ಅಮೆರಿಕದಲ್ಲಿ ಕಣ್ಣಿಗೆ ಹಬ್ಬ ತಂದ ನವರಾತ್ರಿ ಬೊಂಬೆ

By: ರಾಮ್ ಪ್ರಸಾದ್
Subscribe to Oneindia Kannada

ಭಾರತೀಯರು ತಮ್ಮ ತಾಯಿನಾಡು ಬಿಟ್ಟು ಹೊರದೇಶಗಳಿಗೆ ಹೋಗಿ ನೆಲೆಸಿದರೂ ತಮ್ಮತನವನ್ನು ಕಳೆದುಕೊಳ್ಳದೆ, ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬರುವುದು ಹೊಸತೇನಲ್ಲ. ಅಂತೆಯೇ ಬೆಂಗಳೂರಿನ ಉಷಾ ರಾಮ್ ಪ್ರಸಾದ್ ಅವರು ಸುಮಾರು 25 ವರುಷಗಳಿಗೂ ಹೆಚ್ಚು ಅಮೆರಿಕೆಯಲ್ಲಿ ನೆಲಸಿದ್ದರೂ ಪ್ರತಿ ಹಿಂದೂ ಹಬ್ಬಗಳನ್ನು ಚಾಚು ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.

ನೋಡೇ ಅನಭವಿಸಬೇಕು ಧಾರವಾಡ ನವರಾತ್ರಿ ಜಾತ್ರಿ

ಇತ್ತೀಚಿಗೆ ನವರಾತ್ರಿ ಹಬ್ಬವನ್ನು ಓಹಿಯೋದ ಪೆರ್ರಿಸ್ ಬರ್ಗ್ ನಗರದಲ್ಲಿ ಅತ್ಯಂತ ವರ್ಣಮಯವಾಗಿ ಬಂಧು ಬಳಗದೊಂದಿಗೆ ಆಚರಿಸಿದ್ದಾರೆ. ಬಂದ ಅತಿಥಿಗಳನ್ನು ತರಹೇವಾರಿ ತಿಂಡಿ ತೀರ್ಥದೊಂದಿಗೆ ಆದರಿಸಿ, ಬಂದಿದ್ದ ಹೆಂಗಳೆಯರಿಗೆ ಅರಿಶಿನ ಕುಂಕುಮಗಳನ್ನೂ ಕೊಟ್ಟು ಸಂಭ್ರಮಿಸಿದ್ದಾರೆ. ನಮ್ಮ ಸಂಸ್ಕೃತಿ, ನಮ್ಮ ಆಚಾರಗಳು ಇದೆ ರೀತಿ ಮುಂದುವರೆಯಲಿ ಎಂದು ಹಾರೈಸುತ್ತಾರೆ.

ಪ್ರತಿಸಲವೂ ಮೆಟ್ಟಲುಗಳನ್ನು ಮಾಡಿ ಪಟ್ಟದ ಬೊಂಬೆಗಳೊಂದಿಗೆ ಇತರೆ ಬೊಂಬೆಗಳನ್ನು ಇಡುವುದೇ ಅಲ್ಲದೆ, ಪ್ರತಿ ವರುಷವು ಬೇರೆ ಬೇರೆ ಕರ್ನಾಟಕದ ವಿಷಯಗಳ ಕುರಿತಾದ ಮಾದರಿಗಳನ್ನು ಮಾಡುತ್ತಾರೆ. ಈ ವರುಷದ ಮಾದರಿಗಳು (ಮಾಡೆಲ್ಸ್), ಒಂದು ಹಿಂದೂ ಸಂಸ್ಕೃತಿಯ ಮದುವೆ. ಎರಡನೆಯದು ಮೈಸೊರಿನ ಜೂ, ಆಟೋ ನಿಲ್ದಾಣ ಮುಂತಾದವು. ನವರಾತ್ರಿ ಸಂದರ್ಭದಲ್ಲಿ ಇಂಥ ಬೊಂಬೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಹಿಂದೂ ಹಬ್ಬಗಳ ಸಂಭ್ರಮದ ಆಚರಣೆ

ಹಿಂದೂ ಹಬ್ಬಗಳ ಸಂಭ್ರಮದ ಆಚರಣೆ

25 ವರ್ಷದಿಂದ ಅಮೆರಿಕದಲ್ಲೇ ನೆಲೆಸಿದ್ದರೂ ಹಿಂದು ಪರಂಪರೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಮರೆಯದೇ ಪಾಲಿಸುತ್ತಿರುವ, ಎಲ್ಲ ಹಿಂದೂ ಹಬ್ಬಗಳನ್ನೂ ಸಂಭ್ರಮದಿಂದ ಆಚರಿಸುತ್ತಿರುವ ಉಷಾ ರಾವ್ ದಂಪತಿ.

ಚೆಂದಕಿಂತ ಚೆಂದ ಈ ಬೊಂಬೆಗಳು

ಚೆಂದಕಿಂತ ಚೆಂದ ಈ ಬೊಂಬೆಗಳು

ನವರಾತ್ರಿಯ ಪ್ರಮುಖ ಆಕರ್ಷಣೆಯಾದ ಬೊಂಬೆ ಕೂರಿಸುವ ಪದ್ಧತಿಯನ್ನೂ ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿರುವ ಕುಟುಂಬ

ಬಾಯಲ್ಲಿ ನೀರೂರಿಸುವ ಬಗೆ ಬಗೆ ಖಾದ್ಯ

ಬಾಯಲ್ಲಿ ನೀರೂರಿಸುವ ಬಗೆ ಬಗೆ ಖಾದ್ಯ

ಕಡಲೆಕಾಳಿನ ಉಸುಳಿ, ಬೂಂದಿ ಲಾಡು ಸೇರಿದಂತೆ ಬಾಯಲ್ಲಿ ನೀರು ಬರಿಸುವ ಬಗೆ ಬಗೆ ಖಾದ್ಯಗಳು ನವರಾತ್ರಿ ಆಚರಣೆಯ ಪ್ರಮುಖ ಆಕರ್ಷಣೆ

ಹೆಂಗೆಳೆಯರಿಗೆ ಹಬ್ಬದ ಸಂಭ್ರಮ

ಹೆಂಗೆಳೆಯರಿಗೆ ಹಬ್ಬದ ಸಂಭ್ರಮ

ಹೆಂಗೆಳೆಯರಿಗೆ ಪ್ರತಿದಿನವೂ ಹಬ್ಬವೇ. ಅದರಲ್ಲೂ ಇಂಥ ಆಅಚರಣೆಗಳು ಬಂದರಂತೂ, ಸಿಂಗರಿಸಿಕೊಂಡು ಅವರು ಸಂಭ್ರಮಿಸುವ ರೀತಿಯೇ ವಿನೂತನ.

ಅಮೆರಿಕದಲ್ಲಿ ಮೈಸೂರು ಮೃಗಾಲಯ

ಅಮೆರಿಕದಲ್ಲಿ ಮೈಸೂರು ಮೃಗಾಲಯ

ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಮಾದರಿಯನ್ನು ನಿರ್ಮಿಸಿ, ಅಮೆರಿಕದಲ್ಲೂ ಮೈಸೂರು ಮೃಗಾಲಯವನ್ನು ತಂದಿಟ್ಟಿದ್ದಾರೆ ಉಷಾ ರಾವ್!

ಮನೆಯೊಳಗೆ ಆಟೋ ನಿಲ್ದಾಣ!

ಮನೆಯೊಳಗೆ ಆಟೋ ನಿಲ್ದಾಣ!

ಆಟೊ ನಿಲ್ದಾಣದ ಮಾದರಿ ನಿರ್ಮಿಸಿ, ಹಿನ್ನೆಲೆಯಲ್ಲಿ ಡಾ.ರಾಜ್ ಕುಮಾರ್ ಅವರ ಕಸ್ತೂರಿನಿವಾಸ ಮತ್ತು ಹಿಂದಿಯ ಸೂಪರ್ ಹಿಟ್ ಚಿತ್ರ ಶೋಲೆಯ ಪೋಸ್ಟರ್ ಹಾಕಿದ್ದು ಗಮನ ಸೆಳೆಯುತ್ತದೆ!

ಯೋಗಕ್ಕೂ ಮನ್ನಣೆ!

ಯೋಗಕ್ಕೂ ಮನ್ನಣೆ!

ಪತಂಜಲಿ ಯೋಗಶಾಲೆಯನ್ನು ನಿರ್ಮಿಸಿ, ಭಾರತೀಯರೇ ಪರಿಚಯಿಸಿದ ಯೋಗ ಪದ್ಧತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿರುವುದನ್ನು ನೆನಪಿಸಿದ್ದು ಶ್ಲಾಘನೀಯ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Navaratri dolls show by Usha Ram Prasad in Ohio America. Usha and her family moved to USA 25 years back, but they have not fogotten the tradition and keep dolls show during Navaratri every year. It is a pleasure to see beautiful dolls.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ