ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚಭೂತಗಳು

By Staff
|
Google Oneindia Kannada News

ಪಂಚಭೂತಗಳು
ಕನ್ನಡ ಲೇಖಕ ಶ್ರೀಮಾನ್‌ ಗುಂಡಣ್ಣನವರು ಬರೆದ ‘ಪಂಚ ಭೂತಗಳು’ ನಾಟಕವನ್ನು ಹೋದ ವರುಷ ಉಗಾದಿ ಹಬ್ಬದ ಆಚರಣೆಯ ಸಮಯದಲ್ಲಿ ಆಸ್ಟಿನ್‌ ಕನ್ನಡ ಸಂಘದ ಕನ್ನಡ ಮಿತ್ರರೊಂದಿಗೆ ನಾನೂ ಸಹ ಅಭಿನಯಿಸಿದ್ದೆ. ಅದನ್ನು ಒಂದು ಪದ್ಯದ ರೀತಿಯಲ್ಲಿ ತಮ್ಮೆಲ್ಲರ ಮುಂದಿಟ್ಟಿದ್ದೇನೆ. ಪದ್ಯವು ನಿಮಗಿಷ್ಟವಾಗುವುದೆಂದು ಆಶಿಸುತ್ತೇನೆ.
A scene from drama Panchabhootagalu
ಬರೆದರು ನಾಟಕ ‘ಪಂಚಭೂತಗಳು’ ಗುಂಡಣ್ಣನವರು
ಅದ ಚಿಕ್ಕದು-ಚೊಕ್ಕದು ಮಾಡಿದರು ವಿಜಯ ಶರ್ಮರು

ನಾಯಕ ಇದರದು ಲಾಯರ್‌ ಶಂಕರನಂತೆ
ಅವನಿಗೆ ಅಷ್ಟಾಗಿ ಕೇಸುಗಳಿಲ್ಲವಂತೆ
ದೊಡ್ಡಸ್ತಿಕೆ ಖಾಯಿಲೆ ಅವನಿಗೆ ಬಹಳವಂತೆ
ಪ್ರೀತಿಯ ಮಡದಿ ಸರಸುವಿಗೆ ಅದೇ ಚಿಂತೆಯಂತೆ

ಹೀಗಿರಲು:
ಹೊಕ್ಕಿತು ಮೊದಲನೆ ಭೂತವು ತಿಮ್ಮಿಯ ಹೆಸರಿನಲಿ
ಮನೆ ಕೆಲಸದಾಕೆಯ ರೂಪದಲಿ
ಎರಡನೆ ಭೂತ ಅಡುಗೆ ಆಚಾರ್ರು
ಮಿಸ್ಟರ್‌ ಭೀಮಾಚಾರ್‌ ಈತನ ಹೆಸರು
ಮೂರನೇ ಭೂತವೇ ಕಸ್ತೂರಿ
ಶಂಕರನೊಡನೆ 10 ವರ್ಷ ಓದಿದ್ದೂರೀ
ಈಗವನಿಗೆ ಆಪ್ತ ಸೆಕ್ರೆಟರಿ
ನಾಲ್ಕನೆ ಭೂತ ಕಲಾಮಣಿ ಮಾಮಿಯ ರೂಪದಲಿ
ಸರಸುವಿಗೆ ಸಂಗೀತ ಹೇಳಿ ಕೊಡುವ ನೆಪದಲಿ
ಐದನೆ ಭೂತವೆ ರಂಗಣ್ಣೋರು
ದೂರದ ಸಂಬಂಧಿ, ಇಂಗ್ಲಿಷು ಮೇಷ್ಟ್ರು

ಪ್ರವೇಶವಾಯಿತು ಹೀಗೆ ‘ಪಂಚಭೂತಗಳದ್ದು’
ಮಾಡಿಕೊಂಡಾಗಿತ್ತು ಎರಡು ಹೊತ್ತಿನ ಊಟದ ಏರ್ಪಾಡು
ಅಷ್ಟರಲಿ ್ಲ:
ಬಂದರು ಸರಸುವಿನ ತಂದೆ ರಾಯರು ವೇಗದಲಿ
ಕಂಡರು ಭೂತಗಳ, ಆದರು ಕಿಡಿ ಕಿಡಿ ಕೋಪದಲಿ
ಭೂತಗಳಿಗೆ ಹೇಳಿದರು ಮಾಡಲು ಜಾಗ ಖಾಲಿ
ಇತ್ತರು ಬಸ್‌ ಛಾರ್ಜನು ಎಲ್ಲರ ಕೈಲಿ
ಹೊರಟರು ರಾಯರು ಪಂಚ ಭೂತಗಳ ಓಡಿಸಿದ ಖುಷಿಯಲಿ
ಮತ್ತೆ ಬಂದು ಹೊಕ್ಕವು ಭೂತಗಳು ಏನೋ ನೆವದಲಿ

ಐದು ಜನರು ಮಾಡಿಕೊಂಡರು ಒಂದು ತೀರ್ಮಾನ
ಉಳಿಸೋಣ, ಬೆಳೆಸೋಣ ಶಂಕರ-ಸರಸುವಿನ ಮರ್ಯಾದೆ-ಮಾನ
ಸಂಗೀತ, ಸಾಹಿತ್ಯ, ಪಾಕ ಇತ್ಯಾದಿ ಪಾಠ ಮಾಡಿ ದುಡಿಯೋಣ
ಲಾಯರ್‌ ಶಂಕರನ ಆಸ್ತಿ-ಸಂಪತ್ತು ಹೆಚ್ಚಿಸೋಣ
ಎಲ್ಲರೂ ಒಂದಾಗಿ, ಒಂದೇ ಸೂರಿನಡಿ ಬದುಕೋಣ
ಒಗ್ಗಟ್ಟಿನ ಮಹಾ ಮಂತ್ರವ ಸಾರೋಣ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X