ಲಕ್ಷ್ಮೀ ಕಟಾಕ್ಷವಿಲ್ಲದೆ ಕನಸುಗಳು ನನಸಾಗಲು ಸಾಧ್ಯವೆ?

Posted By: ಸುದ್ದಿವಾಹಿನಿ, ಸಿಂಗಪುರ
Subscribe to Oneindia Kannada

ಕನ್ನಡ ಸಂಘ (ಸಿಂಗಪುರ) ತನ್ನ ಇಪ್ಪತ್ತನೆಯ ವಾರ್ಷಿಕೋತ್ಸವವನ್ನು ಒಂದು ಸಂಸ್ಕೃತಿ ಸಮ್ಮೇಳನವಾಗಿ ಆಚರಿಸಬೇಕೆಂದುಕೊಂಡಾಗ ಸಿಂಗನ್ನಡಿಗರಲ್ಲಿ ಬಹಳಷ್ಟು ಕನಸುಗಳು ಮತ್ತು ಉತ್ಸಾಹಭರಿತ ಯೋಜನೆಗಳು ಮುಂದಾದವು.

ಒಟ್ಟಿನಲ್ಲಿ ಸಂಘದ ಧ್ಯೇಯವು ಸಂಘದ ನಿಲುವಿನ ಹೆಚ್ಚಳಿಕೆ ಮತ್ತು ನಿರಂತರ ಬೆಳವಣಿಗೆ. ಇವೆರಡರಿಂದ ಸಂಘದಿಂದ ಆಗುತ್ತಿರುವ ಸಮಾಜ ಸೇವೆ ಮತ್ತು ಕನ್ನಡ ಅಭಿವೃದ್ಧಿಗೆ ಪುಷ್ಟಿ. ಎಲ್ಲಾ ದೃಷ್ಟಿಗಳಿಂದಲೂ "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ"ವು ಈ ಧ್ಯೇಯಕ್ಕೆ ವೇದಿಕೆಯಾಗುತ್ತದೆ ಎಂಬ ನಂಬಿಕೆ.

ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನದ ಕಾರ್ಯಕಾರಿ ಸಮಿತಿ ಮತ್ತು ಉಪಸಮಿತಿಗಳು ರಚನೆಯಾಗಿ ಯೋಚನೆಗಳ ಮಂಥನ ಮಾಡಿದಾಗ ಬಂದದ್ದು ಒಂದು ವಿಶೇಷ "theme" ಅಥವಾ ನಿರೂಪಣಾ ವಿಷಯ - ಕನ್ನಡದ ಪುಷ್ಟೀಕರಣ; ಯುವಜನಾಂಗವನ್ನು ಮುಂದೆ ತರುವುದು; ಮತ್ತು ಹೊಸತನ್ನು ನಮ್ಮದಾಗಿಸಿಕೊಳ್ಳುವುದು. ಒಂದು ಮಹತ್ತರವಾದ ಮತ್ತು ಶಕ್ತಿಯುತ ಪರಿಕಲ್ಪನೆಯಲ್ಲವೇ? [ಸವಿಸವಿ ನೆನಪುಗಳೊಂದಿಗೆ ಸಿಂಗಾರ ಸಮ್ಮೇಳನಕ್ಕೆ ಮಂಗಳ]

Singara Sammelana Singapore : Big thanks to all sponsors

ಕನ್ನಡ ಒಂದು ಬರೀ ಭಾಷೆಯಲ್ಲ. ಉನ್ನತವಾದ ಚರಿತ್ರೆ ಮತ್ತು ಸಂಸ್ಕೃತಿಯ ಆಗರ. ಕನ್ನಡದ ಪುಷ್ಟೀಕರಣವೆಂದರೆ ಸಿಂಗಪೂರಿನ ಮತ್ತು ವಿಶ್ವದೆಲ್ಲೆಡೆಯಿರುವ ಕಲಾವಿದರ ಪ್ರದರ್ಶನಗಳಿಗೆ ಉತ್ತೇಜನ ಮತ್ತು ಒಂದು ವೇದಿಕೆಯನ್ನು ಕಲ್ಪಿಸುವುದು. ಇವರುಗಳ ಪ್ರಯಾಣ ಮತ್ತು ನೆಲೆಗೆ ಹಣ ಕಾಸು ವ್ಯವಸ್ಥೆಯಾಗಬೇಕು. ಮಹಾ ಸಮ್ಮೇಳನ, ಮಹತ್ತರ ಪರಿಕಲ್ಪನೆ ಮತ್ತು ಅದಕ್ಕೆ ಸರಿಸಾಟಿಯಾಗುವ ಹಣಕಾಸು ವ್ಯವಸ್ಥೆ. ಯಾರು ಮಾಡಬಲ್ಲರು? ಸುಲಭೋಪಾಯವೆಂದರೆ ಟಿಕೆಟ್ ಮಾರಾಟ ಮತ್ತು ಪ್ರಾಯೋಜಕರಿಂದ ಬರುವ ಬಂಡವಾಳ.

ಪ್ರೇಕ್ಷಕರಿಗೆ ಟಿಕೆಟ್ ಕೊಂಡರೆ ಮನರಂಜನೆ ದೊರಕುತ್ತದೆ. ಪ್ರಾಯೋಜಕರಿಗಾದರೂ ಏನು ಆದಾಯ? ಸಹಜವಾಗಿ ಪ್ರಚಾರ ದೊರೆಯುತ್ತದೆ. ಅಷ್ಟೇ ಅಲ್ಲದೆ ವಿವಿಧ ಉದ್ಯಮ ಮತ್ತು ಕಾರ್ಯಗಳಲ್ಲಿ ತೊಡಗಿರುವ ಜನಗಳ ಭೇಟಿ, ಮತ್ತು ಸಿಂಗಪೂರಿನಂತಹ ದೇಶದಲ್ಲಿ ಕಾಣ ಬರುವ ಪರಿಕಲ್ಪನೆಗಳ ಪರಿಚಯ. [ಕನ್ನಡ ಉಳಿಸಬೇಕೆಂದರೆ ಮಕ್ಕಳನ್ನು ಉದ್ಯಮಿಗಳನ್ನಾಗಿಸಿ : ಎಸ್ಎಲ್ ಭೈರಪ್ಪ]

ಕನ್ನಡ ಸಂಘ (ಸಿಂಗಪುರ)ವು ಈ ಕೊಡುಗೆಗಳನ್ನು ವಿನಮ್ರವಾಗಿ ಮುಂದಿಟ್ಟು ಪ್ರಾಯೋಜಕರ ಸಹಾಯ ಕೋರಿದರು. ಬಹಳ ಹಿಂದಿನಿಂದ ಕಲೆ ಮತ್ತು ಸಂಸ್ಕೃತಿಗಳ ಉತ್ತೇಜನ ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ, ಒಡೆಯ ರಾಜ ಮಹಾರಾಜರುಗಳು ಹೊತ್ತಿದ್ದರು. ಈಗ ಈ ದಿಶೆಯಲ್ಲಿ ನವ ಉದ್ಯಮಿಗಳು ಪ್ರಾಯೊಜಕರಾಗಿ ಸಂಸ್ಕೃತಿಯ ಬೆಳವಣಿಗೆಗೆ ಕಂಕಣ ಬದ್ಧರಾಗುತ್ತಿದ್ದಾರೆ.

ನಮ್ಮ ಪ್ರಾಯೊಜಕರು ವಿಶಾಲ ಹೃದಯದಿಂದ ಈ ಕಾರ್ಯಕ್ಕೆ ಸಹಾಯ ಒದಗಿಸಿದರು. ಲ್ಯಾಂಡೋಮಸ್ (Landmous) ಪ್ರಮುಖ ಪ್ರಾಯೊಜಕರಾಗಿ ಮುಂದಾದರು. ಟೋಟಲ್ ಎನ್ವಿರಾನ್‌ಮೆಂಟ್ (Total Environment) ; ಸೃಷ್ಟಿ ಡಿಸೈನ್ಸ್ (Srshti Designs) ; ಮತ್ತು ಯೂನಿಕಾನ್ (UNICON) ಸ್ವರ್ಣ ಪ್ರಾಯೊಜಕರಾದರು. [ಈರ ಮಾರ ಆಡುವ ಕನ್ನಡದಲ್ಲಿದೆ ಶ್ರೀಮಂತಿಕೆ : ಕೃಷ್ಣೇಗೌಡ]

ಮಂತ್ರಿ (Mantri Developers) ; ಮೈತ್ರೇಯಿ (Mythreyi Promoters and Developers) ಮತ್ತು ರಜತ ಪ್ರಾಯೊಜಕರಾದರೆ ಸಿಂಗ್ ಹೆಲ್ತ್ (SingHealth) ಮತ್ತು ಇನ್ಫೋಸಿಸ್ (Infosys) ಕಂಚಿನ ಪ್ರಾಯೊಜಕರಾದರು.

ಸಹಾಯಕ ಪ್ರಾಯೋಜಕರಾಗಿ ಕರ್ನಾಟಕ ಸರ್ಕಾರದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ವಿಶೇಷ ಸಹಾಯ ಒದಗಿಸುವುದಲ್ಲದೆ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದರು. ಒನ್ಇಂಡಿಯಾ ಕನ್ನಡ ವೆಬ್ ಸೈಟ್ ಸಹ ಇದೇ ಸಾಲಿನಲ್ಲಿ ಸಹಾಯ ಒದಗಿಸಿದರು.

ಇದಲ್ಲದೆ ಬಹಳಷ್ಟು ಉದ್ಯಮಗಳು ಪ್ರಾಯೊಜಕರಾಗಿ ಬೆಂಬಲಿಸಿದರು. ಲಕುಮಿ ಕಟಾಕ್ಷ ದೊರೆಯುತ್ತಲೆ, ಕನಸುಗಳು ಚಿದ್ಘನ ಪರಿಕಲ್ಪನೆಗಳು ನನಸಾದವು. ಕನ್ನಡ ಸಂಘ (ಸಿಂಗಪುರ)ವು ಈ ಎಲ್ಲಾ ಪ್ರಾಯೋಜಕರಿಗೆ ಹೃದಯ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತದೆ.

ಸಿಂಗನ್ನಡಿಗರೆ, ಇಂತಹ ಪ್ರಾಯೋಜಕರ ಬೆಂಬಲ ದೊರೆತಲ್ಲಿ ಕನ್ನಡ ಸಂಘವು ಇನ್ನು ಕೆಲವು ವರ್ಷಗಳಲ್ಲಿ ಮತ್ತೊಮ್ಮೆ ಸಂಸ್ಕೃತಿ ಸಮ್ಮೇಳನ ನಡೆಸುವಲ್ಲಿ ನಿಸ್ಸಂದೇಹವಾಗಿ ಕನಸು ಕಾಣಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Without the financial help from sponsors no big event will be successful. Kannada Sangha Singapore thanks all the sponsors for making Singara Kannada Cultural Conference a huge success.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ