ಸ್ನೇಹ ಚಿರವಾಗಲಿ : ಗೆಳೆಯ ಪವನ್‌ಗೆ ಅನುಳಿಂದ ಪತ್ರ

ಆಗಸ್ಟ್‌- 18

ಆತ್ಮೀಯ ಪವನ್‌,

ಹೇಗಿದ್ದೀಯ? ತಡ ಮಾಡಿ ಪತ್ರ ಬರೆಯುತ್ತಿರುವುದಕ್ಕೆ ಕ್ಷಮೆ ಬೇಡುತ್ತೇನೆ. ನನ್ನ ವೈಯಕ್ತಿಕ ಜೀವನದ ಕೆಲವು ವಿಷಯಗಳನ್ನು ಹೊಂದಿಸಿಕೊಳ್ಳುವುದರಲ್ಲಿ ಈ ಮಧ್ಯೆ ಬಹಳ ವ್ಯಸ್ತಳಾಗಿದ್ದೆ. ಬೋಸ್ಟನ್‌ನಿಂದ ವಿಮಾನದಲ್ಲಿ ವಾಪಸ್ಸು ಬರುತ್ತಿದ್ದಾಗ ದೀಪಕ್‌ ರಂಜನ್‌ರನ್ನು ಭೇಟಿಯಾದೆ. ಏನಾಗುತ್ತಿದೆ ಎಂದು ಗೊತ್ತಾವುದಕ್ಕಿಂತ ಮೊದಲೆ ನಾವಿಬ್ಬರೂ ಡೇಟ್‌ ಮಾಡಲು ಆರಂಭಿಸಿಬಿಟ್ಟಿದ್ದೆವು. ಈಗ ನಮಗಿಬ್ಬರಿಗೂ ಮದುವೆಯ ಎಂಗೇಜ್‌ಮೆಂಟ್‌ ಆಗಿದೆ.

ನಮ್ಮ ಮದುವೆ ಡಿಸೆಂಬರ್‌ನಲ್ಲಿ, ಭಾರತದಲ್ಲಿಯೇ ಆಗಲಿದೆ. ನೀನು ಖಂಡಿತವಾಗಿ ಮದುವೆಗೆ ಬರುವೆ ಮತ್ತು ಆ ಮೂಲಕ ನಾವು ಮುಖತಃ ಭೇಟಿಯಾಗಬಹುದು ಎಂದು ನಾನು ಬಹಳ ಆಶಿಸುತ್ತೇನೆ. ನಾನು ಎಷ್ಟೆಲ್ಲ ಜನರಿಗೆ ನಿನ್ನ ಬಗ್ಗೆ ಮತ್ತು ನಮ್ಮ ಸ್ನೇಹದ ಬಗ್ಗೆ ಹೇಳಿರುವೆನೆಂದರೆ, ನಿನ್ನನ್ನು ನೋಡಲು ಸ್ವತಃ ನಾನೇ ಬಹಳ ಕಾತುರದಿಂದ ಎದುರು ನೋಡುತ್ತಿದ್ದೇನೆ. ಇಷ್ಟು ವರ್ಷಗಳಾದ ನಂತರ ನಾವು ಪರಸ್ಪರ ಭೇಟಿಯಾಗಿಲ್ಲ, ಆದರೆ ನಮ್ಮ ಸ್ನೇಹ ಉಳಿದಿದೆ ಎಂದರೆ ನಂಬಲು ಯಾರೂ ತಯಾರಿಲ್ಲ.

ಬೆಂಗಳೂರಿನಲ್ಲಿನ ವಾಸ ನಿನಗೆ ಹೇಗೆ ಅನ್ನಿಸುತ್ತಿದೆ? ಕಾಶಿಗಿಂತ ಸಂಪೂರ್ಣ ಭಿನ್ನವಾಗಿರಬಹುದು, ಅಲ್ಲವೆ? ನೀನು ಬೆಂಗಳೂರಿನಲ್ಲಿರುವುದರ ಕಾರಣವಾಗಿ ನಾನು ಪ್ರತಿಸಾರಿ ಭಾರತಕ್ಕೆ ಬಂದಾಗಲು ನಿನ್ನನ್ನು ಭೇಟಿಯಾಗಬಹುದೆಂದು ನನಗೆ ಸಂತಸವಾಗುತ್ತಿದೆ. ಇಲ್ಲಿ ಕೆಲಸಕ್ಕೆ ಸೇರುವುದಕ್ಕಿಂತ ಮುಂಚೆ ನಾನೊಮ್ಮೆ ಭಾರತವನ್ನು ಸಂದರ್ಶಿಸಿ ಬಿಡಬೇಕಿತ್ತು. ನಂತರ ನನ್ನ ವೀಸಾ ಸಮಸ್ಯೆ ಎದುರಾಯಿತು. ಆದರೆ ಒಂದು ಸಾರಿ ಈ ಗ್ರೀನ್‌ ಕಾರ್ಡ್‌ ಬಂದು ಬಿಟ್ಟರೆ ಪ್ರತಿ ವರ್ಷವೂ ಭಾರತಕ್ಕೆ ಭೇಟಿ ಕೊಡಬೇಕೆಂದು ಯೋಜಿಸಿದ್ದೇನೆ. ನಾನು ನಿಜವಾಗಲೂ ಭಾರತವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ.

ಪವನ್‌, ನೀನು ನಮ್ಮ ಸ್ನೇಹದಲ್ಲಿ ಯಾವ ರೀತಿಯ ಬದಲಾವಣೆಗಳೂ ಆಗಿಲ್ಲ ಎಂದು ತಿಳಿಯಬೇಕೆಂದು ನಾನು ಬಯಸುತ್ತೇನೆ. ಹಾಗೂ, ನಿನಗೆ ಅಗತ್ಯವಾದಾಗ ನಾನು ನಿನ್ನ ಹಿಂದೆ ಇರುತ್ತೇನೆ ಮತ್ತು ಹಾಗೆಯೇ ನೀನು ಸಹ ನನಗೆ ಜೊತೆಯಾಗಿರಬೇಕೆಂದು ಕೇಳಿಕೊಳ್ಳುತ್ತೇನೆ.

ನಿಮ್ಮ ಕಂಪನಿ ಯಾವುದಾದರೂ ಕೆಲಸದ ಮೇಲೆ ನಿನ್ನನ್ನು ಸ್ಯಾನ್‌ ಹೋಸೆಗೆ ಆದಷ್ಟು ಬೇಗ ಕಳುಹಿಸಲಿ ಮತ್ತು ತನ್ಮೂಲಕ ನೀನು ಅಮೇರಿಕವನ್ನು ನೋಡುವಂತಾಗಲಿ, ಹಾಗೂ ನನ್ನನ್ನು ಸಹ ಆಗಾಗ ಭೇಟಿಯಾಗುವಂತಾಗಲಿ ಎಂದು ಬಹಳ ಆಶಿಸುತ್ತೇನೆ. ನೀನು ದೀಪಕ್‌ರನ್ನು ಸಹ ಭೇಟಿಯಾಗಬೇಕೆಂದು ಇಷ್ಟಪಡುತ್ತೇನೆ. ಅವರೂ ಸಹ ಬೆಂಗಳೂರಿನವರೆ. ಜೊತೆಗೆ, ನೀನು ಓದಿದ ಬನಾರಸ್‌ ಐಐಟಿ ಕಾಲೇಜಿನಲ್ಲೆ ಓದಿದವರು.

ಎಂದಿಗೂ ಸ್ನೇಹಿತರು,

ಅನು

(ಸಶೇಷ)

ಅಧ್ಯಾಯ - 18 ಅಧ್ಯಾಯ - 20

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+