ಮರುಳು ಜಾತ್ರೆಯ ಜನಗಳು
- ವಿಕ್ರಂ ಹತ್ವಾರ್, ನ್ಯೂಜರ್ಸಿ
ಒಂದೊಂದು ಹನಿಯೂ ಮನಸಿಗೆ ಸಿಹಿ ಮೆತ್ತಿಸುವಾಗ,ನಿನ್ನ ಮುತ್ತಿನ ಪಸೆ ಸಾಗರವಾಗಿ,
ಮತ್ತೆ ಮತ್ತೆ ಬಂದಪ್ಪಲಿಸುವಾಗ,
ಈ ಮಧುವನ್ನೇಕೆ ಕಹಿಯೆನ್ನುತ್ತಾರೆ?
ನಖಶಿಖಾಂತ ಜೀವಸೆಳೆಯಾಗಿ ಸಂಚರಿಸಿ,
ನಿನ್ನ ಹಾಸದ ಮಿಂಚು ಗುಣಿಗುಣಿಸಿ,
ಮೃತ್ಯುವಿನಿಂದೆಳೆತಂದು ಅಮರ್ತ್ಯಗೊಳಿಸುವ
ಸಂಜೀವಿನಿಯನ್ನೇಕೆ ವಿಷವೆನ್ನುತ್ತಾರೆ?
ಒಂದೊಂದೇ ಗುಟುಕು ಸಾಯುಜ್ಯವಾಗುವ ದಿವ್ಯ ಮುಹೂರ್ತದಲ್ಲಿ ಪ್ರಿಯೆ,
ನಿನ್ನ ಆಲಿಂಗನದಲೆಗಳು ಆವರಿಸಿ
ಬ್ರಹ್ಮಾಂಡವನ್ನೇ ತೇಲಿಸಿ ಹಾರಿಸುವಾಗ,
ಜನರೇಕೆ ನನ್ನನ್ನು
ಕುಡುಕನೆನ್ನುತ್ತಾರೆ?












Click it and Unblock the Notifications