ಆಸ್ಟ್ರೇಲಿಯಾದ ಮೆಲ್ಬೊರ್ನ್ ಶಾಲೆಯಲ್ಲಿ ಕನ್ನಡ ಪಾಠ
ಮೆಲ್ಬೊರ್ನ್, ಅಕ್ಟೋಬರ್ 9: ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಸಲು ಕರ್ನಾಟಕ ಸರಕಾರ 'ಕಡ್ಡಾಯ ನೀತಿ' ಜಾರಿಗೆ ತರಬೇಕಾಯಿತು.
ಆದರೆ ಆಸ್ಟ್ರೇಲಿಯಾದ ಶಾಲೆಯೊಂದರಲ್ಲಿ ಕನ್ನಡ ಭಾಷೆ ಕಲಿಸಲಾಗುತ್ತದೆ. ಮೆಲ್ಬೊರ್ನ್ ನ ಸರಕಾರಿ ಶಾಲೆಯೊಂದರಲ್ಲಿ 12ನೇ ತರಗತಿ ಪರೀಕ್ಷೆಗೆ ಎರಡನೇ ಭಾಷೆಯಾಗಿ ಕನ್ನಡವನ್ನು ತೆಗೆದುಕೊಳ್ಳಬಹುದಾಗಿದೆ.

ಆಸ್ಟ್ರೇಲಿಯಾದ ವಿಕ್ಟೋರಿಯಾ ಸರಕಾರ ನಡೆಸುವ ಶಾಲೆಯಲ್ಲಿ ಎರಡನೇ ಭಾಷೆಯಾಗಿ ಕನ್ನಡ ಬೋಧಿಸಲಾಗುತ್ತದೆ. ಇದೇ ಜನವರಿಯಿಂದ ಕನ್ನಡ ತರಗತಿಗಳು ಆರಂಭವಾಗಲಿವೆ. ವಿಕ್ಟೋರಿಯಾ ಸ್ಕೂಲ್ ಆಫ್ ಲಾಂಗ್ವೇಜಸ್ (ವಿಎಸ್ಎಲ್) ಮುಖಾಂತರ ಕನ್ನಡ ಭಾಷೆ ಕಲಿಸಲಾಗುತ್ತದೆ.
ಆಸ್ಟ್ರೇಲಿಯಾದ ನಗರ ಮೆಲ್ಬೊರ್ನ್ ನಲ್ಲಿ ಸಾಕಷ್ಟು ಕನ್ನಡಿಗರಿದ್ದು ನಮಗಾಗಿ ಶಾಲೆಯಲ್ಲಿ ಕನ್ನಡ ಕಲಿಕೆ ಆರಂಭಿಸಿ ಎಂದು ಮೆಲ್ಬೊರ್ನ್ ಕನ್ನಡ ಸಂಘದವರು ವಿಎಸ್ಎಲ್ ಗೆ ಪತ್ರ ಬರೆದಿದ್ದರು.
ಕನ್ನಡಿಗರ ಬೇಡಿಕೆ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರಿರುವುದನ್ನು ಮನಗಂಡ ವಿಎಸ್ಎಲ್ ಕನ್ನಡ ಕಲಿಕೆಗೆ ಮನ್ನಣೆ ನೀಡಿದೆ.
ಇದೇ ಶಾಲೆಯಲ್ಲಿ ತೆಲುಗು ಕಲಿಕೆಗೂ ಪ್ರಯತ್ನ ನಡೆಸಲಾಗುತ್ತಿದೆ.












Click it and Unblock the Notifications