ವಸಂತ ಕುಲಕರ್ಣಿ, ಸಿಂಗಪುರ
ಸಮತೋಲನ

- ವಸಂತ ಕುಲಕರ್ಣಿ, ಸಿಂಗಪುರ
[email protected]
ನಿಯಂತ್ರಣದ ದಾರ ಹಿಡಿದ ಪ್ರಕೃತಿಯದು
ಘನ ದ್ರವಗಳ ತುಯ್ದಾಟ, ಬಿಸಿ ತಂಪಿನ ಹೊಯ್ದಾಟ
ಘನ ದ್ರವವಾಗುವದೋ, ಬಿಸಿ ತಂಪಾಗುವದೋ
ಅಚ್ಚರಿಯದೀ ಮಾರ್ಪಾಟು, ಆ ಶಕ್ತಿಯದೀ ಏರ್ಪಾಟು
ಬೆಳಕು ನೆರಳುಗಳ ಒಡನಾಟ, ಉಷೆ ನಿಶೆಯರ ಓಡಾಟ
ಹಗಲು ನಗುವ ರಂಗುಗಳು,ಇರುಳು ನಸುನಗುವ ಚುಕ್ಕೆಗಳು
ಅದಾವ ಕಾಣದ ಕೈಯ ಹತೋಟಿ ಅವನಾವನು ಇದೆಲ್ಲದರ ಮೇಟಿ?
ಜೀವ ಜಡಗಳದದೆಂಥದೀ ನಾಜೂಕಿನ ಹೆಣೆದಾಟ
ಪ್ರೇರಣೆಯು ಇರಲೆಮಗೆ ನಿರಂತರದ ಹುಡುಕಾಟ
ಸೂತ್ರಧಾರನ ಸೂತ್ರ ಅರಿಯುವ ಈ ಇಹದಾಟ











Click it and Unblock the Notifications