oh my darling, I am eagerly waiting for you

ಸಂಜೆಯು ಕಳೆದು, ಕತ್ತಲು ಕವಿದರೂ
ಬರುವೆ ನೀನೆಂದು, ಬರಲಾರದೆ ಹೋದರೆ
ತುಮುಲದ ಮನಕೆ ಸಮಯದ ಲಗ್ಗೆ ಬೇಕೆ?

ಎಂದಾದರೂ ಸರಿ, ಬರುವೆ ನೀನೆಂದು
ಎವೆ ಮಿಟುಕದೆ ಕಾಯುವೆ
ಕಗ್ಗತ್ತಲ ಮೌನದೊಳಗೆ ಮುಳುಗಿ
ಹೊತ್ತು ಮೀರುವ ಮುನ್ನ ನೀ ಬರುವೆಂದು...

ಕಂಗಳ ಬೆಳಕಿನ ಹೊಳಪನು ನೀ ಕಾಣಬೇಕೆ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Oh my darling, I am eagerly waiting for you. Hope you will not disappoint with me. A Kannada poem by Sneha Mutalik Desai, Singapore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ