ಪವನ್‌ ಬಗ್ಗೆ ಅನು ತಾಯಿಯ ವಕಾಲತ್ತು!

ಮತ್ತೊಂದು ಆರು ತಿಂಗಳಾಯಿತು. ಅಪ್ಪಅಮ್ಮನಿಗೆ ಅಚ್ಚರಿಯ ಸುದ್ದಿಯೊಂದನ್ನು ತಿಳಿಸಲು ಅನು ಫೋನ್‌ ಮಾಡಿದಳು.

''ಅಪ್ಪ, ಅಮ್ಮ, ನಾನು ನಿಜವಾಗಲೂ ದ್ವಂದ್ವದಲ್ಲಿದ್ದೇನೆ. ಕ್ಯಾಂಪಸ್‌ ರಿಕ್ರೂಟ್‌ಮೆಂಟ್‌ ಕಾರ್ಯಕ್ರಮದಲ್ಲಿ ನನಗೆ ಹೈ-ಟೆಕ್‌ ಕಂಪನಿಯೊಂದರಲ್ಲಿ ಅಪ್ಲಿಕೇಶನ್ಸ್‌ ಇಂಜಿನಿಯರ್‌ ಆಗಿ ಕೆಲಸ ಸಿಕ್ಕಿತು. ಆದರೆ ಅದು ನನಗೆ ಬೇಕೊ ಬೇಡವೊ ಎಂದು ಗೊತ್ತಾಗುತ್ತಿಲ್ಲ. ಇಲ್ಲಿ ನಾನು ಒಬ್ಬೊಂಟಿ. ನಾನು ಅಮೇರಿಕದಲ್ಲಿ ಬಾಳಬಹುದಾದವಳು ಎಂದು ನನಗೆ ಅನ್ನಿಸುತ್ತಿಲ್ಲ.""

''ನೀನು ಇಲ್ಲಿಗೆ ಯಾವಾಗ ಬಂದರೂ ಪರವಾಗಿಲ್ಲ,"" ಅವಳ ಅಪ್ಪ ಅಂದರು. ''ಥೀಸೀಸ್‌ ಮುಗಿಸಿ, ಪದವಿಯನ್ನು ಪಡೆದುಕೊ. ಆಗ ನಿನಗೆ ಭಾರತದಲ್ಲಿ ಖಂಡಿತವಾಗಿ ಕೆಲಸ ಸಿಗುತ್ತದೆ.""

''ನಾನು ಪಾರ್ಟಿಗಳಿಗೆ ಹೋಗುವುದಿಲ್ಲ. ಕ್ಲಬ್‌ಗಳಿಗೆ, ಬಾರ್‌ಗಳಿಗೆ ಹೋಗುವುದಿಲ್ಲ. ಇಲ್ಲಿನ ಸ್ಥಳೀಯ ಜನರಲ್ಲಿ ಯಾರೊಬ್ಬರ ಸ್ನೇಹವನ್ನೂ ಮಾಡಲಾಗಲಿಲ್ಲ. ನನಗೆ ಗೊತ್ತಿರುವ ಬಹಳಷ್ಟು ಭಾರತೀಯರು ಮದುವೆಯಾಗಿರುವವರು, ಕುಟುಂಬವಂತರು. ಅವರು ನನ್ನನ್ನು ಮನೆಗೆ ಕರೆಯುತ್ತಾರೆ. ಆದರೆ ಪದೇಪದೆ ಅವರ ಮನೆಗಳಿಗೆ ಹೋಗಲು ಮುಜುಗರವಾಗುತ್ತದೆ. ಯಾವಾಗಲೂ ಒಬ್ಬಳೇ ಹೋಗುವುದು ನನಗೆ ಹಿತವೆನಿಸುವುದಿಲ್ಲ.""

''ಈಗ ನಿನ್ನ ಓದು ಮುಗಿಯುತ್ತಾ ಬಂದಿದೆ,"" ಅವಳ ಅಮ್ಮ ಕೇಳಿದರು, ''ಮದುವೆ ಬಗ್ಗೆ ಏನಾದರೂ ಯೋಚನೆ ಮಾಡಿರುವೆಯಾ?""

''ಅದರ ಬಗ್ಗೆನೂ ಆಗಾಗ ಯೋಚನೆ ಮಾಡ್ತೀನಿ. ಆದರೆ ಯಾರನ್ನಾದರೂ ಎಲ್ಲಿ ಭೇಟಿ ಆಗುವುದು ಎಂತಲೆ ನನಗೆ ಗೊತ್ತಿಲ್ಲ."" ಅಥವ ಹೇಗೆ ಎಂದು ಗೊತ್ತಿಲ್ಲ ಎಂದು ತನಗೆ ತಾನೆ ಮನಸ್ಸಿನಲ್ಲಿ ಹೇಳಿಕೊಂಡಳು.

''ಅನು, ನೀನು ಏನು ಮಾಡಬೇಕು ಎಂದು ನಿನಗೆ ಹೇಳುವುದು ನನಗೆ ಇಷ್ಟವಿಲ್ಲ. ಆದರೆ ಪವನ್‌ ಒಬ್ಬ ಸುಂದರ ಯುವಕ. ತುಂಬ ವಿನಯವಂತ, ಸಭ್ಯ, ಮತ್ತು ಗೌರವಸ್ಥ. ನಮ್ಮನ್ನು ನೋಡಲು ಆಗಾಗ ಇಲ್ಲಿಗೆ ಬರುತ್ತಲೂ ಇರುತ್ತಾನೆ. ನಾವು ಬೆಂಗಳೂರಿನಲ್ಲಿ ಇದ್ದರೆ ಅವನಿಗೆ ಫೋನ್‌ ಮಾಡುತ್ತೇವೆ. ಆಗೆಲ್ಲ ಮನೆಗೆ ಚಹಾ ಕುಡಿಯಲು ಇಲ್ಲವೆ ನಮ್ಮನ್ನು ಹೊರಗೆ ಊಟಕ್ಕೆ ಕರೆದೊಯ್ಯಲು ಬರುತ್ತಾನೆ.""

ಅವರಮ್ಮ ಲೋಕಾಭಿರಾಮವಾಗಿ ಮಾತನಾಡುತ್ತಿರುವಂತೆ ಪ್ರಯತ್ನಿಸುತ್ತಿದ್ದರೂ ಪವನ್‌ನ ಪರವಾಗಿ ಮಾತನಾಡುತ್ತಿರುವುದು ಸ್ಪಷ್ಟವಾಗಿತ್ತು.

''ಅವನು ನಿಮ್ಮನ್ನು ಆಗಾಗ ನೋಡುತ್ತಿರುತ್ತಾನೆ ಎಂದು ನನಗೆ ಗೊತ್ತಿರಲಿಲ್ಲ,"" ಅನು ಉತ್ತರಿಸಿದಳು. ''ಅವನು ಆಗಾಗ ನನಗೂ ಕಾಗದ ಬರೆಯುತ್ತಾನೆ. ಆದರೆ ಅವನಿಗೆ ನನ್ನ ಮೇಲೆ... ಆ ರೀತಿಯ ಆಸಕ್ತಿ ಇದೆ ಎಂದು ನನಗೆ ಗೊತ್ತಿಲ್ಲ.""

''ಅವನಿಗಿಲ್ಲದೆ ಏನು! ನಿನ್ನ ಫೋಟೋಗಳನ್ನು ನೋಡಿದ್ದಾನೆ.""

''ಏನು? ಅವನು ಅದನ್ನು ನನಗೆ ಯಾವತ್ತೂ ಹೇಳಿಲ್ಲ.""

''ಅದ್ಸರಿ. ಪದವಿ ಪಡೆದಾದ ಮೇಲೆ ನೀನು ಇಲ್ಲಿಗೆ ಬಂದು ಅವನನ್ನು ನೋಡುವುದು ಒಳ್ಳೆಯದೇನೊ.""

''ಬಹುಶಃ ನಾನು ಹಾಗೆ ಮಾಡಬಹುದೇನೊ.""

ಪವನ್‌ ಅವಳ ಪೋಷಕರನ್ನು ಆಗಾಗ ಕಾಣುತ್ತಿರುವುದು ಅವಳಿಗೆ ನಂಬಲಾಗಲೆ ಇಲ್ಲ! ಅವರು ಯಾಕೆ ಅವಳಿಗೆ ಈ ಮುಂಚೆಯೇ ತಿಳಿಸಿರಲಿಲ್ಲ? ಅದರಿಂದ ಅವಳ ಓದಿಗೆ ತೊಂದರೆಯಾಗಬಹುದು ಅಂತೇನಾದರೂ ಅವರು ಅಂದುಕೊಂಡರೆ?

ಅನು ಹೈ-ಟೆಕ್‌ ಕಂಪನಿಯ ಕೆಲಸಕ್ಕೆ ಸೇರಿಕೊಂಡಳು.

(ಸಶೇಷ)

ಅಧ್ಯಾಯ - 9 ಅಧ್ಯಾಯ - 11

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+