ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿರಾ ಚಿತ್ರಕ್ಕೆ ಬೆನ್ನೆಲುಬಾದ ಯುಕೆಯ ಅನಿವಾಸಿ ಕನ್ನಡಿಗರು

By ಪ್ರಶಾಂತ್ ರಾವ್, ಯುಕೆ
|
Google Oneindia Kannada News

ಸುಮಾರು ಹತ್ತು ವರುಷಗಳ ಹಿಂದಿನ ಮಾತಿದು. ಕನ್ನಡ ನಾಡಿನ ಬೇರೆ ಪ್ರದೇಶಗಳಲ್ಲಿ ತಮ್ಮ ಬಾಲ್ಯವನ್ನು, ಕಾಲೇಜಿನ ದಿನಗಳನ್ನು ಕಳೆದ ಕೆಲವು ಕನ್ನಡಿಗ ಹುಡುಗರು, ಕಾರ್ಯ ನಿಮ್ಮಿತ್ತ ಲಂಡನ್ ಗೆ ಬರಬೇಕಾಯಿತು. ಇವರೆಲ್ಲರೂ ಐಟಿ ಕಂಪೆನಿಗಳಿಗೆ ಕೆಲಸ ಮಾಡುತಿದ್ದವರೆಂದು ನಿಮಗೆ ಹೇಳಲೇ ಬೇಕಿಲ್ಲ. ಕನ್ನಡ ನಾಡಿನಿಂದ ಆಚೆ ಬಂದಾಕ್ಷಣ, ಕನ್ನಡದ ಮೇಲಿದ್ದ ಪ್ರೀತಿ ಬಾಡಲಿಲ್ಲ ಬದಲಿಗೆ ಹತ್ತು ಹಲವಾರು ದಿಕ್ಕುಗಳಿಂದ ಗರಿಗೆದರಲಾರಂಭಿಸಿತು.

ಸಮಾನ ಮನಸ್ಕರನ್ನು ಸಮಯ ಒಗ್ಗೂಡಿಸಿತ್ತು : ಹೀಗೆ ಲಂಡನ್ ಗೆ ಆಗಮಿಸಿದವರು, ಇಲ್ಫೊರ್ಡ್ ಎಂಬ ಒಂದು ಕ್ಷೇತ್ರದಲ್ಲಿ, ಸುತ್ತ ಮುತ್ತ ಇರುವ ಕೆಲವು ಅಪಾರ್ಟ್ಮೆಂಟ್ ಗಲಳಲ್ಲಿ ತಮ್ಮ ನೆಲೆ ಕಂಡು ಕೊಂಡಿದ್ದರು.

ರೈಲಿನಲ್ಲಿ ಪ್ರಯಾಣಿಸುವಾಗ, ರಸ್ತೆಯಲ್ಲಿ ನಡೆಯುವಾಗ, ಫೂನಿನಲ್ಲಿ ಕನ್ನಡ ಮಾತನಾಡುವದನ್ನು ಕಂಡು, "ನೀವು ಕನ್ನಡದವರ ?" ಎಂಬ ಪ್ರಶ್ನಯೊಂದಿಗೆ ಪ್ರಾರಂಭವಾದ ಪರಿಚಯ ಒಂದು ಅವಿನಾಭಾವ ಸಂಬಂಧವಾಗಿ ಬೆಳೆದು ಕೊಂಡಿತು.

ಈ ಸ್ನೇಹಿತರು ಸೇರಿದಾಗಲೆಲ್ಲ ಕನ್ನಡ ಸಾಹಿತ್ಯ, ಸಿನಿಮಾ, ರಾಜಕೀಯ ಹೀಗೆ ಅನೇಕ ಚರ್ಚೆಗಳು ನಡೆಯುತ್ತಿದ್ದವು. ಎಲ್ಲರಿಗೂ "ನಾವು ಕನ್ನಡಕ್ಕಾಗಿ ಏನು ಮಾಡಿದ್ದೇವೆ" ಎಂಬ ಪ್ರಶ್ನೆ ಸದಾ ಕಾಡುತ್ತಿತ್ತು. ಈ ತಂಡದಲ್ಲಿ ಕೆಲವರು ಆಶು ಕವಿಗಳಾಗಿದ್ದರೆ, ಕೆಲವರಿಗೆ ನಾಟಕ ಮತ್ತು ಸಿನಿಮಾಗಳ ಮೇಲೆ ಒಲವು, ಕೆಲವರಿಗೆ ಜಾನಪದ ಕ್ರೀಡೆಗಳ ಮೇಲೆ ಒಲವು. ಈ ತಂಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರ ಬಗ್ಗೆ ಮುಂದೆ ಓದಿ...

ಹಾಸ್ಯ ನಾಟಕಗಳತ್ತ ಒಲವು

ಹಾಸ್ಯ ನಾಟಕಗಳತ್ತ ಒಲವು

ಕೇವಲ ಪ್ರಶ್ನೆಗಳಿಗಷ್ಟೇ ಸೀಮಿತವಾಗದೆ, ತಮ್ಮದೇ ಶೈಲಿಯಲ್ಲಿ ಉತ್ತರಿಸುವ ಹಾದಿಯನ್ನು ಹಿಡಿಯತೊಡಗಿತು ಈ ತಂಡ. ಇವರು ಯುಕೆ ನಲ್ಲಿ ನಡೆದ ಹಲವು ಕನ್ನಡ ಕಾರ್ಯಕ್ರಮಗಳಲ್ಲಿ ಹಾಸ್ಯ ನಾಟಕಗಳನ್ನು ಮಾಡ ತೊಡಗಿದರು. ಚಿತ್ರದಲ್ಲಿ ನೋಡಬಹುದು

ಕನ್ನಡ ಕಾರ್ಯಕ್ರಮಗಳ ಆಯೋಜನೆ

ಕನ್ನಡ ಕಾರ್ಯಕ್ರಮಗಳ ಆಯೋಜನೆ

ಬೇರೆ ಬೇರೆ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಈ ತಂಡ , ಹೊಯ್ಸಳ ಎಂಬ ಹೆಸರಿನಲ್ಲಿ ಓಜಸ್ ಎಂಬ ಕಾರ್ಯಕ್ರಮವನ್ನ ಆಯೋಜಿಸಿತು. ಈ ಕಾರ್ಯಕ್ರಮದಲ್ಲಿ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿನ ಉದಯೋನ್ಮುಖ ಪ್ರತಿಭಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶಗಳನ್ನು ಕಲ್ಪಿಸಿ ಕೊಡಲಾಯಿತು.

ಕನ್ನಡ ಸೇವೆಗೆ ಸದಾ ಬಿಡುವು ಮಾಡಿಕೊಳ್ಳುವುದು

ಕನ್ನಡ ಸೇವೆಗೆ ಸದಾ ಬಿಡುವು ಮಾಡಿಕೊಳ್ಳುವುದು

ಇತ್ತೀಚೆಗೆ ಇದೇ ತಂಡ ಉಗಾದಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅನೇಕ ಕೆಲಸ ಕಾರ್ಯಗಳ ಒತ್ತಡದಲ್ಲೂ ಕೂಡ ಈರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ಸೇವೆಗೆ ಸದಾ ಬಿಡುವು ಮಾಡಿಕೊಳ್ಳುವುದು ಈ ತಂಡದ ವಿಶೇಷತೆ

ಪುಟಾಣಿ ಪ್ರಪಂಚ ಎಂಬ ಸಂಸ್ಥೆಯನ್ನು ಹುಟ್ಟಿ ಹಾಕಿರುವುದು

ಪುಟಾಣಿ ಪ್ರಪಂಚ ಎಂಬ ಸಂಸ್ಥೆಯನ್ನು ಹುಟ್ಟಿ ಹಾಕಿರುವುದು

ಲಂಡನ್ ನಲ್ಲಿ ಮಕ್ಕಳಿಗೆ ಕನ್ನಡ ಕಲಿಸಲು ಪುಟಾಣಿ ಪ್ರಪಂಚ ಎಂಬ ಸಂಸ್ಥೆ ಯನ್ನು ಹುಟ್ಟಿ ಹಾಕಿ ಪ್ರತೀ ಶನಿವಾರ ಕನ್ನಡ ತರಗತಿಗಳನ್ನು ನಡೆಸುವುದರ ಜೊತೆಗೆ ಮಕ್ಕಳಿಗೆ ಕನ್ನಡ ಕಲೆ ಮತ್ತು ಸಂಸ್ಕೃತಿಯ ಪರಿಚಯವನ್ನು ಮಾಡಿಸುತ್ತಿದ್ದಾರೆ

ಮಹಿರಾ ಚಿತ್ರಕ್ಕೆ ಬಂಡವಾಳ ಹೂಡಿದ್ದು ಇದೇ ತಂಡ

ಮಹಿರಾ ಚಿತ್ರಕ್ಕೆ ಬಂಡವಾಳ ಹೂಡಿದ್ದು ಇದೇ ತಂಡ

ಈ ತಂಡದ ಭಾಗವಾಗಿರುವ ವಿವೇಕ್ ಗೌಡ ರವರಿಗೆ ಮೊದಲಿನಿಂದಲೂ ಕನ್ನಡ ಸಿನಿಮಾಗಳ ಮೇಲೆ ಎಲ್ಲಿಲ್ಲದ ಒಲವು. ಇವರು ಅನೇಕ ಹಾಸ್ಯ ನಾಟಕಗಳಿಗೆ ಕಥೆ ಬರೆದು ನಿರ್ದೇಶಿಸಿದ್ದರು. ಇವರು ಮಹಿರಾ ಚಿತ್ರದ ನಿರ್ದೇಶಕ ಮಹೇಶ್ ಗೌಡ ಜೊತೆ ಕೈಸೇರಿಸಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದಾಗ ಇವರ ಜೊತೆ ನಿಂತಿತ್ತು ಈ ಅನಿವಾಸಿ ಕನ್ನಡಿಗರ ತಂಡ

ಹೊಸ ಸಿನಿಮಾಗಳ ನಿರ್ಮಾಣಕ್ಕೆ ನಾಂದಿಯಾಗಲಿ

ಹೊಸ ಸಿನಿಮಾಗಳ ನಿರ್ಮಾಣಕ್ಕೆ ನಾಂದಿಯಾಗಲಿ

ಹೀಗೆ ಕಥೆಯ ಗಟ್ಟಿತನ, ಸಿನಿಮಾ ನಿರ್ಮಿಸುವ ಅದಮ್ಯ ನಿಲುವು, ಹೂಡಿಕೆದಾರರ ಕನ್ನಡದ ಮೇಲಿನ ಒಲವುಗಳ ಮಿಶ್ರಣದೊಂದಿಗೆ ಹೊರಬರುತ್ತಿದೆ ಮಹಿರಾ ಚಿತ್ರ. ಇದು ಯಶಸ್ವಿಯಾಗಿ ಅನೇಕ ಹೊಸ ಸಿನಿಮಾಗಳ ನಿರ್ಮಾಣಕ್ಕೆ ನಾಂದಿಯಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.

English summary
Like minded Non Resident Kannadiga group members have invested in Mahira Kannada film starring Raj B Shetty. Here is journey of NRI Kannadigas of United Kingdom and their love towards Kannada film and culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X