ನಮ್ಮ ನಡುವಿನ ನಿತ್ಯ ಸುಮಂಗಲಿಯರು!
ತೊಗಲ ಸವೆಸಿ ಬೆವರ ಸುರಿಸಿ, ತುತ್ತಿಗಾಗಿ ಬೆತ್ತಲಾಗುವ ನಿತ್ಯ ಸುಮಂಗಲಿಯರನ್ನು ಹೊತ್ತ ಬಂಡಿ ಮುಂದೆ ಸಾಗುತ್ತಿದೆ...
ಈ ಬಂಡಿಯಲ್ಲಿ ನಿಮ್ಮ ಪದ್ಯ, ಕತೆ, ಲೇಖನ, ಅನಿಸಿಕೆ, ಅಭಿಪ್ರಾಯವೂ ಇರಲಿ...
ಪದ್ಯ 7 : ಮಾನ್ಯರ ನಡು ನಡುವೆ
- ಗೋಪಿನಾಥ್ ರಾವ್, ದುಬೈ
[email protected]
ದೂರುವ ಕೆಂಪು ಕುಂಕುಮದಾಕೆ
ನಮ್ಮನಿಮ್ಮೆಲ್ಲರ ಪರಿಚಾರಿಕೆ
ಇಷ್ಟು ಪರಿಚಯ ಸಾಕೇ ?
ಅಥವಾ ಮೂಂದುವರೆಸಬೇಕೇ?
ಮೀಸೆ ಮೂಡಿಬರುವಾಗ ಗುರ್ತಿಸಿ
ಆಸೆ ಮೂಡುವಾಗ ತಾಳಕ್ಕೆ ನರ್ತಿಸಿ
ಹಾಸೆ ಹಾಸಿ ಕೂರಿಸಿ ಸ್ಪರ್ಶವೀಣೆ ಬಾರಿಸಿ
ಲೋಕ ಬಚ್ಚಿಟ್ಟ ನಿಧಿ ತೆರೆದು ತೋರಿಸಿ
ನಮ್ಮ ನಿಮ್ಮನ್ನು ರಮಿಸಿದಾಕೆ
ಬಲಗೊಂಡ ಚಪಲ ಮುನ್ನುಗ್ಗೆ
ನೆಲೆ ಶಿಥಿಲಗೊಂಡು ಆಗಿಂದಾಗ್ಗೆ ಲಗ್ಗೆ
ಮಾಟದ ಕಟಿ ಆತುರದ ತುಟಿ
ಕಾತರದ ಕ್ಷಣ ಕೋಟಿ
ಇವಳೇ ಕೈಗೆಟಕುವ ಸಿನೆಮಾ ನಟಿ
ಹರೆಯ ಉಕ್ಕಿ ಹರಿವಾಗ ಸಿಗುವ ದೋಣಿ
ಮರೆಯಾಗಿ ಬರುವವರ ಮನ್ನಿಸಿ ಮಾನ್ಯರನ್ನಾಗಿಯೇ ಇರಿಸಿ
ಚಿಗುರಿ ಬುಗುರಿಯಂತೆ ಮರುಳುಮಾಡಿ
ನಗುವ ಅವಳೂ ಯಾವುದೋ ತಾಯಿಯ ಮಗಳು
ಹಗಲೇ ಮಿನುಗುವ ರಾತ್ರಿ ರಾಣಿ!
ಕೋಪವಿಲ್ಲದೆ ನಮ್ಮ ಮಾನ ಜೋಪಾನವಾಗಿಡುವ
ತಮ್ಮ ಸೆರಗ ಜಾರಿಸಿ ಕಟ್ಟಿ ಕೊಡುವ
ತೊಗಲ ಸವೆಸಿ ಬೆವರ ಸುರಿಸಿ
ತುತ್ತಿಗಾಗಿ ಬೆತ್ತಲಾಗುವ
ಸತ್ಯದ ಸಹಾಯ ಸಿಗದ ನಿತ್ಯ ಸುಮಂಗಲಿಯರು...
ಮಾನ್ಯರ ನಡು ನಡುವೆ ನಡು ಮುರಿದು
ಹತ್ಯೆಗೀಡಾದವರು....











Click it and Unblock the Notifications