• search

ಕುವೈತ್ ನಲ್ಲಿ ಬಂಟರ ಸಂಘದಿಂದ ಸಾಧಕರ ಸನ್ಮಾನ

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಭಾರತದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಬಂಟ ಸಮುದಾಯದ ಸದಸ್ಯರನ್ನು ಕುವೈತಿಗೆ ಕರೆಸಿ ಅವರನ್ನು ಕುವೈತ್ ನಲ್ಲಿರುವ ಬಂಟರ ಸಂಘ ಅಕ್ಟೋಬರ್ 28ರಂದು ಆತ್ಮೀಯವಾಗಿ ಸನ್ಮಾನಿಸಿತು.

  ಕುವೈತಿನ ಸಾಲ್ಮಿಯಾ ಪ್ಲೆ ಸ್ಕೂಲಿನಲ್ಲಿ ಸಭೆ ಸೇರಿದ ಸಂಘದ ಸದಸ್ಯರು, ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಉಡುಪಿ ಭಾಗದ ಹೆದ್ದಾರಿಯ ಆಪತ್ಬಾಂಧವನಾಗಿರುವ ವಿಶು ಶೆಟ್ಟಿ ಅಂಬಲಪಾಡಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಲೀಲಾಧರ ಶೆಟ್ಟಿ ಕಾಪು ಅವರನ್ನು ಸನ್ಮಾನಿಸಲಾಯಿತು.

  ಕುವೈತ್ ಕನ್ನಡ ಸಂಘದಿಂದ ರಾಜ್ಯೋತ್ಸವಕ್ಕೆ ವಿಡಿಯೋ ಆಹ್ವಾನ

  ಸನ್ಮಾನಿತರಿಗೆ ಫಲಪುಷ್ಪ, ನೆನಪಿನ ಕಾಣಿಕೆ ಮತ್ತು ಶಾಲು ಹೊದಿಸಿ ಸಂಘದ ಹಿರಿಯ ಸದಸ್ಯರು ಮತ್ತು ಮಾಜಿ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಐಕಳ ಮತ್ತು ಸತೀಶ್ಚಂದ್ರ ಶೆಟ್ಟಿ ಇವರು ಸಂಘದ ಹಾಲಿ ಅಧ್ಯಕ್ಷರಾದ ಯದುನಾಥ ಅಳ್ವ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

  Vishu Shetty and Leeladhara Shetty felicitated by Bunts Sangha Kuwait

  ಸಂಘದ ಕಾರ್ಯದರ್ಶಿಯಾದ ಪ್ರವೀಣ್ ಕುಮಾರ್ ಶೆಟ್ಟಿ ಇವರು ಸನ್ಮಾನಿತರ ಪರಿಚಯ, ಅವರು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಬಂಟರ ಸಂಘ ಕುವೈತಿನ ಬೆಂಬಲದ ಸಂದೇಶವನ್ನು ಸಭೆಯ ಮುಂದಿರಿಸಿದರು.

  ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶು ಶೆಟ್ಟಿ ಅಂಬಲಪಾಡಿಯವರು, ಯುವಜನತೆಯು ಹೆಚ್ಚು ಹೆಚ್ಚಾಗಿ ಸಮಾಜ ಸೇವೆಗೆ ಬರಬೇಕು ಮತ್ತು ಹಿರಿಯರು ಅದಕ್ಕೆ ಮಾದರಿಯಾಗಬೇಕೆಂದು ಕಿವಿಮಾತು ಹೇಳಿದರು.

  ರಾಜ್ಯೋತ್ಸವ ವಿಶೇಷ: ಸ್ವಾಗತಿಸಿ ಕುವೈತ್ ಕನ್ನಡ ಸಂಘ

  ಲೀಲಾಧರ ಶೆಟ್ಟಿ ಕಾಪುವವರು ಮಾತನ್ನಾಡುತ್ತ, ಸಂಘ ಸಂಸ್ಥೆಗಳು ಸಮಾಜ ಸೇವಕರನ್ನು ಗುರುತಿಸಿವುದು ಬಹಳ ಮುಖ್ಯವಾದದ್ದು ಮತ್ತು ಇದು ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರಣೆಯಾಗಲಿದೆ ಎಂದು ಬಂಟರ ಸಂಘ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದರು.

  Vishu Shetty and Leeladhara Shetty felicitated by Bunts Sangha Kuwait

  ಸಂಘದ ಮಾಜಿ ಅಧ್ಯಕ್ಷರಾದ ಸುಧಾಕರ್ ಶೆಟ್ಟಿಯವರು, ಸಮಾಜದ ಸರ್ವತೋಮುಖ ಏಳಿಗೆಗೆ ತಮ್ಮೆಲ್ಲ ಸಮಯ ಮತ್ತು ಸಂಪತ್ತನ್ನು ಮೀಸಲಿಡುವ ಸಾಮಾನ್ಯ ಜನರೇ ಕಾರಣ ಮತ್ತು ಉಳಿದವರಿಗೆ ಪ್ರೇರಣೆಯಾಗಲಿದ್ದಾರೆ ಎಂದು ಹೇಳಿದರು.

  ಸಂಘದ ಇನ್ನೊಬ್ಬ ಮಾಜಿ ಅಧ್ಯಕ್ಷರಾದ ನಕ್ರೆ ಸತೀಶ್ಚಂದ್ರ ಶೆಟ್ಟಿಯವರು, ದೂರದೂರಿನಲ್ಲಿರುವ ನಮಗೆ ತಾಯ್ನಾಡಿನಲ್ಲಿ ನೇರವಾಗಿ ಸಮಾಜಸೇವೆಗೆ ತೊಡಗಿಕೊಳ್ಳಲಿಕ್ಕೆ ಸಾಧ್ಯವಾಗದೇ ಇರುವುದರಿಂದ ತಮ್ಮಲ್ಲರ ಸಂಪೂರ್ಣ ಸಹಕಾರ ಮತ್ತು ಬೆಂಬಲ ಸದಾ ಇರಲಿದೆ ಎಂದು ಹೇಳಿದರು.

  ಸಂಘದ ಹಾಲಿ ಅಧ್ಯಕ್ಷರಾದ ಯದುನಾಥ ಅಳ್ವ, ತಮ್ಮ ತಮ್ಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಮಹನೀಯರಿಗೆ ಸಂಘದ ವತಿಯಿಂದ ಸನ್ಮಾನಿಸುತ್ತಿರುವುದು ಸಂಘಕ್ಕೆ ಹೆಮ್ಮೆಯ ವಿಚಾರ ಮತ್ತು ಸಂಘದ ಸೌಭಾಗ್ಯವೆಂದು ಹೇಳಿದರು.

  Vishu Shetty and Leeladhara Shetty felicitated by Bunts Sangha Kuwait

  ಸಂಘದ ಉಪಾಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿಯವರು ಮಾತನಾಡಿ, ರಂಗಕಲಾವಿದರು ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಲು ಹೆಮ್ಮೆಯಾಗುತ್ತಿದೆಯೆಂದರು.

  ಬಂಟರ ಸಂಘದ ಹಿರಿಯ ಸದಸ್ಯರಾದ ಚಂದ್ರಹಾಸ ಶೆಟ್ಟಿ ಅವರು, ಬಂಟರ ಸಂಘ ಕುವೈತ್ ಸರ್ವ ಸಮಯದಲ್ಲೂ ಸಮಾಜದ ಏಳಿಗೆಗೆ ಬೇಕಾದ ಸಾಧ್ಯವಾದ ಸರ್ವನೆರವನ್ನು ಒದಗಿಸಲು ಸಿದ್ದವಿದೆ ಎಂದು ಬೆನ್ನುತಟ್ಟಿದರು.

  ಇದೆ ಸಮಯದಲ್ಲಿ ಕುವೈತಿಗೆ ಅಗಮಿಸಿದ್ದ ಬಂಟ ಸಮಾಜದ ರಂಗಕಲಾವಿದರಾದ ಶಿವಪ್ರಕಾಶ್ ಪೂಂಜಾ, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ ಮತ್ತು ಸುಜಿತ್ ಶೆಟ್ಟಿಯವರನ್ನು ಕೂಡ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಕಾರ್ಯಕ್ರಮನ್ನು ಸಂಘದ ಸದಸ್ಯರಾದ ಮನೋಜ್ ಶೆಟ್ಟಿ ಇವರು ನಿರ್ವಹಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Social activists Vishu Shetty and well known laureate Leeladhara Shetty were felicitated by Bunts Sangha Kuwait on 28th October, 2017.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more