ಕನ್ನಡಿಗ ಮತ್ತು ಮೂರು ಕನಸುಗಳು!
- ಗೋಪಿನಾಥ ರಾವ್, ದುಬೈ
[email protected]
ಹಗಲು ಕನಸು ಬಿದ್ದರೂ
ಕುತ್ತಿಗೆಗೆ ಹಗ್ಗ
ಕನ್ನಡಿಗ ಬಗ್ಗ
ತದುಕಿ ಹಿಗ್ಗಾಮುಗ್ಗ-
ಆತ ಸ್ವಲ್ಪವೂ ಜಗ್ಗ.
ಮುಗ್ಗರಿಸಿ ಬಿದ್ದರೂ
ಕನ್ನಡದಲ್ಲೇ ಕಿರುಚುವ
ಈ ನೆಲವೇ ಸ್ವರ್ಗ...
*
ರಾತ್ರಿ ಕನಸು
ಬಾರಿಸಿ ಕನ್ನಡ ಡಿಂಡಿಮವ
ಹಾರಿಸಿ ಕೇಸರಿ
ಅರಿಶಿನ ಧ್ವಜವ
ಸೇರಿಕೊಂಡ ಕನ್ನಡ ಶಾಲೆ
ಮೂರು ಸಾವಿರ ಪಗಾರ
ದುಂಡಗೆ ನಕ್ಕ ಮಾವ, ನೆರ
ವೇರಿಸಿದ ಮಗಳ ಮದುವೆ
ಗಂಡ ಇಂಗ್ಲೆಂಡಿನವ...
*
ಹಗಲು ರಾತ್ರಿ ಕನಸು
ಇವತ್ತು ನವೆಂಬರ್ ಒಂದು
ಆಗಲೇ ತಿಂಗಳು ಹನ್ನೊಂದು..
ತಂದ ಕೆಲಸ ಮುಗಿಸಿ
ಗುರಿ ಮೀರಿಸುವ
ತುರಾತುರಿ ಮುಂದು
ಕರಟಿದೆ ನಮ್ಮಾತ್ಮ ಬೆಂದು..
ನಡುವೆ ಏನ್ರೀ ಕನ್ನಡ?
ಅದಕ್ಕೇನಾಗಿದೆ ಕುಂದು?











Click it and Unblock the Notifications