ಮುತ್ತಿನ ಕಿಮ್ಮತ್ತು ಗಮ್ಮತ್ತೇನೆಂದು ಬಲ್ಲವರಾರು?

By: ಮೂಲ್ಕಿ ನಾಗಭೂಷಣ
Subscribe to Oneindia Kannada

ಪ್ರೀತಿ ವಾತ್ಸಲ್ಯದ ಮುದ್ದಿನ ಮುದ್ರೆಯೇ ಮುತ್ತು
ಬಾಲ್ಯ ಯೌವನ ಮುದಿತನ ಎಲ್ಲಾ ಪ್ರಾಯದಲ್ಲೂ
ಮುದ ನೀಡುವ ಮಧುರಸ ರಹಸ್ಯ ಸೋಮರಸ
ರಾಸಾಯನವಾಗಿ ವಿನಿಮಯವಾದರೆ ಇಲ್ಲ ಆಪತ್ತು

ವಿಪತ್ತು ಕುತ್ತು ಕತ್ತಿಯಿಂದ ಕತ್ತುಳಿಸುವ ಮದ್ದಾಯಿತು
ಅಕ್ಕರೆಯ ಆಪ್ತ ಪರಮಾಪ್ತರೆನಿಸಿದವರ ಈ ಸೊತ್ತು

ಸಿಕ್ಕಿದಾಗ ಮತ್ತು ಮುತ್ತಿನ ಗಮ್ಮತ್ತು ಮಹಾ ಸಂಪತ್ತು

Happiness is like a kiss, share it

ಎರಡು ತುಟಿಗಳ ಮೇಲೆ ಕೆಳಗೆ ನಡುವೆ
ಕೆನ್ನೆ ಕಣ್ಣು ದ್ವಯಗಳ ಗಲ್ಲ ಗುಳಿಗಳ ಮೇಲೆ
ಹಣೆ ತಲೆ ಹೆಂಗುರುಳು ಕೈ ಮೈ ಮೇಲೆಲ್ಲಾ
ಮುತ್ತಿಕ್ಕಿದಾಗ ಒಲುಮೆಯಿಂದ ನಾಚಿದಾಗ

ಸೂರ್ಯೋದಯ ಅಸ್ತಮಾನಗಳ ನಸುಗೆಂಪು
ಮಲ್ಲಿಗೆಯಾದ ತನುಮನ ಹೃದಯದಲ್ಲಿ
ಸೊಂಪಾದ ತಂಪು ಧೈರ್ಯೋಲ್ಲಾಸ ನೀಡುವ
ದಣಿವಾರಿಸುವ ಸಂಜೀವಿನಿ ಅಮೃತಪಾನ ಸಮಾನ

ಮಮಕಾರದ ದಿವ್ಯಸಾರವಿದೊಂದು ಚಮತ್ಕಾರ
ಭವ್ಯತೆಯಾ ವೈಭವ ತಿಳಿದಿಹರೆಲ್ಲಾ ಮಾನವ ಲೋಕದಲಿ
ದೇವ ದಾನವ ಕಿನ್ನರ ಯಕ್ಷ ಗಂಧರ್ವ ಲೋಕಗಳಲ್ಲೂ
ಅಳಿಸಲಾಗದ ಗುರುತು ಹೆಗ್ಗುರುತು

ನಲ್ಲ ನಲ್ಲೆ ಪ್ರಿಯಕರ ಪ್ರಿಯೆಯಲ್ಲೂ
ಸ್ನೇಹಿತರೂ ಮಿತ್ರ ಅನುಬಂಧನದಲ್ಲೂ
ಸಂಬಂಧಿಕ ಬಂಧು ಬಾಂಧವರಲ್ಲೂ
ಪವಿತ್ರ ಸತಿಪತಿ ಪತಿವ್ರತೆಯರಲ್ಲೂ

ವಿಚಿತ್ರ ಆಕರ್ಷಣೆ ಪ್ರೇಮ ಕಾಮ ಲೋಕದಲ್ಲಿ
ಕಾಮಿಸುವ ದಾಹ ತೀರಿಸುವ ದಾಸ ದಾಸಿಯರಲ್ಲೂ
ಮಾತಾ ಪ್ರಮಾತಾ ಪ್ರಮಾತಾಮಹಾರಲ್ಲೂ
ಪಿತ ಪ್ರಪಿತ ಪ್ರಪಿತಮಹಾರಲ್ಲೂ

ಮುತ್ತಿನ ಕಿಮ್ಮತ್ತು ಏನೆಂದು ಅದೇನೆಂದು
ಬಲ್ಲವರಾರು? ಗುಟ್ಟುರಟ್ಟು ಆಗಿದೆಯೇ?
ಇಲ್ಲ! ಗುಟ್ಟುರಟ್ಟು ಆಗಬಹುದೇ?
ಮುತ್ತು ಕೊಟ್ಟು ದಣಿದವರು ಯಾರು ಇಲ್ಲ
ಬಲ್ಲವರು; ಅದಕೆ ಸೋತು ಗೆದ್ದು ಗೆಲುವವರೇ.....

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Happiness is like a kiss. You must share it to enjoy it. Kannada poem on Kiss by Moolky Nagabhushan.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ