ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ಐದು ಸಣ್ಣ ಪದ್ಯ

By Staff
|
Google Oneindia Kannada News

ಇನ್ನೂ ಐದು ಸಣ್ಣ ಪದ್ಯ
H.K. Krishnapriyan
1

ನೀತಿಬೋಧೆ

ನೀ-
ನೇಡಿಯಾಡನೆ
ಆಡಬೇಡ
ಅದ
ತೋಡಿ ಹಾಡಿ
ಕಾಡಬೇಡ

2

ಅಸಂಭವ ಪ್ರೇಮ

ಮೈಸೂರು ಮೃಗಲಾಯದೊಳೊಂದು ಮುಳ್ಳುಹಂದಿ
ಮಂಗವೊಂದರ ಪ್ರೇಮಪಾಶದೊಳಾಯ್ತು ಅದು ಬಂದಿ
ಮಂಗ ಹಾಡುತಿರೆ, ಹಂದಿ ಹಿಂದೋಡುತಿರೆ
ನೋಡ ಬರುತಿಹರು ನೂರಾರು ಮಂದಿ ಮಂದಿ

3

ಪ್ರಾಣಿಶಾಸ್ತ್ರವೋ ತರ್ಕವೋ

ಹಲ್ಲಿಯು ಹುಲ್ಲನು ಮೇಯ್ದಲ್ಲಿ
ದನಗಳು ನೊಣಗಳ ನುಂಗುವುವು

ಹಲ್ಲಿಯು ಅಂಬಾ ಎಂದರೆ ದನಗಳು
ಲೊಚಲೊಚಲೊಚಲೊಚಗುಟ್ಟುವುವು

4

ಚತುರಂಗತುರಂಗ

‘ಓ ರಾಜ!’ ಮಂತ್ರಿ ಎಂದ
‘ಆ ಕುದುರೆಯೋಟ ಚಂದ !
ಪೂರ್ವದಿಕ್ಕಿನಲ್ಲಿ
ಹೆಜ್ಜೆಯಿಟ್ಟಿತಲ್ಲಿ
ನೆಗೆದು ಬಲಕೆ ಹೋಯ್ತು
ದಿಕ್ಕು ಆಗ್ನೇಯವಾಯ್ತು !’

5

ಒಂಟೆಯ ಕೋರ್ಟ್ಷೀಪ್‌ ಅಥವಾ ಬೈಬಲ್ಲಿಗೊಂದು ಉಪಕಥೆ

ಒಂಟಿ ಒಂಟೆ ಎಲ್ಲಾದ್ರುಂಟೇ
ಅಂತಂದ ನಮ್‌ ನೋವ
ಅದಕೇ ಹಡಗಿಂದ್‌ ಓಡೋಡ್‌ ಬಂದೆ
ಕರಿಯೋದಕ್‌ ನಿನ್‌ ತಾವ

*ಕಪಿನಯ್ಯ ಅಲ್ಲ

ಟಿಪ್ಪಣಿಗಳು :

ಪ್ರಾಣಿಶಾಸ್ತ್ರವೋ ತರ್ಕವೋ. ಇದರಲ್ಲಿ ಹೇಳಿರುವುದು ನಿಜ ಎಂದು ಸ್ವಲ್ಪ ಯೋಚಿಸಿ ತಿಳಿದುಕೊಳ್ಳಬಹುದು. ಮೊದಲನೆಯ ಸಾಲಿನಲ್ಲಿ ಸತಿ ಸಪ್ತಮಿ.
ಒಂಟೆಯ ಕೋರ್ಟ್ಷೀಪ್‌ ಅಥವಾ ಬೈಬಲ್ಲಿಗೊಂದು ಉಪಕಥೆ. ಇಲ್ಲೊಂದು ಪೂರ್ತಿ ಕಥೆಯೇ ಇದೆ. ಒಂಟೆ ಅಥವಾ ‘ಮರಳುಗಾಡಿನ ಹಡಗು’, ತನ್ನ ಪ್ರೇಯಸಿಯು ಕೋಪದಿಂದ ಅವನನ್ನು ಓಡಿಸಿದಾಗ ತನ್ನ ದುಃಖವನ್ನು ಮರೆತು ಹೃದಯವೇದನೆಯನ್ನು ನಿವಾರಿಸಿಕೊಳ್ಳಲು ಸಮುದ್ರದಾಚೆಯ ದೂರದ ಊರುಗಳಿಗೆ ಹೋಗಲು ನೋಡುತ್ತಿದ್ದಾನೆ. ವಿಧಿವಿಲಾಸದಿಂದ ಅವನು ಸಮುದ್ರದ ಮೇಲೆ ಹೋಗುವ ಹಡಗನ್ನೊಂದನ್ನು ಹತ್ತಲು ನೋವನ ಬಳಿ ಬರುತ್ತಾನೆ. ಆದರೆ ಅವನಿಗೇನು ಗೊತ್ತು ನೋವನ ಹಂಚಿಕೆ? ನೋವ ಪ್ರಾಣಿಗಳನ್ನು ಎರಡೆರಡಾಗಿಯೇ ಹಡಗನ್ನು ಹತ್ತಿಸಿಕೊಳ್ಳುತ್ತಿದ್ದಾನೆ. ಅದು ತಿಳಿದೊಡನೆ, ನಮ್ಮ ಕಥಾನಾಯಕ ತನ್ನ ಪ್ರೇಯಸಿಯೆಡೆಗೆ ತಿರುಗಿ ಓಡಿ ಬಂದು ತನ್ನೊಡನೆ ಬರಲು ಒಪ್ಪಿಸಲು ನೋಡುತ್ತಾನೆ. ಈಗ ಅವನ ಇರವೇ ನಮ್ಮ ಕಥಾನಾಯಕಿಯ ಉತ್ತರವನ್ನವಲಂಬಿಸಿದೆ.


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X