ನೀನಿರಲೇ ಇಲ್ಲ ಮಲ್ಲಿಗೆಯು ಘಮಿಸಿದಾಗ

By: ದಿನೇಶ್ ಉಡುಪಿ, ಮೆಂಫಿಸ್, ಯುಎಸ್ಎ
Subscribe to Oneindia Kannada

ನೀನಿರಲೇ ಇಲ್ಲ
ಮಲ್ಲಿಗೆಯು ಘಮಿಸಿದಾಗ

ಮನೆಯೊಳಗೂ ಬಂದಿತ್ತು
ನೆನಪುಗಳ ಮಾಲೆಯಾಗಿ
ಮುಡಿಯೇರದೆ

ಹಾಗೇ ನಿಂತಿತ್ತು

My darling where you were when Jasmine blossomed

ರಂಗೊಲಿಯು ನಕ್ಕಿತ್ತು
ನೀನಿಟ್ಟ ಚುಕ್ಕಿಯಲಿ
ಮುಟ್ಟಲಾಗದೆ
ಹಾಗೇ ಉಳಿದಿತ್ತು [ಇಲ್ಲೇ ಇರು ಅಲ್ಲೇ ಹೋಗಿ ಮಲ್ಲಿಗೆಯ ತರುವೆನು]

ಸೂರ್ಯಕಿರಣ ಬಂದಿತ್ತು
ನೀಬಿಟ್ಟ ಪಲ್ಲಂಗದಲಿ
ಜಡವಾಗಿ
ಹಾಗೇ ಮಲಗಿತ್ತು [ನೆನಪಾದರು ನರಸಿಂಹಸ್ವಾಮಿ]

ರಾಧೆಯಾಗಬಹುದಿತ್ತು
ಕಣ್ಣ ತೇವ ಇಲ್ಲದಿರೆ
ನೆನಪುಗಳು
ಯಾತನೆಯಾಗಿತ್ತು

ನೀನಿರಲೇ ಇಲ್ಲ
ಮಲ್ಲಿಗೆಯು ಘಮಿಸಿದಾಗ [ದಿನೇಶ್ ಕವನ : ಸಂಜೆಗಳು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
My darling where you were when jasmine blossomed. A Kannada poem by Dinesh Udupi, Memphis, USA.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ