ಭಯೋತ್ಪಾದನೆ ವಿರುದ್ಧ ಶಾಂತಿ ಮಂತ್ರ

ವಿಶ್ವ ಕುಟುಂಬದ ಮಂತ್ರವ ಸಾರಿ
ಶಾಂತಿಯ ಶಕ್ತಿಯನ್ನು ಹಾಡಿ ಸಾರಿ
ಹಾಡಿ ಹಾಡಿ ಎಲ್ಲೆಡೆ ಒಂದಾಗಿ ಹಾಡಿ
||ಹಾಡಿ ಹಾಡಿ ||
ಪ್ರೀತಿಯ ಬೀಜವು ಎಲ್ಲರೆದೆಯಲ್ಲಿ ಮೂಡಲಿ
ಜಾತಿ ಧರ್ಮದ ದ್ವೇಷವು ನಿರ್ನಾಮವಾಗಲಿ
ಜಗದ ಎಲ್ಲಾ ಶಾಂತಿ ಮಂತ್ರವು ಮೊಳಗಲಿ
ಎಲ್ಲರ ನಡುವೆ ಸಂತಸವು ನೆಲಸಲಿ
ಈ ಜಗವು ಉಳಿಯಲಿ.. ಈ ಜಗವು ಬೆಳೆಯಲಿ
||ಹಾಡಿ ಹಾಡಿ ||
ಮನುಕುಲದ ರಕ್ಷಣೆಗಾಗಿ ಈ ಹಾಡು ಹೊಮ್ಮಲಿ
ಎಲ್ಲರ ಕಿವಿಯಲ್ಲೂ ಶಾಂತಿ ಮಂತ್ರ ಗುನುಗಲಿ
ಶಾಂತಿಯ ಈ ಹಾಡು ಚಿರ ನೂತನವಾಗಲಿ
ಪ್ರೀತಿಯು ಎಲ್ಲರೆದೆಯಲ್ಲೂ ಮೈತಾಳಲಿ
||ಹಾಡಿ ಹಾಡಿ ||











Click it and Unblock the Notifications