ಕತಾರ್ ಸಾಂಸ್ಕೃತಿಕ ಸಂಭ್ರಮದಲ್ಲಿ ತಾರೆ ಸುಧಾರಾಣಿ

Posted By:
Subscribe to Oneindia Kannada

ಸದಾ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕರ್ನಾಟಕ ಸಂಘ ಕತಾರ್ ಹೊಸ ವರ್ಷದ ಆರಂಭದಲ್ಲಿ ಮತ್ತೊಂದು ವಿಶಿಷ್ಟವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜನವರಿಯಲ್ಲಿ ಮಕ್ಕಳ ಪ್ರತಿಭಾ ಶೋಧ ನಡೆಸಿದ್ದ ಸಂಘ ಈಗ ಮಹಿಳಾಮಣಿಗಳಿಗಾಗಿ ಪ್ರತಿಭಾ ಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಿದೆ.

ಬರುವ ಶುಕ್ರವಾರ, ಫೆಬ್ರವರಿ 12ರಂದು 'ವನಿತಾ ಪ್ರತಿಭಾ ಸಂಭ್ರಮ 2016' ಆಯೋಜಿಸಲಾಗಿದ್ದು, ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ. ದೋಹಾದಲ್ಲಿರುವ ಅಲ್ ಮಹಾ ಅಕಾಡೆಮಿ ಫಾರ್ ಬಾಯ್ಸ್ ನಲ್ಲಿ ವನಿತೆಯರಿಗಾಗಿ ನಾನಾ ಸ್ಪರ್ಧೆಗಳು ಕಾದುಕುಳಿತಿವೆ.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೇನೆಂದರೆ, ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾದ, ಮೋಹಕ ತಾರೆ ಸುಧಾರಾಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದು. 1978ರಲ್ಲಿ ಬಿಡುಗಡೆಯಾಗಿದ್ದ 'ಕಿಲಾಡಿ ಕಿಟ್ಟು' (ಬಾಲನಟಿ) ಚಿತ್ರದಿಂದ ಹಿಡಿದು ಇಲ್ಲಿಯವರೆಗೆ ಹಲವಾರು ಚಿತ್ರಗಳಲ್ಲಿ 45 ವರ್ಷದ ಸುಧಾರಾಣಿ ನಟಿಸಿದ್ದಾರೆ. ['ಮನ ಮೆಚ್ಚಿದ ಹುಡುಗಿ' ಸುಧಾರಾಣಿ ಹೊಸ ಲುಕ್... ವಾಹ್!]

Sudha Rani to grace Vanitha Pratibha Sambharama Qatar

ಮಹಿಳೆಯರ ಸ್ಪರ್ಧೆಗಳು ಇಂತಿವೆ

1) ರಂಗೋಲಿ ಸ್ಪರ್ಧೆ
2) ಕಸದಿಂದ ರಸ
3) ಬೆಂಕಿಯಿಲ್ಲದೆ ಅಡುಗೆ ಮಾಡು
4) ಫ್ಯಾಷನ್ ಶೋ - ಭಾರತೀಯ ಸಾಂಪ್ರದಾಯಿಕ ಉಡುಗೆ
5) ಅಂತ್ಯಾಕ್ಷರಿ - ಪ್ರತಿ ತಂಡದಲ್ಲಿ ಇಬ್ಬರು ಸ್ಪರ್ಧಿಗಳು

ಬೆಳಗಿನ ಸೆಷನ್ (7.30ರಿಂದ 11) ನಲ್ಲಿ ರಂಗೋಲಿ, ಕಸದಿಂದ ರಸ ಮತ್ತು ಅಡುಗೆ ಸ್ಪರ್ಧೆಗಳು ನಡೆಯುತ್ತಿದ್ದರೆ, ಮಧ್ಯಾಹ್ನ 3.30ರಿಂದ ಸಂಜೆ 7.30ರವರೆಗೆ ಇರುವ ಸಮಯದಲ್ಲಿ ಫ್ಯಾಷನ್ ಶೋ ಮತ್ತು ಅಂತ್ಯಾಕ್ಷರಿ ಸ್ಪರ್ಧೆಗಳು ನಡೆಯಲಿವೆ. [ಕತಾರ್ ಕರ್ನಾಟಕ ಸಂಘದ ಅರ್ಥಪೂರ್ಣ ರಾಜ್ಯೋತ್ಸವ]

ಹೆಚ್ಚಿನ ವಿವರಗಳಿಗಾಗಿ ಸಂಪರ್ಕ

ಶಿಲ್ಪಾ ಶೆಟ್ಟಿ : 33836322
ಕೃತಿಕಾ ಅಶ್ವಿನ್ : 55095361
ಸುಬ್ರಮಣ್ಯ ಹೆಬ್ಬಾಗಿಲು : 55641025
ಸುನೀಲ್ ಭಂಡಾರಿ : 55531816 [ಸಂಘದ ವೆಬ್ ಸೈಟ್]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Popular Kannada actress Sudha Rani to grace Vanitha Pratibha Sambharama - 2016 to be conducted by Karnataka Sangha Qatar, a socio cultural organization of the Kannadiga community, on 12th February, 2016 at Al Maha Academy for boys at Doha, Qatar.
Please Wait while comments are loading...