ನೀನು-ನಾನು

ಚಳಿಗಾಲದ ಬೋಳು ಮರಗಳ ಸಾಲು
ಒಡೆದ ಮೋಡದ ಜಿಟಿ ಜಿಟಿ ಹಾಡುಗಳು
ಕತ್ತಲಲಿ ನೀನು-ನಾನು

ತುಂಟ ಚಂದ್ರಮನಿಗೆ ಇಣುಕುವ ಚಪಲ
ರೋಹಿಣಿಯ ಸಖಿಯರಿಗೆ ಕೆಟ್ಟ ಕುತೂಹಲ
ಬೆತ್ತಲಲಿ ನೀನು-ನಾನು

ನಿಶ್ಯಬ್ದ ಮರುತನಿಗೆ ಕದ್ದು ಕೇಳುವ ಬಯಕೆ
ಹರಿವ ನದಿಗಳಿಗೀಗ ಮಂಜುಗಡ್ಡೆಯ ಹೊದಿಕೆ
ಮತ್ತಿನಲಿ ನೀನು-ನಾನು

ಸಂತಸದಿ ಅರಳುತಿಹ ಬ್ರಹ್ಮಕಮಲದ ಜೋಡಿ
ಹಿಗ್ಗಿನಲಿ ಗುನುಗುತಿಹ ಜೀರುಂಡೆಗಳ ಮೋಡಿ
ಸ್ಫೂರ್ತಿಯಲಿ ನೀನು-ನಾನು

ಅಪ್ಪುಗೆಯ ಸೆರೆಯಲ್ಲಿ ಹಸಿ ಹಸಿ ಮುತ್ತುಗಳುಬಿಸಿಯುಸಿರ ಕಾವಿನಲಿ ಜೀವಿತದ ಆಟಗಳುಮಿಲನದಲಿ ನೀನು-ನಾನು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+