ವಾಯ್ಲೆಟ್ ಜೆ ಪೆರೇರಾ, ಯು.ಎ.ಇ.
ಭೂಮಿ ಅಲುಗುತ್ತಿದೆ

- ವಾಯ್ಲೆಟ್ ಜೆ ಪೆರೇರಾ, ಯು.ಎ.ಇ.
[email protected]
ಯಾಕೆ ನೀ ತ್ರಾಣ ಕಳಕೊಂಡಿದ್ದೀ?
ಎಲ್ಲಿ ಹೋಯಿತು ನಿನ್ನ ಆ ಶಕ್ತಿ
ತೋರಿಸುತ್ತಿ ಈಗೀಗ ನಿಶ್ಶಕ್ತಿ!
ಇದ್ದಿ ನೀ ತುಂಬಾ ಬಲಿಷ್ಟ
ಹೀಗಾದರೆ ನಮಗೆ ತುಂಬಾ ಕಷ್ಟ
ತೋರಿಸುವಾಗ ನೀ ಆಲಸ್ಯ
ಬಲಿಯಾಗುತ್ತಾರೆ ಜನರು ಸಹಸ್ರ
ಆಗುವಾಗ ನೀ ನಿತ್ರಾಣ
ಹೆದರುತ್ತೇನೆ ಕಳಕೊಳ್ಳುವೆನೆಂದು ಪ್ರಾಣ
ದೃಷ್ಟಿ ಹಾಯಿಸುವಾಗ ನನ್ನ ಸುತ್ತ
ನೋಡಿದೆ ನೀ ಆಗಿದ್ದೆ ಜಲಾವೃತ
ನಿನ್ನ ಆ ಅಂಗಾಂಗಗಳು ಹಲವು
ಮಣ್ಣು, ಪರ್ವತ ಮತ್ತು ಜಲವು
ಭುಗಿಲೇಳುತ್ತವೆ ಒಂದರಿಂದ ಒಂದು
ಬಲಿಯಾಗುತ್ತಿದ್ದಾರೆ ಜನ ಸಾವಿರಾರು
ಕರುಣೆಯ ತೋರು ಆ ಮುಗ್ದರ
ನಿನ್ನ ಸುಖ ಅನುಭವಿಸಲು ಹುಟ್ಟಿದವರ
ಮಾಡಬೇಡ ಅಂತ್ಯ ನಾಳೆಯ ನಿರೀಕ್ಷಕರ,
ಆಸೆಯ ಕಂಗಳ ಹುರುಪಿನ ಬಾಲಕರ.











Click it and Unblock the Notifications