ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆ.. ನಾನು ಒಬ್ಬ ಬಡಪಾಯಿ!
ಕೆ.ಎಸ್. ನರಸಿಂಹಸ್ವಾಮಿಯವರ ‘ ಹೆಂಡತಿಯಾಬ್ಬಳು ಮನೆಯಾಳಗಿದ್ದರೆ.... ’ ಭಾವ ಗೀತೆಯ ಭಾವಾರ್ಥವನ್ನು ಬದಲಿಸಿ ಬರೆದರೆ ಹೇಗಿರಬಹುದು.. ಸಖತ್ ಮಜ ಇರತ್ತೆ...ಓದಿ ಎನ್‌ಜಾಯ್ ಮಾಡಿ..
ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆಖರ್ಚೋ ಖರ್ಚು ರುಪಾಯಿ
ಹೆಂಡತಿಯಾಬ್ಬಳು ಹತ್ತಿರವಿದ್ದರೆ
ನಾನು ಒಬ್ಬ ಬಡಪಾಯಿ!!
ಹೆಂಡತಿಯಾಬ್ಬಳು ಮನೆಯಾಳಗಿದ್ದರೆ
ಆರದು ಕೋಪದ ದೀಪ
ಹೆಂಡತಿ ತೌರಿಗೆ ಹೊರಡುವೆನೆಂದರೆ
ಬಿಡುಗಡೆ ಆಯಿತು ಶಾಪ.
ಹೆಂಡತಿಯಾಂದಿಗೆ ದಿನದಿನ ಹಗೆತನ
ಭಯವೇ ತಂದಿದೆಯಲ್ಲಾ
ಹೆಂಡತಿ ಎದುರಿಗೆ ಹೆಂಡಾ ಕುಡಿಯುವ
ಗುಂಡಿಗೆ ನನಗಿಲ್ಲಾ.
ಕೈ ಹಿಡಿದವಳು , ಕೈ ಬಿಡಬಹುದು
ಮಾಡುವೆ ಅಡಿಗೆ ಇಂದಿನಿಂದ
ಜಡೆಯು ಜುಟ್ಟು ಇಲ್ಲದ ಇವಳು
ಬಂದದ್ದು ಬೇರೆ ದೇಶದಿಂದ
ಯುದ್ದವ ಮಾಡಲು ನಿಂತಿಹಳಲ್ಲ
ನನ್ನಮ್ಮನು ಹತ್ತಿರವಿಲ್ಲ
ಕೆನ್ನೆಗೆ ಏಟು ತಪ್ಪುವುದಿಲ್ಲ
ನೋಟಿಗೆ ಬಡತನವಲ್ಲ
ತಾಳಿಯನಂತು ತೊಡುವುದೇ ಇಲ್ಲ
ಶ್ರೀಮಂತನ ಮಗಳೀ ಬಾಲೆ.
ಮುಖಕ್ಕೆ ಮಂಗಳಾರತಿ ಎತ್ತಿಹಳಲ್ಲ
ಇವಳು ಕೋಪದ ಜ್ವಾಲೆ.
ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆ
ಖರ್ಚೋ ಖರ್ಚು ರುಪಾಯಿ
ಹೆಂಡತಿಯಾಬ್ಬಳು ಹತ್ತಿರವಿದ್ದರೆ
ನಾನು ಒಬ್ಬ ಬಡಪಾಯಿ!!












Click it and Unblock the Notifications