ಪವನ್‌ ಮನದಲ್ಲಿ ಅನು? ಅನು ಮನದಲ್ಲಿ ಡ್ಯಾನ್‌?


ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ಕಳೆದ ವಾರ ರೂಪಾಳಿಂದ ಕೆಲವೆ ಕೆಲವು ಕರೆಗಳು ಮಾತ್ರ ಬಂದಿದ್ದರಿಂದ ಆ ವಾರವೆಲ್ಲ ಅನೂಳಿಗೆ ನೆಮ್ಮದಿ ಇತ್ತು. ತಮ್ಮ ಕಂಪನಿಯ ಕಸ್ಟಮರ್ಸ್‌ ಜೊತೆಗೆ ರಿವ್ಯೂ ಮೀಟಿಂಗ್‌ಗಾಗಿ ಅನೂಳ ಕಂಪನಿ ಅವಳನ್ನು ಇದ್ದಕ್ಕಿದ್ದಂತೆ ನ್ಯೂ ಯಾರ್ಕ್‌ನ ಕೇಂದ್ರ ಕಛೇರಿಗೆ ಕರೆಸಿಕೊಂಡಿತು. ಡ್ಯಾನ್‌ನನ್ನು ಜೊತೆಗೆ ಬರಲು ಕರೆಯೋಣವೆಂದರೆ ಅಷ್ಟು ಅವಸರದಲ್ಲಿ ಡ್ಯಾನ್‌ಗೆ ರಜಾ ತೆಗೆದುಕೊಳ್ಳುವುದು ಕಷ್ಟ.

ಅವಳಿಗೆ ನ್ಯೂ ಯಾರ್ಕ್‌ನ ಮ್ಯಾನ್‌ಹ್ಯಾಟನ್‌ ಬಹಳ ಉಲ್ಲಾಸವನ್ನುಂಟು ಮಾಡಿತು. ಆದರೂ ಡ್ಯಾನ್‌ ತನ್ನ ಜೊತೆ ಇದ್ದಿದ್ದರೆ ಚೆನ್ನಾಗಿತ್ತು ಎಂದು ಬಹಳ ಅಂದುಕೊಂಡಳು. ಜೀವನದಲ್ಲಿ ಮೊದಲ ಸಲ ಗಂಡಸೊಬ್ಬನನ್ನು ನಿಜವಾಗಿಯೂ ಮಿಸ್‌ ಮಾಡಿಕೊಳ್ಳುತ್ತಿರುವ ಅನುಭವ ತನಗಾಗುತ್ತಿರುವುದು ಅವಳಿಗೆ ಅರಿವಾಯಿತು. ದೀಪಕ್‌ನನ್ನು ಬಿಟ್ಟು ಪ್ರವಾಸದ ಮೇಲೆ ಹೋಗುತ್ತಿದ್ದಾಗ ಅವಳಿಗೆ ಹೀಗೆ ಎಂದೂ ಅನ್ನಿಸಿರಲಿಲ್ಲ. ಹೇಳಬೇಕೆಂದರೆ ಆಗೆಲ್ಲ ಅವಳಿಗೆ ಬಿಡುಗಡೆಯ ಭಾವ ಉಂಟಾಗುತ್ತಿತ್ತು.

ಇಮೇಯ್ಲ್‌ುಗಳನ್ನು ನೋಡಲು ಹಾಗು ಡ್ಯಾನ್‌ಗೆ ಕರೆ ಮಾಡಲು ತನ್ನ ಕಂಪನಿಯ ಸೇಲ್ಸ್‌ ವಿಭಾಗದಲ್ಲಿನ ಖಾಲಿ ಕೋಣೆಯೊಂದಕ್ಕೆ ಹೋಗಿ, ಲ್ಯಾಪ್‌ಟಾಪ್‌ ಅನ್ನು ಪ್ಲಗ್‌ ಒಂದಕ್ಕೆ ಕನೆಕ್ಟ್‌ ಮಾಡಿದಳು. ಅಂದು ಸಂಜೆ ಅವಳು ವಾಪಸು ಸ್ಯಾನ್‌ ಹೋಸೆಗೆ ಹಿಂದಿರುಗುವವಳಿದ್ದಳು. ಹಾಗಾಗಿ ತನ್ನನ್ನು ವಿಮಾನ ನಿಲ್ದಾಣದಿಂದ ಮನೆಗೆ ಕರೆದುಕೊಂಡು ಹೋಗಲು ಡ್ಯಾನ್‌ನನ್ನು ಕೇಳುವವಳಿದ್ದಳು. ನಾನು ಡ್ಯಾನ್‌ನನ್ನು ಪ್ರೀತಿಸುತ್ತಿದ್ದೇನೆ. ಹಾಗಿದ್ದರೂ, ಇಷ್ಟು ದಿನಗಳಾದ ಮೇಲೆಯೂ ಅವನು ಎಂದೂ ತನ್ನನ್ನು ನನ್ನ ಮೇರೆ ಹೇರಿದ್ದಿಲ್ಲ. ನಿಧಾನವಾಗಿ, ಆದರೆ ಖಂಡಿತವಾಗಿ ತಾನಾಗಿಯೆ ನನ್ನ ಮನದಲ್ಲಿ ಊರುವಂತೆ ಮಾಡಿದ.

ಅವಳ ಇಮೇಯ್ಲ್‌ುನ ಇನ್‌ಬಾಕ್ಸಿನಲ್ಲಿದ್ದ 11 ಹೊಸ ಪತ್ರಗಳಲ್ಲಿ ಒಂದು ಪವನ್‌ನಿಂದ ಬಂದದ್ದಾಗಿತ್ತು. ಅದು ಅಂದೆ ಕಳುಹಿಸಿದ್ದಾಗಿತ್ತು.

ಹಾಯ್‌ು ಅನು,

ನೀನು ಚೆನ್ನಾಗಿದ್ದೀಯೆಂದು ಆಶಿಸುತ್ತೇನೆ. ಇಲ್ಲಿ ನಾವು ಎಲ್ಲ ಸಂಸ್ಕಾರ ಕ್ರಿಯೆಗಳನ್ನು ಮುಗಿಸಿದೆವು. ನಮ್ಮ ಸಂಸ್ಥೆ ನಾನು ನನ್ನ ಪ್ರಾಜೆಕ್ಟ್‌ ಮುಗಿಸಲು ಸ್ಯಾನ್‌ ಹೋಸೆಗೆ ಹಿಂದಿರುಗಲು ಹೇಳಿದೆ. ಪ್ರವಾಸದ ಏರ್ಪಾಟುಗಳನ್ನು ಮಾಡಿಕೊಳ್ಳಲಿದ್ದೇನೆ.

ನಾನು ನಿನ್ನನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಬಗ್ಗೆ ಯೋಚಿಸುತ್ತಿದ್ದೇನೆ. ಆದಷ್ಟು ಬೇಗನೆ ನಿನ್ನನ್ನು ನೋಡುತ್ತೇನೆ.

ಪ್ರೇಮದಿಂದ
ಪವನ್‌

ಯಾವಾಗಿನಿಂದ ಅವನ ಅಭಿವಂದನೆ ಪ್ರೇಮಕ್ಕೆ ಬದಲಾಯಿತು? ಅವಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾನೆ? ಅವನು ಕನಸು ಕಾಣುತ್ತಿದ್ದಾನಾ? ಅವನು ಅವಳನ್ನು ಚುಂಬಿಸಲು ಯತ್ನಿಸಿದಾಗ ಅವಳು ಯಾಕೆ ಏನೂ ಹೇಳಲಿಲ್ಲ ಅಂದರೆ, ಆಗ ತಾನೆ ಅವನ ತಾಯಿ ತೀರಿಕೊಂಡಿದ್ದರಿಂದಾಗಿ. ನನ್ನ ಜೀವನ ಟಿವಿಯಲ್ಲಿನ ಸೋಪ್‌ ಅಪೇರ ತರಹ ಆಗಿಬಿಟ್ಟಿದೆ. ಚೆನ್ನಾಗಿದೆಯ ಅಂದರೆ ಹಾಗೂ ಇಲ್ಲ. ಈಗ ಅವಳ ಬಾಲ್ಯ ಸ್ನೇಹಿತನೂ ಅವಳು ಬಿಳಿಯನೊಬ್ಬನ ಜೊತೆ ಓಡಿಹೋಗಿದ್ದಾಳೆಂದು ತಿಳಿದಿದ್ದಾನೆ.

ಗೊಂದಲವಾಗಿ, ಅನು ಕುರ್ಚಿಯಲ್ಲಿ ಹಿಂದಕ್ಕೊರಗಿ ಕುಳಿತುಕೊಂಡಳು. ಪವನ್‌ನ ಪತ್ರಕ್ಕೆ ಉತ್ತರವನ್ನು ಬರೆಯಲು ಆರಂಭಿಸುವ ಮುನ್ನ ಜಾಗರೂಕತೆಯಿಂದ ಯೋಚಿಸಿದಳು:

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+