ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಅದ್ದೂರಿ ಭಾರತ ವಸಂತೋತ್ಸವ 2018

By ಶಿವ ಪಾಟೀಲ, ಆಲ್ಬನಿ, ನ್ಯೂ ಯಾರ್ಕ್
|
Google Oneindia Kannada News

ಟ್ರಿ-ಸಿಟಿ ಇಂಡಿಯಾ ಅಸೋಸಿಯೇಷನ್ (Tri-City Indian Association, (TRICIA)) ಸಂಸ್ಥೆಯು 2018ರ ಜೂನ್ 10ರಂದು ಆಲ್ಬನಿ ನಗರದಲ್ಲಿ ಅತ್ಯಂತ ಅದ್ದೂರಿಯಾಗಿ 'ಭಾರತ - ವಸಂತೋತ್ಸವ' (Spring-Festival of India 2018) ಆಚರಿಸಿತು.

ಇದರಲ್ಲಿ ಸುಮಾರು ಆರು ನೂರು ಜನ ಸ್ಥಳೀಯ ಕಲಾವಿದರು ಪ್ರದರ್ಶನ ನೀಡಿದರು. 1967ರಲ್ಲಿ ಪ್ರಾರಂಭವಾದ ಟ್ರಿಸಿಯಾ (TRICIA) ಸಂಸ್ಥೆಯು ನ್ಯೂ ಯಾರ್ಕ್ ರಾಜ್ಯದ ಉತ್ತರ ಭಾಗದಲ್ಲಿ ನೆಲೆಸಿರುವ ಸಾವಿರಾರು ಭಾರತೀಯರಿಗೆ ಸೇವೆ ಒದಗಿಸುತ್ತಿದೆ.

ಜೂನ್ ಕೊನೆಯಲ್ಲಿ ಡೆಟ್ರಾಯಿಟ್ ನಲ್ಲಿ 41ನೇ ವೀರಶೈವ ಸಮ್ಮೇಳನ ಜೂನ್ ಕೊನೆಯಲ್ಲಿ ಡೆಟ್ರಾಯಿಟ್ ನಲ್ಲಿ 41ನೇ ವೀರಶೈವ ಸಮ್ಮೇಳನ

ಸುಮಾರು ಅರ್ಧ ಶತಕದಷ್ಟು ಇತಿಹಾಸ ಇರುವ ಟ್ರಿಸಿಯಾ ಸಂಸ್ಥೆಗೆ 'ಬೆಂಕಿ ಬಸಣ್ಣ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ, ಬಸವರಾಜ ಬೆಂಕಿಯವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡಿಗರೊಬ್ಬರು ಈ TRICIA ಸಂಸ್ಥೆಗೆ ಅಧ್ಯಕ್ಷರಾಗುತ್ತಿರುವುದು ಇದೇ ಪ್ರಥಮ ಬಾರಿ. ಇದು ಎಲ್ಲ ಕನ್ನಡಿಗರಿಗೂ ಅತ್ಯಂತ ಹೆಮ್ಮೆ ಮತ್ತು ಅಭಿಮಾನದ ಸಂಗತಿ. ಇವರು ಪ್ರಥಮ ಬಾರಿಗೆ 'ಟ್ರಿಸಿಯಾ-ಟೈಮ್ಸ್' (TRICIA TIMES) ಎಂಬ ತ್ರೈಮಾಸಿಕ - ಪತ್ರಿಕೆಯನ್ನು ಪ್ರಾರಂಭಿಸಿದ್ದಾರೆ.

Spring Festival of India 2018 in America

ಈ ವರ್ಷದ 'ಭಾರತ ವಸಂತೋತ್ಸವದಲ್ಲಿ ವಿವಿಧ ರಾಜ್ಯಗಳ ನೃತ್ಯ ವೈಭವಗಳನ್ನು ಪ್ರದರ್ಶಿಸಲಾಗಿತ್ತು. ಐದು ವರ್ಷದ ಚಿಕ್ಕ ಮಗುವಿನಿಂದ ಹಿಡಿದು ಎಪ್ಪತ್ತು ವರ್ಷದ ಹಿರಿಯರು ಒಂದುಗೂಡಿ ಪ್ರದರ್ಶಿಸಿದ "ಕರ್ನಾಟಕ ವೈಭವ" ಅತ್ಯಂತ ಸೊಗಸಾಗಿ ಮೂಡಿ ಬಂದಿತು. ಇದರಲ್ಲಿ ಕಂಸಾಳೆ, ಕೋಲಾಟ, ಜಾನಪದ ನೃತ್ಯ, ಹಾಗೂ ಕನ್ನಡದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಸಾಂಪ್ರದಾಯಕ ತೊಡಿಗೆಗಳ ಫ್ಯಾಷನ್ ಶೋ (Fashion Show) ಸೇರಿದ್ದವು.

ಬೆಂಗ್ಳೂರಲ್ಲಿ ಅಮೆರಿಕಾ ಡ್ಯಾನ್ಸ್ ಕಂಪನಿ ನೃತ್ಯ ಪ್ರದರ್ಶನ 'ಸಂಗಮಮ್' ಬೆಂಗ್ಳೂರಲ್ಲಿ ಅಮೆರಿಕಾ ಡ್ಯಾನ್ಸ್ ಕಂಪನಿ ನೃತ್ಯ ಪ್ರದರ್ಶನ 'ಸಂಗಮಮ್'

ಇದೆ ರೀತಿ ಮಹಾರಾಷ್ಟ್ರ- ವೈಭವ, ಕೇರಳ-ವೈಭವ, ತೆಲಗು-ವೈಭವ, ರಾಜಸ್ಥಾನ್-ವೈಭವ, ಪಂಜಾಬಿ-ವೈಭವ, ಮುಂತಾದ ರಾಜ್ಯಗಳ ವೈಭವಗಳು ತುಂಬ ಅದ್ದೂರಿಯಾಗಿ ಮೂಡಿಬಂದವು. ಈ ಕಾರ್ಯಕ್ರಮವನ್ನು ಸಾವಿರಾರು ಜನರು ವೀಕ್ಷಿಸಿ ಆನಂದಿಸಿದರು. ಮನೋರಂಜನೆಯಲ್ಲದೆ ಸುಮಾರು 50ಕ್ಕೂ ಹೆಚ್ಚು ಬಟ್ಟೆ, ಆಭರಣ, ಊಟ ತಿಂಡಿಗಳ ಅಂಗಡಿ ಕೂಡ ಇದ್ದವು.

Spring Festival of India 2018 in America

ಕರ್ನಾಟಕ ವೈಭವ

ಆಲ್ಬನಿ ಕನ್ನಡ ಕೂಟದ ಸುಮಾರು ಅರವತ್ತು ಕಲಾವಿದರು ನಡೆಸಿಕೊಟ್ಟ "ಕರ್ನಾಟಕ-ವೈಭವ" ಕಾರ್ಯಕ್ರಮ ಮೈ ರೋಮಾಂಚನಗೊಳ್ಳುವಷ್ಟು ಅದ್ಭುತವಾಗಿ ಮೂಡಿ ಬಂದಿತು. ಇದರಲ್ಲಿ ಕಂಸಾಳೆ, ಕೋಲಾಟ, ಜಾನಪದ ನೃತ್ಯ, ಹಾಗೂ ಕನ್ನಡದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಸಾಂಪ್ರದಾಯಕ ತೊಡಿಗೆಗಳ ಫ್ಯಾಷನ್ ಶೋ ಸೇರಿದ್ದವು.

'ಮಹಾ ಮಾದೇಶ್ವರ ದೇವರ' ಹಾಡಿಗೆ ಕಂಸಾಳೆ ನೃತ್ಯವನ್ನು ಮಾಡಿದ ಮಕ್ಕಳೆಂದರೆ ಸುಧನ್ವ ರಾವ್, ಪ್ರಣವ್ ವೂಡಿ, ಪರೀಕ್ಷಿತ್ ವೂಡಿ, ಶ್ಲೋಕ್ ಪ್ರಭುಶೆಟ್ಟರ್ ಮತ್ತು ವಚನಪ್ರಭುಶೆಟ್ಟರ್. 'ಚೆಲುವಯ್ಯ ಚೆಲುವೋ ತಾನಿ ತಂದಾನಾ' ಮತ್ತು 'ಕೋಲು ಕೋಲೆನ್ನ ಕೋಲು ಕೋಲೆ' ಹಾಡುಗಳಿಗೆ ಕೋಲಾಟ ಮಾಡಿದ ಪುಟಾಣಿಗಳೆಂದರೆ ಜೀವಿಕ ಬೆಂಕಿ, ಸಹನಾರಾವ್, ಇಶೇಪ್ರದೀಪ್ ನಾಗ್, ಮೇಘ ರಾಮ್ ಪ್ರಸಾದ್, ಸಾನಿ ರವಿ ಧನ ಪ್ರಾರ, ಹರಿಣಿ ಪ್ರಶಾಂತ್ ತುಮಲಪಲ್ಲಿ.

Spring Festival of India 2018 in America

'ಗಲ್ಲು ಗಲ್ಲೆನುತ..' ಮತ್ತು 'ಏಳು ಮಲೆ ಮೇಲೇರಿ' ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದ ಕನ್ನಡದ ಸುಂದರಿಯರೆಂದರೆ ದೀಪ ಸಂತೋಷ, ತಾರಾಮತಿ, ಘುಗ್ವಾಡ, ಮಮತಾ ಕಿರಣ, ರೇಖಾ ಶೆಟ್ಟಿ, ಸಭನಾ ಸಹದೇವನ್, ಅಲ್ಕಾ ರಾವ್, ನಿವೇದಿತಾ ಗುಡೂರ್ ಮತ್ತು ರೇಖಾ ಜೀರಂಕಲಿ.

ಇದರ ನಂತರ ಸಾಂಪ್ರದಾಯಕ ಉಡುಗೆಗಳ 'ಫ್ಯಾಷನ್ ಶೋ' ನಲ್ಲಿ ಕೊಡಗು, ಧಾರವಾಡ , ಬೆಳಗಾವಿ, ಮೈಸೂರು, ಕೊಂಕಣಿ ಮತ್ತು ಬೆಂಗಳೂರಿನ ವೈವಿಧ್ಯಮಯ ಉಡುಗೆ ತೊಡುಗೆಗಳನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಭಾಗವಹಿಸಿದ ಜೋಡಿಗಳು - ಉಮಾ ಮತ್ತು ಬಸವರಾಜ್ ಬೆಂಕಿ, ಲತಾ ಮತ್ತು ಹರಿಕಲಿಯತ್, ಚೈತ್ರ ಮತ್ತು ನಂದ ಕಿಶೋರ್, ಸೂಚಿತ ಮತ್ತು ಅಮೋಲ್ ಜಾಜು, ಅಲ್ಕಾ ಮತ್ತು ಪ್ರವೀಣ್ ರಾವ್, ಅನಿಷಾ, ಶಿಬಾನಿ ಪ್ರಭಾಕರ್, ಧರಿಣಿ ಶ್ರೀಧರ್, ಶೀಲಾ ರಾಮ್ ಪ್ರಸಾದ್ ಮತ್ತುಅತಿಥಿ ರೇವಣ್ಣ.

Spring Festival of India 2018 in America

ಕೊನೆಯಲ್ಲಿ ಆಲ್ಬನಿ ಕನ್ನಡ ಸಂಗಡ ಸದಸ್ಯರೆಲ್ಲರೂ ಒಟ್ಟಿಗೆ ರೋಮಾಂಚನಗೊಳಿಸುವ 'ಹಚ್ಚೇವು ಕನ್ನಡದ ದೀಪ' ಕೈಯಲ್ಲಿ ದೀಪವನ್ನು ಹಿಡಿದು ಹಾಡಿದರು.

English summary
Spring Festival of India 2018 was celebrated in America by by hundreds of Kannadigas. The event was organized by Tri-City Indian Association, (TRICIA). Report by Shiva Patil, Albany, New York.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X