ಸಂಧ್ಯಾ ರವೀಂದ್ರನಾಥ್
ಒಲವು

- ಸಂಧ್ಯಾ ರವೀಂದ್ರನಾಥ್
[email protected]
ಸೂರ್ಯನ ನವಕಿರಣದಂತೆ ಉಜ್ವಲ
ಇದುವೆ ಒಲವು ಬೇರೆ ಅಲ್ಲ....ಕೇಳಿರಿ
ಕೇವಲ ಒಲವಿದು...ಕೇವಲ ಒಲವಿದು
ಉತ್ತುಂಗದ ಗಿರಿಶಿಖರದಂತೆ ಎತ್ತರ
ವಿಸ್ತಾರದಾಳದ ಕಡಲಿನಂತೆ ಗಂಭೀರ
ಇದುವೆ ಒಲವು ಬೇರೆ ಅಲ್ಲ....ಕೇಳಿರಿ
ಕೇವಲ ಒಲವಿದು...ಕೇವಲ ಒಲವಿದು
ದಳ ತೆರೆದು ನಗುವ ಹೂವಿನಂತೆ ಸುಂದರ
ಬೆಲ್ಲ ಸಕ್ಕರೆ ಜೇನಿನಂತೆ ಸುಮಧುರ
ಇದುವೆ ಒಲವು ಬೇರೆ ಅಲ್ಲ....ಕೇಳಿರಿ
ಕೇವಲ ಒಲವಿದು...ಕೇವಲ ಒಲವಿದು
ಶುಭ್ರ ಧವಳ ಮಂಜಿನಂದದಿ ನಿರ್ಮಲ
ಮುಗಿಲ ಮಳೆಯ ಜೀವಜಲದಂತೆ ಅಸದಳ
ಇದುವೆ ಒಲವು ಬೇರೆ ಅಲ್ಲ....ಕೇಳಿರಿ
ಕೇವಲ ಒಲವಿದು...ಕೇವಲ ಒಲವಿದು
(ಈ ಕವನವನ್ನು ಡಿ.3.2005ರಂದು ಲಾಸ್ ಏಂಜಲೀಸ್‌ನಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಸಂಧ್ಯಾ ಮತ್ತು ರವೀಂದ್ರನಾಥ್ ದಂಪತಿಗಳು ಹಾಡಿದ್ದರು.)











Click it and Unblock the Notifications