ಕೆ.ವಿ.ಹರೀಶ, ಸಿಂಗಪುರ
ವೃತ್ತಿ ಜೀವನ

- ಕೆ.ವಿ.ಹರೀಶ, ಸಿಂಗಪುರ
[email protected]
ಪರೋಕ್ಷವಾದ ಜನಸೇವೆಯೇ ನನ್ನಯ ಕಾಯಕ
ಜನರೆಲ್ಲ ಮಲಗಿರುವಾಗ ಜನರಿಗಾಗಿ ದುಡಿಯುವೆ ನಾನು
ಜನರೆಲ್ಲ ಬೆರೆತಿರುವಾಗ ನಿದ್ರಾದೇವಿಯ ಮಡಿಲಲ್ಲಿ ನಾನು
ಹಗಲಿರುಳೆಂಬ ಗಂಟೆಗಳ ಗಮನವಿಲ್ಲ ನನಗೆ
ಹಸಿವು-ನಿದ್ದೆ-ನೀರಡಿಕೆಗಳೆಂಬ ಅರಿವಿಲ್ಲ ಎನಗೆ
ಎದ್ದಾಗಲೇ ಸೂರ್ಯೋದಯವೆನಗೆ, ಮಲಗಿದಾಗಲೇ ಸೂರ್ಯಾಸ್ತಮವೆನಗೆ
ತಿನ್ನುವುದೇ ಮೃಷ್ಠಾನ್ನ, ಕುಡಿಯುವುದೇ ಅಮೃತ
ಹಬ್ಬ-ಹರಿದಿನಗಳೆಂಬ ಮೋಜಿನ ರಜೆಗಳಿಲ್ಲ ನನಗೆ
ಮುಷ್ಕರ-ಚಳುವಳಿಗಳೆಂಬ ಭಯದ ಭೀತಿಯಿಲ್ಲ ಎನಗೆ
ಏನೇ ಅಳಿಯಲಿ, ಏನೇ ಉಳಿಯಲಿ ಬಿಡೆನು ನನ್ನ ಕಾಯಕ
ದೇಶ ಸೇವೆಯೇ ಈಶ ಸೇವೆ ಎನ್ನುವ ನನ್ನ ಜಾತಕ
ನಾಡ ಜನತೆಯ ಸೇವೆಯನು ಮಾಡುತಿರುವೆ
ನಾನು ನನ್ನದೆಂಬ ಆಸೆಯನು ತೊರೆದಿರುವೆ
ನನ್ನ ವೃತ್ತಿಯೇ ನನಗೀಗ ಮಡದಿ
ನಾಳೆ ಬರುವ ಮಡದಿಗಿವಳೇ ಸವತಿ











Click it and Unblock the Notifications