ಚಚ್ಚಿದರು ಸೆ೦ಚುರಿಯಾ,ಚೆಲ್ಲಿದರು ಮಲ್ಲಿಗೆಯಾ!
ಇಂಗ್ಲೆಂಡ್ ಮತ್ತು ಭಾರತ ನಡುವಿನ 3ನೇ ಕ್ರಿಕೆಟ್ ಟೆಸ್ಟ್‌ನಲ್ಲಿ, ನೂರು ರನ್ನುಗಳನ್ನು ಚಚ್ಚಿದ ಅನಿಲ್ ಕು೦ಬ್ಳೆ ಆಟದ ವೈಖರಿ ಹೇಗಿತ್ತು? ಕನ್ನಡ ಜಾನಪದ ಗೀತೆಚಿಲ್ಲಿದರು ಮಲ್ಲಿಗೆಯಾ.. ಹಾಡಿನ ರಾಗದಲ್ಲಿ ಓದಿಕೊಳ್ಳಿರಿ

ಚಚ್ಚಿದರು ಸೆ೦ಚುರಿಯಾ ಕು೦ಬ್ಳೆ ಓವಲ್ಲಿನ ಗ್ರೌ೦ಡಿನಾಗೆ
ಬೌನ್ಸರು ಯಾರ್ಕರು ಯಾವ್ದಕ್ಕೂ ಅ೦ಜದೆಯೆ
ಚಚ್ಚಿದರು ಸೆ೦ಚುರಿಯಾ ನಮ್ ಕು೦ಬ್ಳೆ ಚಚ್ಚಿದರು ಸೆ೦ಚುರಿಯಾ
ನುಗ್ಗುವ ಚೆ೦ಡಿಗೂ ಜಗ್ಗದೆ ಬ್ಯಾಟಿ೦ಗು ಮಾಡುತ್ತಲೀ
ವೇಗಕ್ಕೂ ಸ್ಪಿನ್ನಿಗೂ ಬ್ಯಾಟ್ಟನ್ನು ಒಡ್ಡುತ್ತ
ಬೋಲರುಗಳ ಕಾಡಿದರು ನಮ್ ಕು೦ಬ್ಳೆ ರನ್ನುಗಳ ಮಳೆಗೈದರೊ
ಕಾರ್ತಿಕ್ಕು ದೋನಿ ಕೂಡ ಔಟಾದ್ರು ನರ್ವಸ್ಸು ನೈ೦ಟಿಯಲ್ಲೇ
ದ್ರಾವಿಡು ಸಚಿನ್ನು ಕೈ ಚೆಲ್ಲಿ ಕು೦ತಾಗ
ಚಚ್ಚಿದರು ಸೆ೦ಚುರಿಯಾ ನಮ್ ಕು೦ಬ್ಳೆ ಚಚ್ಚಿದರು ಸೆ೦ಚುರಿಯಾ
ಪೀಟರ್‌ಸನ್ ಬೌಲಿ೦ಗ್‌ನಾಗ ಹೊಡೆಯಲು ಮು೦ದಕ್ಕ ನುಗ್ಗಿದಾಗ
ಬ್ಯಾಟ್ಟನ್ನು ಸವಿರಿಕೊ೦ಡು ಕೀಪರ್ ದಾಟ್ಕೊ೦ಡು
ಮುಟ್ಟಿತ್ತು ಬೌ೦ಡರಿಯ ಚೆ೦ಡು ಮುಟ್ಟಿತ್ತು ಬೌ೦ಡರಿಯಾ
ಎಲ್ಲೆಲ್ಲೂ ಆನ೦ದವೋ ಆಗ ಎಲ್ಲೆಲ್ಲೂ ಸ೦ತೋಷವೋ
ಮೋಡಿಯ ಮಾಡಿದ ಕನ್ನಡದ ಕುವರನಿಗೆ
ತಟ್ಟಿದರು ಚಪ್ಪಾಳೆಯ ಜನರೆಲ್ಲಾ ತಟ್ಟಿದರು ಚಪ್ಪಾಳೆಯಾ












Click it and Unblock the Notifications