• search

ದುಬೈ ಕನ್ನಡ ಕುವರನ ಸಂಗೀತಕ್ಕೆ ಕವಿತಾ ಕೃಷ್ಣಮೂರ್ತಿ ಮೆಚ್ಚುಗೆ

By ಪದ್ಯಾಣ ರಾಮಚಂದ್ರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ದುಬೈನಲ್ಲಿ ಆಯೋಜಿಸಲಾಗಿದ್ದ ವಾಯ್ಸ್ ಆಫ್ ಯುಎಇ - ಕಿಡ್ಸ್ ಕೆಡಗರಿಯಲ್ಲಿ ಹಾಡಿದ ಕನ್ನಡದ ಬಾಲಕ ಅಮೋಘವರ್ಷನ ಹಾಡಿನ ವೈಖರಿಯನ್ನು ಮೆಚ್ಚಿ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿಯವರು ಮೆಚ್ಚುಗೆಯ ವರ್ಷಧಾರೆ ಸುರಿಸಿದ್ದಾರೆ. ಜೊತೆಗೆ ಅವನಿಗೆ ಸಂಗೀತ ಕಲಿಸಿದ ಮಂಗಳೂರಿನ ದಿವ್ಯಶಂಕರಿ ಅವರನ್ನೂ ಶ್ಲಾಘಿಸಿದ್ದಾರೆ.

  ದುಬೈಯ ಎಸ್ ಕೆ ಎಸ್ ಇವೆಂಟ್ಸ್ ಇವರು ಆಯೋಜಿಸುವ, ಆರರಿಂದ ಹದಿನೇಳು ವಯಸ್ಸಿನ ಸಂಯುಕ್ತ ಅರಬ್ ಸಂಸ್ಥಾನದ (ಯು.ಎ ಇ) ನಿವಾಸಿ ಮಕ್ಕಳು ಹಿಂದಿ ಭಾಷೆಯ ಚಲನಚಿತ್ರ ಹಾಡುಗಳನ್ನು ಹಾಡುವ ರಾಷ್ಟ್ರೀಯ ಮಟ್ಟದ ಸ್ಪರ್ಧೆ "ವಾಯ್ಸ್ ಆಫ್ ಯುಎಇ - ಕಿಡ್ಸ್ ಕೆಟಗರಿ".

  ಗಾನ ಲೋಕದ ಭರವಸೆ ಕನ್ನಡದ ಪೋರ ಅಮೋಘವರ್ಷ

  ಯುಎಇಯ ಏಳು ಪ್ರಾಂತ್ಯದ ನಿವಾಸಿ ಭಾರತೀಯ ಮಕ್ಕಳ ಜೊತೆಗೆ ಹಿಂದಿ ಭಾಷೆಯನ್ನು ಅರಿಯದ ವಿದೇಶದ ಮಕ್ಕಳು ಕೂಡ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಮೂರು ಹಂತದಲ್ಲಿ ನಡೆಯುವ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾರತದ ಹೆಸರಾಂತ ಗಾಯಕರು ತೀರ್ಪುಗಾರರಾಗಿರುತ್ತಾರೆ.

  Voice of UAE - Kids : Kavita Krishnamurthy appreciates Kannada singer

  "ವಾಯ್ಸ್ ಆಫ್ ಯುಎಇ - ಕಿಡ್ಸ್ ಕೆಟಗರಿ- 2017" ಸ್ಪರ್ಧೆಯ ಅಂತಿಮ ಸುತ್ತು ದುಬೈ ಮಹಾನಗರದ 1600 ಆಸನದ ಸುಪ್ರಸಿದ್ಧ 'ಶೇಖ್ ರಶೀದ್' ಆಡಿಟೋರಿಯಂನಲ್ಲಿ ಶುಕ್ರವಾರ, 1ನೇ ಡಿಸೆಂಬರ್ 2017ರಂದು ಜರುಗಿತು.

  ಸುಮಾರು 200ಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡ ಈ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ 20 ಸ್ಪರ್ಧಾಳುಗಳಿಗೆ ಆಡಿಟೋರಿಯಂನ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಭಿಕರ ಮುಂದೆ ತಲಾ ಮೂರುವರೆ ನಿಮಿಷ ಹಾಡುವ ಅವಕಾಶ ಲಭಿಸಿತು.

  ಆಸ್ಟ್ರೇಲಿಯಾದ ಮೆಲ್ಬೊರ್ನ್ ಶಾಲೆಯಲ್ಲಿ ಕನ್ನಡ ಪಾಠ

  ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ 20 ಸ್ಪರ್ಧಾಳುಗಳಲ್ಲಿ, ಹಿಂದಿ ಭಾಷೆಯನ್ನು ಅರಿಯದ, ಹಿಂದಿ ಚಲನಚಿತ್ರ ಗಾಯನ ಪ್ರೇಮಿ ತಜಕಿಸ್ಥಾನ್ ದೇಶದ ಕನ್ಯೆ ಕೂಡ ಒಬ್ಬಳು.

  Voice of UAE - Kids : Kavita Krishnamurthy appreciates Kannada singer

  ಕನ್ನಡ ಕುವರನ ಸಂಗೀತಕ್ಕೆ ಕವಿತಾ ಮೆಚ್ಚುಗೆ

  ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ಏಕೈಕ ಕನ್ನಡ ಕುವರ ಹತ್ತು ವರ್ಷದ ಪೋರ ಅಮೋಘವರ್ಷ. ಕಾರ್ಯಕ್ರಮದ ಕ್ರಮಾಂಕದಲ್ಲಿ ಹನ್ನೊಂದನೆ ಸ್ಪರ್ಧಾಳುವಾಗಿ ತನಗೆ ಲಭಿಸಿದ ಅತ್ಯಲ್ಪ ಕಾಲಾವಧಿಯಲ್ಲಿ ಯಮನ್ ರಾಗದ ಮಿಶ್ರ ಛಾಪು ತಾಳದ 'ಆಜ್ ಇಬಾದತ್' ಹಿಂದಿ ಹಾಡನ್ನು ಸಭಿಕರ ಮತ್ತು ತೀರ್ಪುಗಾರರ ಮುಂದೆ ಸುಶ್ರಾವ್ಯವಾಗಿ ಹಾಡಿದ.

  "ವಾಯ್ಸ್ ಆಫ್ ಯುಎಇ - ಕಿಡ್ಸ್ ಕೆಟಗರಿ- 2017 " ಸ್ಪರ್ಧೆಯ ಅಂತಿಮ ಸುತ್ತಿನ ತೀರ್ಪುಗಾರರಾಗಿ ಬಂದಿದ್ದ ಪ್ರಸಿದ್ಧ ಹಿಂದಿ ಗಾಯಕಿ, ದಕ್ಷಿಣ ಭಾರತದ ಗಾನ ಕೋಗಿಲೆ ಕವಿತಾ ಕೃಷ್ಣಮೂರ್ತಿಯವರು ಕನ್ನಡ ಕುವರ 'ಅಮೋಘವರ್ಷ'ನ ಹಿಂದಿ ಹಾಡು 'ಆಜ್ ಇಬಾದತ್' ಆಲಿಸಿದ ನಂತರ ತಮ್ಮ ಅಭಿಪ್ರಾಯವನ್ನು ತಕ್ಷಣ ನೆರೆದ ಸಭಿಕರಿಗೆ ವ್ಯಕ್ತಪಡಿಸಿದರು.

  ಅಮೋಘವರ್ಷನ ವಯಸ್ಸನ್ನು ಅವನಿಂದಲೇ ಕೇಳಿ ತಿಳಿದ ಕವಿತಾ ಕೃಷ್ಣಮೂರ್ತಿಯವರ ಮುಂದಿನ ಪ್ರಶ್ನೆ, ನಿನಗೆ ಸಂಗೀತ ಕಲಿಸಿದ ಗುರುಗಳು ಯಾರು? 'ನನ್ನ ಚಿಕ್ಕಮ್ಮ ಶ್ರೀಮತಿ ದಿವ್ಯಶಂಕರಿ ನನ್ನ ಸಂಗೀತ ಗುರು' ಎಂದು ಅಮೋಘವರ್ಷ ಹೇಳಿದಾಗ -

  "ನೀನು ಅದ್ಭುತ ಗಾಯಕ, ಇದು ತುಂಬಾ ಕಠಿಣ ಹಾಡು, ಈ 10ರ ಎಳವೆಯಲ್ಲಿ ಇದರ ತಾರ ಸ್ಥಾಯಿ ಹಾಗೂ ಮಂದಾರ ಸ್ಥಾಯಿಗಳಲ್ಲಿನ ನಿನ್ನ ಸ್ವರ ಸಂಚಾರ ತುಂಬಾ ಸುಂದರವಾಗಿತ್ತು. ನೀನು ಕ್ರಮಬದ್ಧವಾಗಿ ರಾಗಬದ್ಧವಾಗಿ ಶ್ರುತಿಯಲ್ಲಿ ಬಿಲ್ಲಿನಿಂದ ಹೊರಟ ಬಾಣದಂತೆ ಅದ್ಭುತವಾಗಿ ಹಾಡಿರುವೆ. ಇಷ್ಟು ಸಣ್ಣ ವಯಸ್ಸಿನಲ್ಲಿ ನಿನ್ನನ್ನು ಪಳಗಿಸಿರುವ ನಿನ್ನ ಸಂಗೀತ ಗುರುಗಳಿಗೆ ನನ್ನ ಅಭಿನಂದನೆಗಳು" ಎಂದು ಕವಿತಾ ಕೃಷ್ಣಮೂರ್ತಿ ಹೊಗಳಿದರು.

  Voice of UAE - Kids : Kavita Krishnamurthy appreciates Kannada singer

  ಅತ್ಯಂತ ಸಣ್ಣತಪ್ಪುಗಳನ್ನು ಕೂಲಂಕಷವಾಗಿ ಕಂಡುಹಿಡಿದು ತಿದ್ದಿ ವಿಮರ್ಶಿಸಿ ತಿಳಿಹೇಳುವ ಬೆರಳೆಣಿಕೆಯ ತೀರ್ಪುಗಾರರಲ್ಲಿ ಒಬ್ಬರಾದ ಪ್ರಸಿದ್ಧ ಹಿಂದಿ ಗಾಯಕಿ ದಕ್ಷಿಣ ಭಾರತದ ಗಾನ ಕೋಗಿಲೆ ಕವಿತಾ ಕೃಷ್ಣಮೂರ್ತಿಯವರ ಕುತೂಹಲ ಮೂಡಿಸಿದ ದಿವ್ಯಶಂಕರಿ ಅವರ ಕಿರು ಪರಿಚಯ.

  ದಿವ್ಯಶಂಕರಿ ಕಿರುಪರಿಚಯ

  ತನ್ನ ಏಳನೇ ವಯಸ್ಸಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಪ್ರಾರಂಭಿಸಿದ ದಿವ್ಯಶಂಕರಿ, ಬಡೆಕ್ಕಿಲ ಚಂದ್ರಶೇಖರ ಭಟ್ ಮತ್ತು ಪದ್ಮಾವತಿ ದಂಪತಿಗಳ ಸುಪುತ್ರಿ. ಆಕಾಶವಾಣಿ ಮಂಗಳೂರು ವಿಭಾಗದಲ್ಲಿ ಯುವವಾಣಿ ಕಲಾವಿದೆಯಾಗಿದ್ದ ಇವರು ಬೆಂಗಳೂರು, ಉಡುಪಿ, ಕಟೀಲು, ಮಂಗಳೂರು ಸೇರಿದಂತೆ ಹಲವಾರು ಪಟ್ಟಣಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

  ಮಂಗಳೂರಿನ ಭರತನಾಟ್ಯ ನೃತ್ಯ ಕಾರ್ಯಕ್ರಮಗಳಲ್ಲಿ ಹಾಡುವ ದಿವ್ಯಶಂಕರಿ, ಶಾಸ್ತ್ರೀಯ ಸಂಗೀತದಲ್ಲಿ ಹದಿನೆಂಟು ವರುಷಗಳ ಅನುಭವ ಹೊಂದಿರುವ ನುರಿತ ಕಲಾವಿದೆ.
  ಎಂಬಿಎ ಪಧವೀಧರರಾಗಿರುವ ದಿವ್ಯಶಂಕರಿ ತನ್ನ ಕಾಲೇಜು ದಿನಗಳಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರತಿನಿಧಿಯಾಗಿದ್ದವರು.

  ಪ್ರಸ್ತುತ ಮಂಗಳೂರಿನಲ್ಲಿ ಸಂಗೀತ ತರಬೇತಿಯನ್ನು ನೀಡುತ್ತಿರುವ ದಿವ್ಯಶಂಕರಿ ವಿಜಯಾ ಬ್ಯಾಂಕ್ ನ ಪ್ರಬಂಧಕ ಕೊಡಂಗೆ ಶ್ಯಾಮಸ್ವರೂಪ್ ಅವರ ಪತ್ನಿ ಮತ್ತು ಪ್ರಸಿದ್ಧ ಸಂಗೀತ ಗುರುಗಳಾದ ವಿದ್ವಾನ್ ಕಾಂಚನ ಈಶ್ವರ ಭಟ್ ಇವರ ಶಿಷ್ಯೆ.

  ಒಂದು ಕೈಕೂಸಿನ ಸಹಿತ ತನ್ನೆರಡು ಪುಟ್ಟಮಕ್ಕಳನ್ನು ನೋಡಿಕೊಳ್ಳುತ್ತಾ ಕರ್ನಾಟಕದ ಕರಾವಳಿ ಮಂಗಳೂರಿನಿಂದ 'ಸ್ಕೈಪ್' ಮೂಲಕ ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ನಿವಾಸಿ ಅಮೋಘವರ್ಷನಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಸುತ್ತಿರುವ ದಿವ್ಯಶಂಕರಿ ಅಮೋಘವರ್ಷನ ಚಿಕ್ಕಮ್ಮ. ಅವರಿಬ್ಬರಿಗೂ ಅಭಿನಂದನೆಗಳು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Indian playback singer Kavita Krishnamurthy appreciated the talented Kannada singer Amoghavarsha, for his rendition of a Hindi song in Voice of UAE - Kids Category. She also hailed the tutor Divyashankari for teaching music from Mangaluru.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more