ಸುಕುಮಾರ್ ಎಸ್. ರಘುರಾಂ
ನಂದಗೋಕುಲ

- ಸುಕುಮಾರ್ ಎಸ್. ರಘುರಾಂ
[email protected]
ಹಸುರಿನ ಹೊದಿಕೆಯು ಬಳುಕುತಲಿತ್ತು
ಯಮುನಾ ತೀರದ ಮರಗಳ ನೆರಳಲಿ
ಹರೆಯದ ಬಾಲೆಗೆ ಹಸಿ ಬಿಸಿ ಮುತ್ತು
ಗೋಪಿಯ ಮಣ್ಣಿನ ಮಡಕೆಯ ಒಡೆಯಲು
ತೂರಿದ ಕಲ್ಲದು ಸಣ್ಣದೆ ಇತ್ತು
ನೆರೆಹೊರೆ ಮನೆಗಳ ಹಾಲು ಮೊಸರುಗಳ
ಚಂದದ ಬಿಂದಿಗೆ ಗೊಲ್ಲರ ಸ್ವತ್ತು
ಬಿಸಿಲಿನ ಝಳದಲಿ ನೀರಿನ ದಡದಲಿ
ಸೀರೆಯ ಕದಿಯುವ ಚೋರನ ಮತ್ತು
ಸಂಜೆಯ ರವಿಯಲಿ ಕೆಂಪನು ಹುಡುಕುವ
ತುಂಟನ ಪ್ರಿಯತಮೆ ರಾಧೆಗೆ ಗೊತ್ತು
ಉದ್ಧವ ಸುಧಾಮರೆಲ್ಲರ ಜೊತೆಯಲಿ
ಕುಣಿಯುತ ಕೊಳಲನು ನುಡಿಸುವ ಹೊತ್ತು
ಪ್ರಕೃತಿಯ ಚೆಲುವನು ಸವಿಯುವ ಕಣ್ಣಲಿ
ಸೊಗಸಿನ ಸ್ವರ್ಗದ ಭರವಸೆಯಿತ್ತು











Click it and Unblock the Notifications