ಸಂಧ್ಯಾ ರವೀಂದ್ರನಾಥ್
ತರಗೆಲೆ

- ಸಂಧ್ಯಾ ರವೀಂದ್ರನಾಥ್
[email protected]
ಹಸಿರ ರಸ ಬತ್ತಿದೊಡನೆ
ಕೆಂಚು ಕಂದು ಬಣ್ಣ ತಿರುಗಿ
ಮುರಿದು ಬಿತ್ತು ತರಗೆಲೆ
ತಂಪು ಗಾಳಿ ಸುಳಿಯುತಿರೆ
ಅಲೆಯ ಮೇಲೆ ತಿರುತಿರುಗಿ
ಮೇಲಕೇರಿ ಕೆಳಗೆ ಜಾರಿ
ನರ್ತಿಸಿತ್ತು ತರಗೆಲೆ
ಗಾಳಿ ಆಡಿಸಿದರೆ ಆಡಿ
ಹಾರಿ ಜಾರಿ ತೂರಿಯಾಡಿ
ಇಲ್ಲದೊಡೆ ಮರದಡಿಯಲಿ
ಸುಮ್ಮನಿತ್ತು ತರಗೆಲೆ
ಬಿಸಿ ರಕ್ತದ ಕುದಿತವಿಳಿದು
ಯುೌವನದ ಆಟ ಮುಗಿಯೆ
ಅನುಭವದಿ ಪಕ್ವವಾಗಿ
ಬದುಕಾಗಲಿ ತರಗೆಲೆ
ಬಾಳ ಸಂಜೆ ಸನಿಹವಾಗೆ
ಏರಿಳಿತದ ಭೇದವಿರದೆ
ಸಾಗಲಿ ಬಾಳ್ ಸಮದಲೆ
ಎನಿತು ಮುಕ್ತ ತರಗೆಲೆ











Click it and Unblock the Notifications