ಕ್ರಿಕೆಟ್ ಹನಿಗಳು
ವಿಶ್ವಕಪ್ ಕನಸಿನ ಮನೆಗೆ ಕಲ್ಲೆಸೆದ ಟೀಮ್‌ಇಂಡಿಯಾ ಬಗ್ಗೆ...
ಒಂದು ಎರಡುವಿಶ್ವಕಪ್ಗೆ ಹೊರಡು
ಮೂರು ನಾಲ್ಕು
ಜಾಹೀರಾತು ಬೇಕು
ಐದು ಆರು
ಕಡಿಮೆ ಸ್ಕೋರು
ಏಳು ಎಂಟು
ಕಟ್ಟು ಮೂಟೆ ಕಟ್ಟು
ಒಂಬತ್ತು ಹತ್ತು
ಮರ್ಯಾದಿ ಹರಾಜಾಯ್ತು
***
ಭಾರತ ಸೋಲಲು
ಕಾರಣ ಎರಡೇ ಎಂದಿರಾ?
ಬಾಂಗ್ಲಾ ದೇಶ ಕಟ್ಟಿಸಲು
ನೆರವಾದ ಇಂದಿರಾ
ಮತ್ತು
ಆಂಗ್ಲ ಭಾಷೆ(?) ಮಾತನಾಡುವ
ಮಂದಿರಾ
***
ತ್ರೇತಾಯುಗದಲ್ಲಿ
ಲಂಕೆಯ ಸಂಪೂರ್ಣ
ಸುಟ್ಟಿದ್ದರೆ ಹನುಮಂತ,
ನಮ್ಮವರು ಆಡಬಹುದಿತ್ತು
ವಿಶ್ವಕಪ್‌ನಲ್ಲಿ
ಎಂಟರ ಹಂತ
***
ಕಂಡಲ್ಲಿ
ರಾಹುಲ್,ಗಂಗೂಲಿ,
ಸಚಿನ್, ಚಾಪೆಲ್ಲು
ಜನ ಕೈಗೆತ್ತುಕೊಳ್ಳುತ್ತಿದ್ದರಂತೆ
ಕಲ್ಲು
ಇಂಜಿ, ಅಫ್ರಿದಿ, ಮತ್ತಿತರರು
ನಡುಗುತ್ತಿದ್ದಾರಂತೆ ನೆನೆಸಿಕೊಂಡು,
ಚಢಿಯೇಟು, ಗಲ್ಲು
***
ಹೆಚ್ಚಾಗಿದ್ದೆ ಕಾರಣವಂತೆ
ನಮ್ಮವರಿಗೆ ಬಣ್ಣಬಣ್ಣದ ಜಾಹೀರಾತು
ಮೊದಲ ಪಂದ್ಯದಲ್ಲೇ
ನಿಜ ಬಣ್ಣ ಜಾಹೀರಾಯ್ತು












Click it and Unblock the Notifications