ದ್ರಾವಿಡನ ಮನವಿ
- ಅಚಲಾ ಸೇತೂ-ರಾ-ಮ್, ಅಟ್ಲಾಂಟ
ಸಿಟ್ಟಾಗದಿರಿ ಕ್ರಿಕೆಟ್ ಪ್ರೇಮಿಗಳೇಕೇಳಿರಿ ಎನ್ನಯ ಮನವಿಯನು
ಆಲಿಸದಿದ್ದರೆ ದೈನ್ಯದ ನುಡಿಗಳ
ತೊರೆಯುವೆ ನಾಯಕ ಪದವಿಯನು!
ಬಾಂಗ್ಲಾ ಲಂಕೆಯ ಅಂಕೆಗೆ ಡೊಂಕಾಗಿ
ಹಿಡಿದಿರುವೆವು ಕೈಯಲಿ ಚಿಪ್ಪು
ಕಿಚ್ಚನು ಹಚ್ಚಿ ರಚ್ಚೆಯ ಮಾಡಲು
ಬರುವುದೆ ಕೈಯಿಗೆ ವರ್ಲ್ಡ್ ಕಪ್ಪು
ದೋನಿಯ ನಂಬಿ ಮುಳುಗಿದೆನಲ್ಲಾ
ಯುವರಾಜರ ಬಾಜ ಬರಿ ತೊದಲು
ಕುಂಬಳೆ ಉತ್ತಪ್ಪ ಅಯ್ಯೋ ಸಾಕಪ್ಪ
ಗೊಡ್ಡು ಸಾರಿಗೆ ನಾನ್ ಶರಣು
ಹರಿಭಜನೆಯು ಸರಿ ಫಲ ಕೊಡಲಿಲ್ಲಾ
ವ್ಯರ್ಥವು ಪ್ರಾರ್ಥನೆ ಚಾಪೆಲ್ಗೆ
ಆಡಿಸುವಾತನ ಕೈಲಿದೆ ಸೂತ್ರ
ನಮ್ಮೆಲರದೂ ಬರಿ ಪಾತ್ರ
ಪಾಕೂ ಸೋತಿದೆ ಯೋಚಿಸಿ ನೋಡಿ
ಬೇವಿನ ವರುಷಕೂ ಬೆಲ್ಲದ ನಿಮಿಷ
ಗೆದ್ದೇ ಗೆಲುವೆವು ಮುಂದಿನ ಬಾರಿ
ಈ ಸರತಿಗೆ ಸಾರಿ... ಸಾರಿ!.












Click it and Unblock the Notifications