ವಾಣಿ ಅರವಿಂದ್‌

ಎಚ್ಚರಿಕೆಯೂಟ

Vani Aravind ಚಾಪೆಯೊಂದ ಮೊದಲು ಹಾಸಿ
ಒಳ್ಳೆ ಬಾಳೆ ಎಲೆಯ ಹರಡಿ
ನೀರ ಹಾಕಿ ಶುದ್ಧಿ ಮಾಡಿ
ಊಟ ಮಾಡಲಾಗಬೇಕು ರೆಡಿ
ಅಯ್ಯಯ್ಯೋ ಮರೆತೆ, ಕುಡಿಯೆ ನೀರ ಲೋಟದಲ್ಲಿಡಿ

ಮೊದಲು ಬಂತು ರುಚಿಯಾದ ಪಾಯಸ ಶ್ಯಾವಿಗೆ
ಇದ ತಿಂದು ಸಿಹಿಯಾದ ಮಾತಾಡಲಿ ನಾಲಿಗೆ
ಅತಿ ಸಿಹಿ ಒಳ್ಳೇದು ಅಲ್ಲ ‘ಮಧುಮೇಹ’ ಇರೋವ್ರಿಗೆ
ಅಂಥವ್ರು ತಿಂದ ಶಾಸ್ತ್ರ ಮಾಡಿ, ಒಳ್ಳೇದು ನಿಮ್‌ ಹೆಲ್ತ್‌ ಗೆ

ಉಪ್ಪು ಬಡಿಸಿದಲ್ಲಿರಲಿ, ತಿನ್ನಬೇಡಿ ಹೆಚ್ಚಿಗೆ
ಅದ್ರಲ್ಲೂ ಹೈ ಇದ್ರೆ ಪ್ರೆಶರ್ರು ನಿಮ್‌ ಬ್ಲಡ್ಡಿಗೆ
ಬೇಳೆ ಕೋಸಂಬ್ರಿಗ್ಳು ಹೋಗ್ಲಿ ಚೆನ್ನಾಗಿ ಹೊಟ್ಟೆಗೆ
ಇವುಗಳೇ ಅಲ್ವೇ ಒಳ್ಳೆ ಸೋರ್ಸು ಪ್ರೋಟೀನಿಗೆ
ತಿನ್ಬಿಡಿ ಓಮು ಒಂಚೂರು ಗ್ಯಾಸ್‌ ಟ್ರಬಲ್ಲಿಗೆ

ತರಕಾರಿ ಪಲ್ಯ, ಕೂಟು ಮಸ್ತಾಗಿ ಸೇವಿಸಿ
ಖನಿಜಾಂಶ ಇರುತ್ವೆ ವಿಟಮಿನ್ನು ಏ. ಬಿ. ಸಿ...
ಬಂತಪ್ಪ ಬೇಳೆ ಭಾತು ಇನ್ನು ಬಿಸಿ ಬಿಸಿ
ಅದಕ್ಕೆ ಇಲ್ದೇ ತುಪ್ಪ ತಿನ್ನೋದ್‌ ಪ್ರಾಕ್ಟೀಸು ಮಾಡ್ಕೊಂಡ್ರೆ ವಾಸಿ
ಇಲ್ದಿದ್ರೆ ಮಾಡ್ಬೇಕಾಗುತ್ತೆ ಮುಂದೆ ಹಾರ್ಟ್‌ ಗೆ ಕಸಿ

ಅನ್ನ-ಸಾರು ಮಾತ್ರ ಎಲ್ಲಾರು ಮಾಡ್ತಾರೆ ಲೈಕು
ಬಿಳಿ ಅನ್ನ ತುಂಬ ತಿಂದ್ರೆ ಆಗುತ್ತೆ ಕಾರ್ಬೋಹೈಡ್ರೇಟು ಲೆವೆಲ್ಲು ಹೈಕು
ಕೂಲಾಗಿ ಇರೋದಕ್ಕೆ ಕೊನೆಗೆ ಹಾಕಿ ಮಜ್ಜಿಗೆ ಹೊಟ್ಟೆಗೆ
ಹಲ್ಲು ಹಾಳಾದೀತು ಜೋಕೆ! ಎಲೆ ಅಡಿಕೆ ತಂಬಾಕು ಬೇಡ ಬಾಯಿಗೆ
ಅದರ ಬದಲು ಹೋಗಲಿ ಹಣ್ಣೆರಡು ಉದರಕೆ

ಆಗುವುದು ವಿಷವು ಮಿತಿಮೀರಿದರೆ ಅಮೃತ ಪಾನ
ಇರಬೇಕು ಸೇವಿಸುವ ಆಹಾರ ಸಮತೋಲನ
ಆರೋಗ್ಯವೇ ಭಾಗ್ಯ’ ಇದ ಅರಿಯೆ ಸಿಹಿಯು ಜೀವನ
ನಾವು ತಿಂದು ಪರರಿಗಿಷ್ಟು ಮಾಡುವ ತುಸು ದಾನ



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+