ಕತ್ತರಿಸು ಭ್ರಷ್ಟರ ಕೈಗಳನ್ನ
- ಪ್ರಕಾಶ್ ರಾವ್ ಪಯ್ಯಾರ್, ಶಾರ್ಜಾ

ಸತ್ಯ ಅಸತ್ಯಗಳ ನಡುವೆ ಸರಳ ರೇಖೆ
ಸತ್ಯದ ಕಡೆ ಪರಿಮಿತ
ಅಸತ್ಯದ ದಾಸ್ಯ ಅಪರಿಮಿತ
ಗುರು-ಶಿಷ್ಯ, ಅಣ್ಣ-ತಮ್ಮ
ಸಂಬಂಧಗಳ ಬಂಧ
ತತ್ತರಿಸಿದ ಪಾಲ್ಗುಣ
ಶೀತೊಷ್ಣಗಳ ಸುಖ
ವಿಷಮ ನಿಯಮಿತ
ಅಮೆ ಎಳೆದಂತೆ
ಒಳ ಹೊರಗೆ ಅಂಗಾಂಗ
ಇರಲಿ ಇಂದ್ರಿಯದ ಹಿಡಿತ
ಹುಟ್ಟು ಸಾವಿನ ವೇಶ
ಹಳೆ ಅಂಗಿ ಕಳಚಿ
ಹೊಸತೊಂದು ತೊಟ್ಟಂತೆ
ಬದುಕಿ ಸತ್ತಿರುವುದಕಿಂತ
ಸತ್ತು ಬದುಕುವುದು ಲೇಸು
ಆಗು ಸ್ಥಿತ ಪ್ರಜ್ಞ
ಎಚ್ಚೆತ್ತು ಕತ್ತರಿಸು
ಭ್ರಷ್ಟರ ಕೊಳಕು ಕೈಗಳನ್ನ
ಎಂದ ಪೂರ್ಣಪ್ರಜ್ಞಾ












Click it and Unblock the Notifications